ಮನವಿ ಸ್ವೀಕರಿಸಬಾರದೆಂದು ಶಾಲಾ ಸುಧಾರಣಾ ಸಮಿತಿಯ ಮತಾಂಧ ಸದಸ್ಯನಿಂದ ಮುಖ್ಯೋಪಾಧ್ಯಾಯರ ಮೇಲೆ ಒತ್ತಡ

ಮಡಿಕೇರಿಯ ನಾಪೋಕ್ಲುವಿನ ಸರಕಾರಿ ಶಾಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಷ್ಟ್ರಧ್ವಜದ ಗೌರವ ಕಾಪಾಡುವ ಬಗ್ಗೆ ಮನವಿ ನೀಡಲು ಯತ್ನ

ನಾಪೋಕ್ಲು (ಮಡಿಕೇರಿ) – ಧರ್ಮಪ್ರೇಮಿಗಳು ಆಗಸ್ಟ್ ೧೦ ರಂದು ಇಲ್ಲಿನ ಸರಕಾರಿ ಪ್ರೌಢ ಶಾಲೆಗೆ ‘ರಾಷ್ಟ್ರಧ್ವಜದ ಮಾನ ಕಾಪಾಡಿ’ ವಿಷಯದಲ್ಲಿ ಮನವಿ ನೀಡಲು ತೆರಳಿದ್ದರು. ಆಗ ಮುಖ್ಯೋಪಾಧ್ಯಾಯರ ಪಕ್ಕದಲ್ಲಿ ಶಾಲಾ ಸುಧಾರಣಾ ಸಮಿತಿ (ಎಸ್.ಡಿ.ಎಂ.ಸಿ.) ಸದಸ್ಯರಾದ ಮುಸಲ್ಮಾನರೊಬ್ಬರು ಇದ್ದರು. ಅವರು ಮನವಿಯ ತಲೆಬರಹವಾದ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿ’ ಎಂಬುದನ್ನು ನೋಡಿ ಸಿಡಿಮಿಡಿಗೊಂಡರು. ‘ಇದು ಸರಕಾರಿ ಶಾಲೆ. ಇಲ್ಲಿ ಇವುಗಳಿಗೆ ಅವಕಾಶವಿಲ್ಲ, ಎಂದರು. ಆಗ ಅಲ್ಲಿದ್ದ ಧರ್ಮಪ್ರೇಮಿಗಳು, ‘ಇದು ರಾಷ್ಟ್ರಧ್ವಜದ ಗೌರವ ಕಾಪಾಡುವ’ ವಿಷಯವಿದೆ. ಮಕ್ಕಳಿಗೆ ಆವಶ್ಯಕವಾಗಿದೆ’, ಎಂದರು. ಅದಕ್ಕೆ ಆ ಮತಾಂಧ ಸದಸ್ಯನು, ‘ನಮ್ಮಲ್ಲಿ ‘ಡಿ.ಎಡ್.’ (ಡಿಪ್ಲೊಮಾ ಇನ್ ಎಜ್ಯುಕೇಶನ್) ಓದಿದ ಶಿಕ್ಷಕರಿದ್ದಾರೆ. ನಮಗಿದರ ಆವಶ್ಯಕತೆ ಇಲ್ಲ, ಎಂದು ಹೇಳಿ ‘ಮನವಿ ಸ್ವೀಕರಿಸದಂತೆ’ ಮುಖ್ಯೋಪಾಧ್ಯಾಯರಿಗೆ ತಾಕೀತು ಮಾಡಿದರು, ಇದರಿಂದ ಆ ಮುಖ್ಯೋಪಾಧ್ಯಾಯರು ಮನವಿ ಸ್ವೀಕರಿಸಲಿಲ್ಲ. ಅಲ್ಲದೇ ಆ ಮತಾಂಧರು ಪಕ್ಕದ ಇನ್ನೊಂದು ಶಾಲೆಯ ಮುಖ್ಯೋಪಾಧ್ಯಾಯರಿಗೆ ದೂರವಾಣಿ ಕರೆ ಮಾಡಿ ‘ನೀವೂ ಇವರ ಮನವಿ ಸ್ವೀಕರಿಸಬೇಡಿ’ ಎಂದರು

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಇಂತಹ ೨ ಘಟನೆಗಳು ನಡೆದಿದ್ದು ಜಾತ್ಯತೀತ ದೇಶದಲ್ಲಿ ಇಸ್ಲಾಮಿಕ್ ಆಡಳಿತವಿದೆಯೇ ಎಂದೆನಿಸುತ್ತಿದೆ. ಕಾಂಗ್ರೆಸ್ ಅನ್ನು ಆರಿಸಿದ ಹಿಂದೂಗಳಿಗೆ ಇದು ಒಪ್ಪಿಗೆ ಇದೆಯೇ ?