‘ಬ್ರಿಕ್ಸ್’ ದೇಶಗಳ ಶೃಂಗಸಭೆಯನ್ನು ಸಂಬೋಧಿಸಿದರು !
(ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ಪ್ರಮುಖ ರಾಷ್ಟ್ರಗಳ ಗುಂಪನ್ನು ‘ಬ್ರಿಕ್ಸ್’ ಹೆಸರಿನಿಂದ ಕರೆಯಲಾಗುತ್ತದೆ.)
ಜೋಹಾನ್ಸ್ ಬರ್ಗ್ (ದಕ್ಷಿಣ ಆಫ್ರಿಕಾ) – ಜಾಗತಿಕ ಅರ್ಥವ್ಯವಸ್ಥೆ ಹಿಂಜರಿತದ ಹಾದಿಯಲ್ಲಿರುವಾಗ ‘ಬ್ರಿಕ್ಸ್’ ದೇಶಗಳು ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಇಂತಹದರಲ್ಲಿಯೇ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಅರ್ಥ ವ್ಯವಸ್ಥೆಯಾಗಿದೆ. ಶೀಘ್ರದಲ್ಲಿಯೇ ಭಾರತ 5 ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂಬರುವ ದಿನಗಳಲ್ಲಿ ಭಾರತ ವಿಶ್ವದ ‘ಪ್ರಗತಿಯ ಯಂತ್ರ’ ಆಗಲಿದೆ. ಏಕೆಂದರೆ, ವಿಪತ್ತು ಮತ್ತು ಸಂಕಷ್ಟದ ಕಾಲವನ್ನು ಭಾರತವು ಆರ್ಥಿಕ ಸುಧಾರಣೆಗಳ ರೂಪದಲ್ಲಿ ಅವಕಾಶವನ್ನಾಗಿ ಪರಿವರ್ತಿಸಿದೆ ಎಂದು ಪ್ರಧಾನಿ ಮೋದಿಯವರು ಹೇಳಿದ್ದಾರೆ. ಇಲ್ಲಿ ಆಯೋಜಿಸಲಾಗಿದ್ದ ‘ಬ್ರಿಕ್ಸ್’ದೇಶಗಳ ಶೃಂಗಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
1. ಈ ವರ್ಷದ ಬ್ರಿಕ್ಸ್ ದೇಶಗಳ ಶೃಂಗಸಭೆ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದು, ಪ್ರಧಾನಿ ಮೋದಿಯವರು ಆಗಸ್ಟ್ 22 ರಂದು ಜೋಹಾನ್ಸ್ ಬರ್ಗ್ ಗೆ ತೆರಳಿದ್ದರು. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಪ್ರಧಾನಿ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
2. ಪ್ರಧಾನಿ ಮೋದಿಯವರು ಇತರೆ ಬ್ರಿಕ್ಸ ನಾಯಕರೊಂದಿಗೆ ಜಾಗತಿಕ ಅಭಿವೃದ್ಧಿ ಮತ್ತು ಸವಾಲುಗಳಿಗೆ ಪರಿಹಾರಗಳ ಕುರಿತು ವಿಚಾರ ವಿನಿಮಯ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿ ಮಾಡುವರೇ ಎಂಬ ಬಗ್ಗೆ ಸಂಶಯವಿದೆ.
3. ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ಆರೋಪದ ಕಾರಣದಿಂದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಜೋಹಾನ್ಸ್ಬರ್ಗ್ಗೆ ಆಹ್ವಾನಿಸಲಾಗಿಲ್ಲ. ಆದರೆ ಅವರು ಆನ್ಲೈನ್ ಮಾಧ್ಯಮದಿಂದ ಪರಿಷತ್ತಿನಲ್ಲಿ ಭಾಗವಹಿಸಲಿದ್ದಾರೆ.
(ಸೌಜನ್ಯ: MIRROR NOW)