|
ಅಹಲ್ಯಾನಗರ – ದಲ್ಲಾಳಿಗಳ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದೊಳಗೆ ನುಸುಳಿದ್ದ 4 ಬಾಂಗ್ಲಾದೇಶಿ ಪ್ರಜೆಗಳನ್ನು ನಾಸಿಕ್ ಮತ್ತು ಅಹಲ್ಯಾನಗರದಿಂದ ಉಗ್ರ ನಿಗ್ರಹ ದಳದವರು ಅಹಲ್ಯಾನಗರ ನಗರದ ಬಳಿ ಬಂಧಿಸಿದ್ದಾರೆ. ಮೊಹಿಯುದ್ದೀನ್ ನಜೀಮ್ ಶೇಖ್ (36 ವರ್ಷ), ಶಹಾಬುದ್ದೀನ್ ಜಹಾಂಗೀರ್ ಖಾನ್ (27 ವರ್ಷ), ದಿಲಾವರ್ ಖಾನ್ ಸಿರಾಜುಲ್ಲಾ ಖಾನ್ (27 ವರ್ಷ) ಮತ್ತು ಶಹಾಪ್ರಾನ್ ಜಹಾಂಗೀರ್ ಖಾನ್ (20 ವರ್ಷ) ಎಂದು ಗುರುತಿಸಲಾಗಿದೆ. ಈ ನಾಲ್ವರೊಂದಿಗೆ ನಕಲಿ ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್, ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ, ಪಾಸ್ ಬುಕ್ ಇತ್ಯಾದಿಗಳನ್ನು ತಯಾರಿಸಿ ಕೊಟ್ಟ ಬಂಗಾಲ ಮತ್ತು ಬಾಂಗ್ಲಾದೇಶದ 10 ಜನರ ವಿರುದ್ಧ ನಗರ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಸಲ್ ಎಜಾಜ್ ಶೇಖ್, ಸೊಹೆಲ್, ಮಾಣಿಕ ಖಾನ್, ನೋಮಾನ್, ಅಬ್ದುಲ್ ಕಾದರ್, ಕೋಬೀರ್ ಮಂಡಲ್ ಈ 10 ಮಂದಿಯಲ್ಲಿ ಕೆಲವು ಆರೋಪಿಗಳನ್ನು ಗುರುತಿಸಲಾಗಿದೆ. (ಈ ಸಂಪೂರ್ಣ ಗುಂಪಿನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ! – ಸಂಪಾದಕರು)
1. ಮೊಹಿಯುದ್ದೀನ್ ಶೇಖ್ ನನ್ನು 10 ರಿಂದ 11 ವರ್ಷಗಳ ಹಿಂದೆ ಆತನ ಗುರುತಿನ ರಾಸಲ್ ಎಜಾಜ್ ಶೇಖ್ ಎಂಬಾತ ಬಾಂಗ್ಲಾದೇಶದಿಂದ ಹಸನಾಬಾದ್ ಮೂಲಕ ಕಾಲ್ನಡಿಗೆಯಲ್ಲಿ ಬಂಗಾಳಕ್ಕೆ ಅಕ್ರಮ ರೀತಿಯಲ್ಲಿ ಕರೆದೊಯ್ದನು. ಅಲ್ಲಿಂದ ರೈಲಿನ ಮೂಲಕ ಕಲ್ಯಾಣಕ್ಕೆ ಕರೆ ತಂದನು. ಅಂದಿನಿಂದ ಅವನು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾನೆ. ಅವನು ಕಳೆದ 7 -8 ವರ್ಷಗಳಿಂದ ಖಂಡಾಲಾದಲ್ಲಿ (ಅಹಲ್ಯಾನಗರ) ಇದ್ದಾನೆ. ಶೇಖ್ ನು ಭಾರತವನ್ನು ಪ್ರವೇಶಿಸಲು ದಲ್ಲಾಳಿಯಾಗಿದ್ದ ರಾಸಲ್ ಎಂಬಾತನಿಗೆ 10,000 ರೂಪಾಯಿಗಳು ಕೊಟ್ಟಿದ್ದನು.
2. ಶಹಾಬುದ್ದೀನ್ ಜಹಾಂಗೀರ್ ಖಾನ್ ನನ್ನು ಸೊಹೆಲ 6 ರಿಂದ7 ವರ್ಷಗಳ ಹಿಂದೆ ಬಾಂಗ್ಲಾದೇಶದಿಂದ ಅಗರ್ತಲಾಕ್ಕೆ ಅಕ್ರಮವಾಗಿ ಕರೆತಂದಿದ್ದನು. ಅಲ್ಲಿಂದ ಕೋಲ್ಕತ್ತಾಗೆ ಕರೆತಂದು ನಂತರ ಕಲ್ಯಾಣ್ಗಗೆ ಕರೆತಂದನು. ಇದಕ್ಕೆ ಪ್ರತಿಯಾಗಿ ಸೊಹೈಲ್ ಖಾನ್ 17 ಸಾವಿರ ರೂಪಾಯಿಗಳು ಕೊಟ್ಟಿದ್ದನು. ಕಳೆದ 8 ತಿಂಗಳಿಂದ ಖಂಡಾಲಾ (ಅಹಲ್ಯಾನಗರ) ದಲ್ಲಿ ವಾಸಿಸುತ್ತಿದ್ದಾನೆ.
3. ದಿಲಾವರಖಾನ್ ಸಿರಾಜುಲ್ಲಾ ಖಾನ್ ಅವನನ್ನು 3 ವರ್ಷಗಳ ಹಿಂದೆ ಮಾಣಿಕ್ ಖಾನ್ ಬಾಂಗ್ಲಾದೇಶದಿಂದ ಅಗರ್ತಲಾಗೆ ಮತ್ತು ಅಲ್ಲಿಂದ ಕಲ್ಯಾಣಗೆ ಕರೆತಂದಿದ್ದನು. ಇದಕ್ಕೆ ಪ್ರತಿಯಾಗಿ 10 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದನು. ಕಳೆದ 3 ತಿಂಗಳಿಂದ ಅವನು ಖಂಡಾಲಾದಲ್ಲಿ ವಾಸಿಸುತ್ತಿದ್ದಾನೆ.
4. ಶಹಪ್ರಾನ್ ಜಹಾಂಗೀರ್ ಖಾನ್ ಎಂಬಾತ 1 ವರ್ಷದ ಹಿಂದೆ ಬಾಂಗ್ಲಾದೇಶದಿಂದ ಅಗರ್ತಲಾಕ್ಕೆ ನೊಮನ್ ಅಕ್ರಮವಾಗಿ ಕರೆತಂದು ಅಲ್ಲಿಂದ ರೈಲಿನಲ್ಲಿ ಕಲ್ಯಾಣ್ ಗೆ ಕರೆತಂದಿದ್ದನು ಪ್ರತಿಯಾಗಿ ಖಾನ್ ಅವನಿಗೆ 15 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದನು. ಅಂದಿನಿಂದ ಅವನು ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದಾನೆ. ಕಳೆದ 6 ತಿಂಗಳಿಂದ ಖಂಡಾಲಾದಲ್ಲಿ ನೆಲೆಸಿದ್ದಾನೆ.
ಸಂಪಾದಕೀಯ ನಿಲುವುನುಸುಳುಕೋರರ ದೇಶ ಭಾರತ ! ನುಸುಳುಕೋರರು ನಕಲಿ ದಾಖಲೆಗಳನ್ನು ತಯಾರಿಸಿ ಭಾರತವನ್ನು ಪ್ರವೇಶಿಸುತ್ತಾರೆ ಮತ್ತು ಪೊಲೀಸರಿಗೆ ಅಥವಾ ಆಡಳಿತಕ್ಕೆ ಸಣ್ಣ ಸುಳಿವೂ ಸಿಗುವುದಿಲ್ಲ. ಇದು ಖೇದಕರ ಸಂಗತಿ ! ಇಂತಹ ನುಸುಳುಕೋರರನ್ನು ಭಾರತದಿಂದ ಹೊರಹಾಕಬೇಕು ! |