ಮಣಿಪುರದಿಂದ ಮ್ಯಾನ್ ಮಾರ್ ನಲ್ಲಿ ಆಶ್ರಯ ಪಡೆದಿದ್ದ 200 ಕ್ಕೂ ಹೆಚ್ಚು ಮೈತೆಯಿಗಳು ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿದರು !

ಇಂಫಾಲ (ಮಣಿಪುರ) – ಮಣಿಪುರ ರಾಜ್ಯದಲ್ಲಿ ಕಳೆದ ಮೂರೂವರೆ ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರದಿಂದಾಗಿ ನೆರೆಯ ರಾಷ್ಟ್ರವಾದ ಮ್ಯಾನ್ ಮಾರ್ ನಲ್ಲಿ ಆಶ್ರಯ ಪಡೆದಿರುವ ಮೈತೆಯಿ ಹಿಂದೂ ಸಮುದಾಯದ 200 ಕ್ಕೂ ಹೆಚ್ಚು ನಾಗರಿಕರು ಪುನಃ ರಾಜ್ಯಕ್ಕೆ ಮರಳಿದ್ದಾರೆ, ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಹ್ ಮಾಹಿತಿ ನೀಡಿದ್ದಾರೆ. ಈ ಸಮಯದಲ್ಲಿ ಅವರನ್ನು ಮರಳಿ ಕರೆತರುವಲ್ಲಿ ಸೇನೆ ನಿರ್ವಹಿಸಿರುವ ಪಾತ್ರವನ್ನು ಅವರು ಶ್ಲಾಘಿಸಿದರು.