ಮಣಿಪುರದಲ್ಲಿ ವಿಧಾನಸಭೆಯ ಅಧಿವೇಶನಕ್ಕೆ ಕುಕಿ ಸಂಘಟನೆಗಳ ವಿರೋಧ


ಇಂಫಾಲ (ಮಣಿಪುರ) – ಮಣಿಪುರದಲ್ಲಿ ಆಗಸ್ಟ್ 29 ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನವನ್ನು ಕುಕಿ ಸಂಘಟನೆಗಳು ವಿರೋಧಿಸಿವೆ. `ಇಂಡಿಜಿನಸ್ ಟ್ರೈಬಲ್ ಲೀಡರ್ಸ ಫೋರಂ’ (ಐ.ಟಿ.ಎಲ್.ಎಫ್.) ಮತ್ತು ‘ಕಮಿಟಿ ಆನ್ ಟ್ರೈಬಲ್ ಯುನಿಟಿ’ (ಸಿಟಿಯು) ಆಗಸ್ಟ್ 28 ರಂದು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರ ಸ್ಥಗಿತಗೊಂಡು ಪರಿಸ್ಥಿತಿ ಮೊದಲಿನಂತೆ ಆಗುವವರೆಗೆ ಆಗಸ್ಟ್ 29 ರಂದು ನಡೆಯಲಿರುವ ವಿಧಾನಸಭೆಯ ಅಧಿವೇಶನವನ್ನು ಸ್ಥಗಿತಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಆಗಸ್ಟ್ 29 ರಂದು ಅಧಿವೇಶನವನ್ನು ಕರೆಯುವುದು ಸೂಕ್ತವಲ್ಲ; ಏಕೆಂದರೆ ಸದ್ಯದ ಪರಿಸ್ಥಿತಿ ಕುಕಿ ಸಮುದಾಯದ ಶಾಸಕರ ಪಾಲ್ಗೊಳ್ಳುವಿಕೆಗೆ ಎಳ್ಳಷ್ಟೂ ಅನುಕೂಲಕರವಾಗಿಲ್ಲ ಎಂದು ಅವರ ಹೇಳಿಕೆಯಾಗಿದೆ.

ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಕರೆಯ ಮೇರೆಗೆ ರಾಜ್ಯಪಾಲ ಅನುಸೂಯಾ ಉಕೆ ಅವರು ಆಗಸ್ಟ್ 29 ರಿಂದ ವಿಧಾನಸಭೆ ಅಧಿವೇಶನವನ್ನು ಕರೆದಿದ್ದಾರೆ. ಈ ಅಧಿವೇಶನದಲ್ಲಿ ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಯಲಿದೆ.