ರಾಜ್ಯದ ವಿವಿಧೆಡೆಗಳಿಂದ ವಿವಿಧ ಕ್ಷೇತ್ರಗಳಲ್ಲಿ ಪರಿಣಿತ ವೈದ್ಯರ ಸಹಭಾಗ !
ಮಂಗಳೂರು : ವೈದ್ಯಕೀಯ ಕ್ಷೇತ್ರದಲ್ಲಿ ಅಧ್ಯಾತ್ಮದ ಪಾತ್ರ ಮತ್ತು ಅನಿವಾರ್ಯತೆ, ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಪ್ರಗತಿಗಾಗಿ ಗುರುಕೃಪಾಯೋಗಾನುಸಾರ ಸಾಧನೆ ಮಾಡುವುದರ ಮಹತ್ವ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲು ಸನಾತನ ಸಂಸ್ಥೆಯ ವತಿಯಿಂದ ವೈದ್ಯರಿಗಾಗಿ ಮಂಗಳೂರಿನಲ್ಲಿ ೨ ದಿನಗಳ ಸಾಧನಾ ಶಿಬಿರವು ಇದೇ ೨೬ ಮತ್ತು ೨೭ ಆಗಸ್ಟ್ಟ್ ರಂದು ಸಂಪನ್ನವಾಯಿತು. ಈ ಶಿಬಿರದಲ್ಲಿ ರಾಜ್ಯದ ಬೆಂಗಳೂರು, ಬೀದರ್, ಧಾರವಾಡ, ಉಡುಪಿ, ಮಂಗಳೂರು, ಮಡಿಕೇರಿ ಜಿಲ್ಲೆಗಳಿಂದ ವಿವಿಧ ವೈದ್ಯಕೀಯ ಕ್ಷೇತ್ರಗಳಲ್ಲಿ ಪರಿಣಿತರಾಗಿ ವೃತ್ತಿ ನಿರ್ವಹಿಸುತ್ತಿರುವ ೨೦ ವೈದ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ, ಬೆಂಗಳೂರಿನ ಪ್ರತಿಷ್ಠಿತ ಚರ್ಮರೋಗ ತಜ್ಞರಾದ ವೈದ್ಯ ಕೃಪಾಶಂಕರ (MD Dermatology) ಹಾಗೂ ಮಂಗಳೂರಿನ ಅರಿವಳಿಕೆ ತಜ್ಞರಾದ ವೈದ್ಯ ಮಂಜುನಾಥ (MD Anesthesia) ಇವರು ದೀಪಪ್ರಜ್ವಲನೆಯ ಮೂಲಕ ಶಿಬಿರದ ಉದ್ಘಾಟನೆಯನ್ನು ಮಾಡಿದರು.
ಈ ವೇಳೆ ಆಧ್ಯಾತ್ಮಿಕ ಉಪಚಾರಗಳ ಮಹತ್ವ, ಒತ್ತಡಮುಕ್ತ ಜೀವನಕ್ಕಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಮಹತ್ವ, ಕರ್ಮಫಲ ನ್ಯಾಯದ ಮಹತ್ವ, ಮುಂಬರುವ ಆಪತ್ಕಾಲವನ್ನು ಎದುರಿಸಲು ಮಾಡಬೇಕಾದ ಸಿದ್ಧತೆಗಳ ಬಗ್ಗೆ ಸಂತರು ಮತ್ತು ಸನಾತನದ ಸಾಧಕರು ಮಾರ್ಗದರ್ಶನ ಮಾಡಿದರು.
ಆಧ್ಯಾತ್ಮಿಕ ಉಪಚಾರಗಳನ್ನು ಹೇಗೆ ಮಾಡಬೇಕು, ಪ್ರಾರ್ಥನೆ ಹೇಗೆ ಮಾಡಬೇಕು, ಸ್ವಭಾವ ದೋಷಗಳ ಪಟ್ಟಿ ಮಾಡಿ ಪ್ರತಿದಿನ ಅವುಗಳನ್ನು ದೂರಗೊಳಿಸಲು ಮಾಡಬೇಕಾದ ಪ್ರಯತ್ನಗಳು ಈ ವಿಷಯಗಳ ಕುರಿತು ಪ್ರಾಯೋಗಿಕ ಭಾಗ ಮತ್ತು ಗುಂಪು ಚರ್ಚೆಯ ಮೂಲಕ ತಿಳಿಸಲಾಯಿತು. ಎಲ್ಲ ವೈದ್ಯರು ಉತ್ಸಾಹದಿಂದ ಶಿಬಿರದ ಪೂರ್ಣ ಲಾಭ ಪಡೆದರು.
ಗಮನಾರ್ಹ ಅಂಶಗಳು :
೧. ಬೆಂಗಳೂರಿನ ಪ್ರತಿಷ್ಠಿತ ವೈದ್ಯ ದಂಪತಿಗಳು ಶಿಬಿರದ ೨ ದಿನಗಳೂ ಮೊಬೈಲ್ ಸ್ವಿಚ್ ಆಫ್ ಮಾಡಿ ಶಿಬಿರದ ಪೂರ್ಣ ಲಾಭ ಪಡೆಯಲು ಪ್ರಯತ್ಮ ಮಾಡಿದರು.
೨. ಓರ್ವ ವೈದ್ಯರು ಬೇರೆ ಬೇರೆ ಅಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಹೊಗಿದ್ದೇನೆ, ಆದರೆ ಈ ಶಿಬಿರವು ಕೇವಲ ಒಂದೇ ದಿನದಲ್ಲಿ ನನ್ನ ಜೀವನದಲ್ಲಿ ಬದಲಾವಣೆ ತಂದಿತು ಎಂದರು. ಅವರಲ್ಲಾದ ಬದಲಾವಣೆ ಗುರುತಿಸಿ ಅವರ ಮನೆಯವರು ನಾನೂ ನಿಮ್ಮ ಗುರುಗಳನ್ನು ಭೇಟಿ ಮಾಡಬೇಕು ಎಂದರು.
೩. ಓರ್ವ ವೈದ್ಯರು ಸಾಧನೆಯ ಮಹತ್ವ ತಿಳಿದ ಮೇಲೆ ಸನಾತನ ನಿರ್ಮಿತ ಅನೇಕ ಗ್ರಂಥಗಳನ್ನು ಖರೀದಿಸಿದರು.
೪. ವೈದ್ಯ ರಾಮಕೃಷ್ಣ ಚಾರಿ ಇವರು ೧೭ ಗಂಟೆಗಳ ಪ್ರವಾಸ ಮಾಡಿ ಬೀದರಿನಿಂದ ಮಂಗಳೂರಿನ ವರೆಗೆ ೧ ದಿನ ಶಿಬಿರಕ್ಕಾಗಿ ಬಂದಿದ್ದರು. ಕೊನೆಗೆ ನನ್ನ ಕ್ಷೇತ್ರದಲ್ಲಿದ್ದುಕೊಂಡು ಸಾಧನೆ, ಸೇವೆ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
೫. ಎಮ್.ಬಿ.ಬಿ.ಎಸ್ ವ್ಯಾಸಾಂಗ ಮಾಡುತ್ತಿರುವ ಓರ್ವ ವಿದ್ಯಾರ್ಥಿಗೆ ಶಿಬಿರದ ಮರುದಿನ ಪರೀಕ್ಷೆ ಇದ್ದರೂ ಶಿಬಿರಕ್ಕೆ ಬಂದು ಪೂರ್ಣ ಮುಗಿಯುವವರೆಗೆ ಇದ್ದು ಲಾಭ ಪಡೆದರು ಮತ್ತು ಶಿಬಿರಕ್ಕೆ ಬಂದ ನಂತರ ಪರೀಕ್ಷೆಯ ಒತ್ತಡವೂ ಕಡಿಮೆ ಆಯಿತು ಎಂದರು.
೬. ಓರ್ವ ವೈದ್ಯರು ನಾನು ಬೇರೆ ಬೇರೆ ಆಧ್ಯಾತ್ಮಿಕ ಸಂಸ್ಥೆಗೆ ಹೋಗುತ್ತಿದ್ದೆ, ಆದರೆ ನನಗೆ ಈ ಶಿಬಿರಕ್ಕೆ ಬಂದ ಮೇಲೆ ಸಾಧನೆ ಹೇಗೆ ಮಾಡಬೇಕು ? ಎಂದು ಸ್ಪಷ್ಟವಾಯಿತು ಎಂದರು.