ನೂಹದಲ್ಲಿ ವಿಶ್ವಹಿಂದೂ ಪರಿಷತ್ತಿನ ಇಂದಿನ ‘ಬ್ರಿಜಮಂಡಲ ಜಲಾಭಿಷೇಕ ಯಾತ್ರೆ’ಗೆ ಅನುಮತಿಗೆ ಹರಿಯಾಣಾ ಸರಕಾರದಿಂದ ನಿರಾಕರಣೆ !

  • ಭಜರಂಗದಳ, ವಿಶ್ವ ಹಿಂದೂ ಪರಿಷತ್ತು ಮತ್ತು ರೈತ ಮುಖಂಡ ರಾಕೇಶ್ ಟಿಕಾಯತ್ ಇವರಿಂದ ಯಾತ್ರೆ ಕೈಗೊಳ್ಳಲು ದೃಢ

  • ಕರ್ಫ್ಯೂ ಗೆ ಆದೇಶ ಮತ್ತು ಇಂಟರ್ನೆಟ್ ಸ್ಥಗಿತ

ನೂಹ್ (ಹರಿಯಾಣ) – ಇಲ್ಲಿ ವಿಶ್ವ ಹಿಂದೂ ಪರಿಷತ್ ಆಗಸ್ಟ್ 28 ರಂದು ‘ಬ್ರಿಜಮಂಡಲ ಜಲಾಭಿಷೇಕ ಯಾತ್ರೆ’ ನಡೆಸುವುದಾಗಿ ಈಗಾಗಲೇ ಘೋಷಿಸಿದೆ. ಅದಕ್ಕೂ ಮೊದಲು ಇಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದ್ದು, ಕರ್ಫ್ಯೂ ವಿಧಿಸಲಾಗಿದೆ, ಹಿಂದಿನ ಯಾತ್ರೆಯಲ್ಲಿ ಮತಾಂಧ ಮುಸ್ಲಿಮರು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹರಿಯಾಣಾ ಸರಕಾರದಿಂದ ಯಾತ್ರೆಗೆ ಇನ್ನೂ ಅನುಮತಿ ನೀಡಿಲ್ಲ; ಆದರೆ ಯಾತ್ರೆ ಕೈಗೊಳ್ಳಲು ನಮಗೆ ಯಾರ ಅನುಮತಿಯೂ ಬೇಕಾಗಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್ ಘೋಷಿಸಿದೆ. ಇದೇ ವೇಳೆ ರೈತ ಮುಖಂಡ ರಾಕೇಶ್ ಟಿಕಾಯತ್ ಕೂಡ ‘ಯಾತ್ರೆ ನಡೆಸಲಾಗುವುದು’ ಎಂದು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮಾತನಾಡುತ್ತಾ, ಈ ಹಿಂದೆ ನೂಹ್ ನಲ್ಲಿ ನಡೆದ ಹಿಂಸಾಚಾರದ ನಂತರ ಇಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರಕಾರದ ಕರ್ತವ್ಯವಾಗಿದೆ ಆದ್ದರಿಂದ ಭಕ್ತರು ಇಲ್ಲಿ ಯಾತ್ರೆ ನಡೆಸುವ ಬದಲು ಸ್ಥಳೀಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಬೇಕು ಎಂದು ಹೇಳಿದ್ದಾರೆ.

ಪೊಲೀಸರು ರಾಜ್ಯದ ಗಡಿಯಲ್ಲಿ ಯಾತ್ರಾರ್ಥಿಗಳನ್ನು ತಡೆಯಲು ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ. ಇದಲ್ಲದೇ ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಲಾಗುತ್ತಿದೆಯೇ? ಎನ್ನುವ ಬಗ್ಗೆಯೂ ನಿಗಾ ವಹಿಸಲಾಗಿದೆ.

ಪ್ರತಿ ಜಿಲ್ಲೆಯಲ್ಲಿ ಬಜರಂಗ ದಳ ಮತ್ತು ವಿಶ್ವಹಿಂದೂ ಪರಿಷತ್ತು ಯಾತ್ರೆ ನಡೆಸಲಿದೆ

ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ತು ಹರಿಯಾಣ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಜಲಾಭಿಷೇಕ ಯಾತ್ರೆ ನಡೆಸುವುದಾಗಿ ಘೋಷಿಸಿದೆ. ಇದರಲ್ಲಿ ನೂಹ ಕೂಡ ಸೇರಿದೆ. ಈ ಸಂಘಟನೆಗಳು ‘ನೂಹನ ನಲ್ಹಡ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಬದಲು ಸ್ಥಳೀಯ ಸ್ಥಳಗಳಲ್ಲಿ ಯಾತ್ರೆ ನಡೆಸಬೇಕು’ ಎಂದು ತಮ್ಮ ಕಾರ್ಯಕರ್ತರಿಗೆ ಮನವಿ ಮಾಡಿವೆ.

ಸಂಪಾದಕೀಯ ನಿಲುವು

ಹರಿಯಾಣದಲ್ಲಿ ಭಾಜಪ ಸರಕಾರವಿದ್ದಾಗ ಹಿಂದೂಗಳ ಧಾರ್ಮಿಕ ಯಾತ್ರೆಯ ಮೇಲೆ ದಾಳಿ ನಡೆಯಿತು ಮತ್ತು ಪುನಃ ಹಿಂದೂಗಳು ಯಾತ್ರೆ ಕೈಗೊಂಡಾಗ ಅವರಿಗೆ ಅನುಮತಿ ನಿರಾಕರಿಸಲಾಗುತ್ತದೆ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !