‘ಹಿಂದೂ ಯಾತ್ರೆಗಳಲ್ಲಿ ಮಾತ್ರ ಪಶುಪ್ರೇಮ, ಈದ್ ಸಮಯದಲ್ಲಿ ಏಕಿಲ್ಲ ?’ ಈ ಕುರಿತು ವಿಶೇಷ ಸಂವಾದ !

ಉಜ್ಜೈನಿ (ಮಧ್ಯಪ್ರದೇಶ) ನಲ್ಲಿ ಭಗವಾನ ಶ್ರೀ ಮಹಾಕಾಲನ ಶೋಭಾಯಾತ್ರೆಯಲ್ಲಿರುವ ಆನೆಯ ಬಗ್ಗೆ ‘ಪೀಪಲ್ ಫಾರ್ ಅನಿಮಲ್ಸ್’ (ಪಿಎಫ್‌ಎ) ಕಾರ್ಯದರ್ಶಿ ಪ್ರಿಯಾಂಶು ಜೈನ್ ಆಕ್ಷೇಪಿಸಿದ್ದಾರೆ. ಬಕ್ರಿ ಈದ್ ಸಮಯದಲ್ಲಿ ಲಕ್ಷಾಂತರ ಮೇಕೆಗಳನ್ನು ಹತ್ಯೆ ಮಾಡಲಾಗುತ್ತದೆ. ಪ್ರತಿನಿತ್ಯ ಸಾವಿರಾರು ಗೋವುಗಳನ್ನು ಹತ್ಯೆ ಮಾಡಲಾಗುತ್ತದೆ. ಜೈನ ಸಮಾಜದ ಮೆರವಣಿಗೆಗಳಲ್ಲಿ ‘ಇಂದ್ರ-ಇಂದ್ರಾಣಿ’ ಪಾತ್ರದಲ್ಲಿ ಕುದುರೆಗಳು ಮತ್ತು ಆನೆಗಳ ಮೇಲೆ ಸವಾರಿ ಮಾಡಲಾಗುತ್ತದೆ. ಆಗ ಅದನ್ನು ವಿರೋದಿಸಲು ಸಾಧ್ಯವಿಲ್ಲ. ಭಗವಾನ ಶ್ರೀ ಮಹಾಕಾಲನ ಶೋಭಾಯಾತ್ರೆಯಲ್ಲಿ ಆನೆಯ ಮೇಲೆ ಸವಾರಿ ಮಾಡುವ ಸಂಪ್ರದಾಯಕ್ಕೆ ಯಾವುದೇ ರಾಜಿ ಇಲ್ಲ ಮತ್ತು ಮುಂದೆಯೂ ಸಂಪ್ರದಾಯದಂತೆ ಶೋಭಾಯಾತ್ರೆ ನಡೆಸಲಾಗುವುದು. ಹಿಂದೂಗಳು ಜಾಗೃತಗೊಂಡರೆ ಜಗತ್ತಿನ ಯಾವ ಶಕ್ತಿಯೂ ಹಿಂದೂಗಳ ಸಂಪ್ರದಾಯದ ಜೊತೆ ಚೆಲ್ಲಾಟವಾಡಲಾರರು ಎಂದು ಉಜ್ಜೈನಿಯ ಸ್ವಸ್ತಿಕ ಪೀಠದ ಪೀಠಾಧೀಶ್ವರ ಪರಮಹಂಸ ಡಾ. ಅವಧೇಶಪುರಿ ಮಹಾರಾಜರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಡೆದ ‘ಹಿಂದೂ ಯಾತ್ರೆಗಳಲ್ಲಿ ಮಾತ್ರ ಪಶುಪ್ರೇಮ, ಈದ್ ಸಮಯದಲ್ಲಿ ಏಕಿಲ್ಲ ?’ ಈ ಕುರಿತ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಅವರು ಹಿಂದೂಗಳ ಸಹಿಷ್ಣುತೆ ಮತ್ತು ಔದಾರ್ಯವನ್ನು ಯಾರಾದರೂ ದುರುಪಯೋಗಪಡಿಸಿಕೊಂಡರೆ ಅದನ್ನು ಸಹಿಸುವುದಿಲ್ಲ. ಹಿಂದೂ ಧರ್ಮ, ಸಂಸ್ಕೃತಿ, ಸಂಪ್ರದಾಯದ ಬಗ್ಗೆ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಅವರನ್ನು ಹಿಂದೂಗಳು ಒಗ್ಗಟ್ಟಿನಿಂದ ವಿರೋಧಿಸಿ ಹಿಂದೂ ಸಂಸ್ಕೃತಿ, ಸಂಪ್ರದಾಯ, ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನಾಗೇಶ ಜೋಶಿ ಮಾತನಾಡಿ, ಹಿಂದೂ ಧರ್ಮದಲ್ಲಿ ಮಾತ್ರ ಹಬ್ಬ, ಹರಿದಿನಗಳಲ್ಲಿ ಪ್ರಾಣಿಗಳನ್ನು ಪೂಜಿಸಲಾಗುತ್ತಿದ್ದು, ಇತರ ಧರ್ಮಗಳ ಹಬ್ಬ-ಹರಿದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿಗಳನ್ನು ಕೊಲ್ಲಲಾಗುತ್ತದೆ. ಹಿಂದೂ ಹಬ್ಬಗಳಲ್ಲಿ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಸಮನ್ವಯ ಸಾಧಿಸಲಾಗುತ್ತದೆ ಮತ್ತು ಪರಸ್ಪರರಲ್ಲಿ ಪ್ರೀತಿ ನಿರ್ಮಾಣ ಮಾಡಲಾಗುತ್ತದೆ; ಆದರೆ ಇದಕ್ಕೂ ಆಕ್ಷೇಪ ವ್ಯಕ್ತವಾಗುತ್ತಿದೆ. ಹಿಂದೂ ಧರ್ಮದಲ್ಲಿ ಹಬ್ಬಗಳಲ್ಲಿ ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಸುಳ್ಳು ಚಿತ್ರಣವನ್ನು ನಿರ್ಮಾಣ ಮಾಡಲಾಗುತ್ತದೆ. ಹಿಂದೂಗಳ ಆಚಾರ-ವಿಚಾರ, ಸಂಪ್ರದಾಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಪೇಟಾ (PETA), ಪಿ.ಎಫ್.ಎ(PFA) ಈ ಸಂಸ್ಥೆಗಳು ಕೇವಲ ನಾಯಿಗಳು, ಬೆಕ್ಕುಗಳು, ಕುದುರೆಗಳ ರಕ್ಷಣೆಗಾಗಿ ಕೆಲಸ ಮಾಡುತ್ತವೆ; ಆದರೆ ಪ್ರತಿದಿನ ಗೋವುಗಳನ್ನು ಕೊಲ್ಲುವುದರ ಬಗ್ಗೆ ಈ ಸಂಘಟನೆಗಳು ಚಕಾರ ಎತ್ತುವುದಿಲ್ಲ. ಆಗ ಗೋರಕ್ಷಕರು ಮಾತ್ರ ಧಾವಿಸಿ ಬರುತ್ತಾರೆ. ಇವರ ಪ್ರಾಣಿ ಎಂಬ ವ್ಯಾಖ್ಯಾನಕ್ಕೆ ಗೋವು ಹೊಂದುವುದಿಲ್ಲವೇ ? ಹಿಂದೂ ಧರ್ಮದಲ್ಲಿ ಪೂಜನೀಯವಾಗಿರುವ ಪ್ರಾಣಿಗೆ ಅವರು ಏನೂ ಮಾಡುವುದಿಲ್ಲ, ಇದು ಅವರ ಷಡ್ಯಂತ್ರದ ಮೂಲಕ ಸ್ಪಷ್ಟವಾಗುತ್ತದೆ ಎಂದರು.
ಕೊನೆಯಲ್ಲಿ ಹೇಗೆ ಸರಕಾರವು ಹಳೆಯ ದಂಡ ಸಂಹಿತೆಯನ್ನು ತೆಗೆದುಹಾಕಿ ಭಾರತೀಯ ನ್ಯಾಯಾಂಗ ಸಂಹಿತೆಯನ್ನು ಜಾರಿಗೆ ತಂದಿದೆಯೋ, ಅದೇ ರೀತಿ ಪಾಶ್ಚಾತ್ಯ ಸಿದ್ಧಾಂತದಿಂದ ಪ್ರೇರಿತವಾದ ಪ್ರಾಣಿಗಳ ಕುರಿತಾದ 1960 ರಿಂದ ಜಾರಿಯಲ್ಲಿರುವ ಹಳೆಯ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಭಾರತೀಯ ಸಂಸ್ಕೃತಿಯ ಸಿದ್ಧಾಂತದಿಂದ ಪ್ರೇರಿತವಾದ ನೂತನ ಕಾನೂನನ್ನು ಜಾರಿಗೆ ತರಬೇಕು ಎಂದು ಶ್ರೀ. ಜೋಶಿಯವರು ಹೇಳಿದರು.
ಛತ್ತೀಸ್ಗಢದಲ್ಲಿನ ಧರ್ಮಕಾರ್ಯಕ್ಕೆ ಆಧ್ಯಾತ್ಮಿಕ ದಿಕ್ಕನ್ನು ನೀಡಿದ ಸದ್ಗುರುದ್ವಯರ ಭೇಟಿ!
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಕ್ಷುಲ್ಲಕ ಕಾರಣಕ್ಕೆ ಮುಸಲ್ಮಾನರಿಂದ ಹಿಂದೂಗಳ ಮೇಲೆ ಭೀಕರ ಹಲ್ಲೆ : Sewri Mumbai Muslims Attack
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!