‘ಬ್ರಿಕ್ಸ್’ ಸಂಘಟನೆಯಲ್ಲಿ ಇನ್ನೂ 6 ದೇಶಗಳು ಸೇರ್ಪಡೆ!

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ) – ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಈ 5 ದೇಶಗಳ ‘ಬ್ರಿಕ್ಸ್'(ಬಿ.ಆರ್.ಐ.ಸಿ.ಎಸ್.) ಸಂಘಟನೆಯಲ್ಲಿ ಇನ್ನೂ 6 ದೇಶಗಳನ್ನು ಸಮಾವೇಶಗೊಳಿಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ 15ನೇ ‘ಬ್ರಿಕ್ಸ್’ ಸಂಘಟನೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ರಾಮಫೋಸಾ ಇವರು ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಪಸ್ಥಿತರಿದ್ದರು. ಜನವರಿ 1, 2024 ರಿಂದ ಇರಾನ್, ಅರ್ಜೆಂಟೀನಾ, ಇಥಿಯೋಪಿಯಾ, ಈಜಿಪ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಸೌದಿ ಅರೇಬಿಯಾ ಈ ದೇಶಗಳನ್ನು ಸೇರಿಸಲಾಗುತ್ತದೆ. ಇದರಿಂದ ಈಗ ಈ ಸಂಸ್ಥೆಯಲ್ಲಿರುವ ದೇಶಗಳ ಸಂಖ್ಯೆ 11 ಆಗಲಿದೆ. ಹೊಸದಾಗಿ ಭಾಗವಹಿಸುವ ದೇಶಗಳು ನಿರ್ಣಯ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ. ಈ ದೇಶಗಳ ಸಮಾವೇಶದ ಬಳಿಕ ‘ಬ್ರಿಕ್ಸ್’ ನ ಹೆಸರನ್ನು ಬದಲಾಯಿಸಿ ‘ಬ್ರಿಕ್ಸ್ ಪ್ಲಸ್’ ಎಂದು ಮಾಡಲಾಗಿದೆ.

40 ಅಥವಾ ಅದಕ್ಕಿಂತ ಹೆಚ್ಚಿನ ದೇಶಗಳು ಬ್ರಿಕ್ಸ್ ಸಂಘಟನೆಯ ಭಾಗವಾಗಲು ಬಯಸುತ್ತಿವೆ. ಈ ದೇಶಗಳನ್ನು ಸೇರಿಸಬೇಕೋ ಬೇಡವೋ ? ಎಂದು ಬ್ರಿಕ್ಸ್ ಸಂಘಟನೆಯಲ್ಲಿ ಚರ್ಚೆ ನಡೆದಿದೆ. ಅದರ ನಂತರ ಮೇಲಿನ 6 ದೇಶಗಳನ್ನು ಸೇರಿಸಲಾಯಿತು. ಭಾರತ ಮತ್ತು ರಷ್ಯಾದ ಬೆಂಬಲದಿಂದಾಗಿ ಅವರನ್ನು ಸೇರಿಸಲಾಯಿತು. ಚೀನಾ ಬೆಂಬಲಿಸುವ ಕೆಲವು ದೇಶಗಳನ್ನು ಮಾತ್ರ ಸೇರಿಸಿ ಕೊಳ್ಳಲು ನಿರಾಕರಿಸಲಾಗಿದೆ.