ರಾಜ್ಯದಲ್ಲಿ ಸ್ವದೇಶಿ ನಿರ್ಮಿತ ‘ತಪಸ್’ ಡ್ರೋನ್ ಪರೀಕ್ಷಣೆಯ ವೇಳೆ ಪತನ !

ಚಿತ್ರದುರ್ಗ – ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯು (‘ಡಿ.ಆರ್.ಡಿ.ಒ.’ನ) ಅಭಿವೃದ್ಧಿಪಡಿಸಿದ ಸ್ವದೇಶಿ ನಿರ್ಮಿತ ‘ತಪಸ್’ ಡ್ರೋನ್ ಚಿತ್ರದುರ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಪರೀಕ್ಷೆಯ ವೇಳೆ ಪತನಗೊಂಡಿದೆ. ‘ಅಪಘಾತದ ಹಿಂದಿನ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ’, ಎಂದು ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2016 ರಿಂದ ‘ತಪಸ್’ ಉತ್ಪಾದನೆಯನ್ನು ಪ್ರಾರಂಭಿಸಲಾಗಿದೆ. ಕಣ್ಗಾವಲು ಇಡಲು ಮತ್ತು ಪ್ರಾಸಂಗಿಕ ದಾಳಿ ನಡೆಸಲು ಈ ಡ್ರೋನ್ ಸಮರ್ಥವಾಗಿದೆ. ಶೀಘ್ರದಲ್ಲೇ ಈ ಡ್ರೋನ್ ಅನ್ನು ಎಲ್ಲಾ ಮೂರು ಸೇನಾದಳಗಳಲ್ಲಿ ಸಮಾವೇಶಗೊಳಿಸುವುದರಲ್ಲಿದ್ದು, ಅದಕ್ಕಾಗಿ ಅದರ ಪ್ರಯೋಗಗಳು ನಡೆಯುತ್ತಿವೆ. ಈ ಡ್ರೋನ್ 224 ಕಿಮೀ ವೇಗದಲ್ಲಿ ಸುಮಾರು 1 ಸಾವಿರ ಕಿಮೀ ದೂರದವರೆಗೆ ಹಾರಬಲ್ಲದು. ಇದು 24 ಗಂಟೆಗಳ ಕಾಲ ತಡೆರಹಿತವಾಗಿ ಹಾರುವ ಸಾಮರ್ಥ್ಯ ಹೊಂದಿದ್ದು, ನೆಲದಿಂದ ಗರಿಷ್ಠ 35 ಸಾವಿರ ಅಡಿ ಎತ್ತರದಲ್ಲಿ ಹಾರಬಲ್ಲದು.