ಚಂದ್ರನ ದಕ್ಷಿಣ ಧ್ರುವದ ಮೇಲೆ ಪ್ರಜ್ಞಾನ್’ ರೋವರ್ 12 ಮೀಟರ್ ನಡೆದಿದೆ !

ಬೆಂಗಳೂರು – ‘ಚಂದ್ರಯಾನ-3’ ರ ‘ವಿಕ್ರಮ್ ಲ್ಯಾಂಡರ್’ನಿಂದ ಹೊರಬಂದ ‘ಪ್ರಗ್ಯಾನ್ ರೋವರ್’ ಇದುವರೆಗೆ 12 ಮೀಟರ್ ನಡೆದಿದೆಯೆಂದು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ ಮಾಹಿತಿ ನೀಡಿದರು. ಈ ಸಂದರ್ಭದ ಒಂದು ವಿಡಿಯೋವನ್ನೂ ‘ಇಸ್ರೋ’ ‘ಎಕ್ಸ್’ ಮೂಲಕ (ಟ್ವಿಟರ್ ಮೂಲಕ) ಪ್ರಸಾರ ಮಾಡಿದೆ. ನಿಯೋಜನೆಯಂತೆ ರೋವರ್ ಕಾರ್ಯನಿರ್ವಹಿಸುತ್ತಿದೆ ಎಂದು ಸೋಮನಾಥ್ ತಿಳಿಸಿದರು. ರೋವರ್ ಒಟ್ಟು 500 ಮೀಟರ್ ಅಂದರೆ ಅರ್ಧ ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಈಗ ಎರಡು ‘ಪೇಲೋಡ್’ (ಯಂತ್ರಗಳು) ಸಹ ಸಕ್ರಿಯಗೊಂಡಿವೆ. ಈ ಇಬ್ಬರು ಚಂದ್ರಭೂಮಿಯಿಂದ ವಿವಿಧ ರೀತಿಯ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ‘ವಿಕ್ರಮ್ ಲ್ಯಾಂಡರ್’ಗೆ ಕಳುಹಿಸುತ್ತಾರೆ ಮತ್ತು ಲ್ಯಾಂಡರ್ ಆ ಮಾಹಿತಿಯನ್ನು ಭೂಮಿಯ ಮೇಲಿನ ‘ಇಸ್ರೋ’ ವಿಜ್ಞಾನಿಗಳಿಗೆ ಕಳುಹಿಸುತ್ತದೆ.