ಹಿಂದೂವಾಗಿರುವುದರ ನೋವು !

ಕರ್ನಾಟಕ ರಾಜ್ಯದಲ್ಲಿ ‘ಹಿಂದೂ’ ಶಬ್ದವನ್ನು ಉಚ್ಚರಿಸುವುದು, ಈಗ ಘೋರ ಅಪರಾಧವಾಗಿದೆ. ರಾಜ್ಯದ ಮೂಡುಬಿದ್ರೆಯಲ್ಲಿ ಸ್ವಾತಂತ್ರೋತ್ಸವ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಒಂದು ಶಾಲಾ ಕಾರ್ಯಕ್ರಮದಲ್ಲಿ ‘ಹಿಂದೂ ಜಾಗರಣ ವೇದಿಕೆ’ಯ ಕಾರ್ಯಕರ್ತೆ’ ಎಂದು ಮಹಿಳೆಯರಿಬ್ಬರನ್ನು ಪರಿಚಯಿಸಿದ್ದರಿಂದ ವ್ಯಾಸಪೀಠದಲ್ಲಿದ್ದ ಮಾಜಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಸಲಹೆಗಾರ ಅಬ್ದುಲ್ ಕರೀಂ ಅವರ ಪಿತ್ತ ನೆತ್ತಿಗೇರಿತು. ಹಾಗಾಗಿ ಅವರು ವೇದಿಕೆಯಿಂದ ಹೊರಟು ಹೋದರು. ಅವರ ಕೋಪವನ್ನು ಶಮನಗೊಳಿಸಲು ಪ್ರಯತ್ನಿಸಲಾಯಿತು; ಆದರೆ ಪ್ರಯತ್ನಗಳು ವ್ಯರ್ಥವಾದವು. ಖೇದದ ವಿಷಯವೆಂದರೆ, ಶಿಕ್ಷಣಾಧಿಕಾರಿಗಳು ಕರೀಂ ಬಗ್ಗೆ ತಳೆದಿರುವ ಮೃದು ನಿಲುವು ! ಅವರು ಮುಖ್ಯೋಪಾಧ್ಯಾಯರಿಗೆ ಬುದ್ಧಿಮಾತು ಹೇಳುತ್ತಾ ‘ಮಹಿಳಾ ಕಾರ್ಯಕರ್ತೆಯರ ಕೇವಲ ಹೆಸರನ್ನಷ್ಟೇ ಉಚ್ಚರಿಸಬೇಕಿತ್ತು’ ಎಂದು ತಿಳಿಸಿದರು. ಕರೀಂ ಇವರಿಗೆ ಕೋಪಬರಲು ಕಾರಣವೇನು ? ಭಾರತದಲ್ಲಿ ಅನೇಕ ಇಸ್ಲಾಮಿಕ್ ಸಂಘಟನೆಗಳಿವೆ. ಆ ಸಂಘಟನೆಗಳ ಹೆಸರುಗಳಲ್ಲಿ ‘ಇಸ್ಲಾಂ’, ‘ಮುಸಲ್ಮಾನ’ ಎಂಬ ಪದಗಳಿವೆ. ಸಂಘಟನೆಯಲ್ಲಿರುವ ಈ ಶಬ್ದಗಳ ಮೇಲೆ ಹಿಂದೂಗಳು ಈ ರೀತಿ ಆಕ್ಷೇಪ ವ್ಯಕ್ತಪಡಿಸುತ್ತಾರೆಯೇ ? ಹಿಂದೂಗಳು ಮುಸಲ್ಮಾನರ ಹಿಂದೂವಿರೋಧಿ ಕೃತ್ಯಗಳನ್ನು ಈ ರೀತಿ ಆಕ್ಷೇಪಿಸಲು ನಿರ್ಧರಿಸಿದರೆ, ವರ್ಷದ ೩೬೫ ದಿನಗಳು ಕಡಿಮೆ ಬೀಳುವವು. ಕರಿಂ ಕೃತ್ಯವು ಅವರ ಮತಾಂಧತೆಯನ್ನು ತೋರಿಸುತ್ತವೆ. ಹಾಗೆ ನೋಡಿದರೆ, ಕರೀಂ ಇವರಿಗೆ ಸಿಕ್ಕಿದ ಶಿಕ್ಷಣದಂತೆಯೇ ಅವರು ವರ್ತಿಸಿದರು. ಆದುದರಿಂದ ಈ ವಿಷಯದಲ್ಲಿ ಆಶ್ಚರ್ಯಪಡುವಂತಹದ್ದೇನಿಲ್ಲ. ಆದರೆ ಶಿಕ್ಷಣಾಧಿಕಾರಿಗಳ ಮಾನಸಿಕತೆಯ ಬಗ್ಗೆ ಆಶ್ಚರ್ಯವೆನಿಸುತ್ತದೆ.

ಭಾರತೀಯ ಸಂವಿಧಾನವು ‘ಜಾತ್ಯತೀತ’ ಎಂದು ಹಿಂದೂಗಳಿಗೆ ಯಾವಾಗಲೂ ಹೇಳಲಾಗುತ್ತದೆ. ಒಂದು ವೇಳೆ ಸಂವಿಧಾನವು ಜಾತ್ಯತೀತವಾಗಿದ್ದರೆ, ಅದು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವಂತೂ ನೀಡಿದೆ. ಅದನ್ನೂ ಮೀರಿ ಯಾವುದಾದರೊಂದು ಸಂಘಟನೆಯು ಸಾಮಾಜಿಕ ಪ್ರಜ್ಞೆಯಿಂದ ತನ್ನ ಹೆಸರನ್ನು ನಿರ್ಧರಿಸಬಹುದು. ಆದ್ದರಿಂದ ಸಂಘಟನೆಯ ಹೆಸರಿನಲ್ಲಿ ‘ಹಿಂದೂ’ ಇರುವ ಕಾರಣದಿಂದ ಅದರಲ್ಲಿ ಆಕ್ಷೇಪಿಸುವಂತಹದ್ದೇನಿದೆ ? ಶಿಕ್ಷಣಾಧಿಕಾರಿಗಳ ನಿಲುವು ಜಾತ್ಯತೀತ ಸಂವಿಧಾನಕ್ಕೆ ಅನುಗುಣವಾಗಿ ಇತ್ತೇ ? ಶಿಕ್ಷಣ ಇಲಾಖೆಯಲ್ಲಿ ಒಂದು ವೇಳೆ ಮುಸ್ಲಿಮರನ್ನು ಓಲೈಸುವ ಇಂತಹ ಅಧಿಕಾರಿಗಳಿದ್ದರೆ ಅವರ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಮತಾಂಧ ಮಕ್ಕಳಿಂದ ಏನಾದರೂ ತೊಂದರೆಯಾದರೆ ಈ ಅಧಿಕಾರಿಗಳು ಹಿಂದೂ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುತ್ತಾರೆಯೇ? ಸ್ವಾತಂತ್ರ್ಯಾನಂತರ ಆಡಳಿತಕ್ಕೆ ‘ಜಾತ್ಯತೀತ’ ಅಂದರೆ ಮುಸಲ್ಮಾನರೆದುರು ತಲೆಬಾಗಲು’ ಹೇಳಿಕೊಟ್ಟಿರುವುದರಿಂದ ಶಿಕ್ಷಣಾಧಿಕಾರಿಗಳೂ ತಮ್ಮ ಸಾಮಾನ್ಯಜ್ಞಾನವನ್ನು ಉಪಯೋಗಿಸುವ ಬದಲು ‘ಕರೀಂನ ಮನಸ್ಸನ್ನು ಹೇಗೆ ಮನವೊಲಿಸಬಹುದು?’ ಎಂದು ಯೋಚಿಸುತ್ತಾರೆ. ಶಿಕ್ಷಣಾಧಿಕಾರಿಗಳ ಜೊತೆಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಡಳಿತದಲ್ಲಿನ ಯಾರೂ ಕರೀಂನಿಗೆ ತಿಳಿಸುವ ಧೈರ್ಯವನ್ನು ತೋರಿಸಲಿಲ್ಲ. ಆಡಳಿತಾತ್ಮಕ ಮಟ್ಟದಲ್ಲಿ ಬೆಳೆಸಿದ ಈ ಜಾತ್ಯತೀತತೆ ಹಿಂದೂಗಳ ಬುಡಕ್ಕೆ ಬಂದೆರಗಿದೆ. ಇಂತಹ ‘ಜಾತ್ಯತೀತ’ ಅಧಿಕಾರಿಗಳಿಂದ ತುಂಬಿರುವ ಆಡಳಿತ ಕರ್ತವ್ಯನಿಷ್ಠ ಮತ್ತು ತತ್ವನಿಷ್ಠತೆಯಿಂದ ಕಚೇರಿಯ ಕಾರ್ಯವನ್ನು ಹೇಗೆ ನಿರ್ವಹಿಸುತ್ತದೆ ? ಸ್ವಾತಂತ್ರ್ಯ ಬಂದು ೭೬ ವರ್ಷಗಳಾದರೂ ಈ ಪರಿಸ್ಥಿತಿ ಬದಲಾಗಿಲ್ಲ. ಇಂತಹ ಆಡಳಿತ ವ್ಯವಸ್ಥೆ ಇನ್ನೆಷ್ಟು ದಿನ ಮುಂದುವರಿಯಬೇಕು ? ಈಗಂತೂ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ, ಆಡಳಿತ ಮತ್ತಷ್ಟು ಮುಸ್ಲಿಂಪರ ಮತ್ತು ಹಿಂದೂವಿರೋಧಿಯಾದರೆ ಆಶ್ಚರ್ಯ ಪಡಬೇಕಾಗಿಲ್ಲ.