‘ಮಣಿಪುರದ ವಿಷಯ ಭಾರತಕ್ಕೆ ಸೀಮಿತವಾಗಿರದೇ ಅಂತಾರಾಷ್ಟ್ರೀಯ ವೇದಿಕೆಗೆ ತಲುಪಿದೆಯಂತೆ ! – ಅಧೀರ ರಂಜನ ಚೌಧರಿ

ಅಧೀರ ರಂಜನ ಚೌಧರಿ ಇವರು ಮಣಿಪುರಕ್ಕೆ ಲೋಕಸಭೆಯಲ್ಲೇ ಅಂತರಾಷ್ಟ್ರೀಯ ವಿಷಯ ಮಾಡಿದರು !

ನವ ದೆಹಲಿ – ಅಧೀರ ರಂಜನ ಚೌದರಿ ಇವರು ಆಗಸ್ಟ್ ೧೦ ರಂದು ಮಣಿಪುರದಲ್ಲಿನ ಹಿಂಸಾಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದರು. ಅವರು, ಅಂತರಾಷ್ಟ್ರೀಯ ಮಟ್ಟದಲ್ಲಿ ಮಣಿಪುರದ ಹಿಂಸಾಚಾರ ‘ಯಾದವೀ ಯುದ್ಧದಂತೆ’ ಚರ್ಚಿಸಲಾಗುತ್ತಿದೆ. ಮಣಿಪುರದ ಹಿಂಸಾಚಾರದ ಬಗ್ಗೆ ಯುರೋಪಿಯನ್ ಸಂಸತ್ತು ಹಾಗೂ ಅಮೇರಿಕಾದಲ್ಲಿಯೂ ಚರ್ಚಿಸಲಾಗುತ್ತಿದೆ. ಮಣಿಪುರದ ವಿಷಯ ಒಂದು ರಾಜ್ಯಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾಗಿರದೇ ಅದು ಅಂತರಾಷ್ಟ್ರೀಯ ವೇದಿಕೆಗೆ ತಲುಪಿದೆ. ಆದ್ದರಿಂದ ಪ್ರಧಾನಮಂತ್ರಿಯವರು ಹಸ್ತಕ್ಷೇಪ ಮಾಡುವುದು ಅತ್ಯಾವಶ್ಯಕವಾಗಿದೆ ಎಂದು ಹೇಳಿದರು.

ಕಪಿಲ್ ಸಿಂಬಲ್ ಇವರ ರಾಷ್ಟ್ರವಿರೋಧಿ ಬೇಡಿಕೆ

ಇಂತಹದರಲ್ಲಿ ಕಾಂಗ್ರೆಸ್ ನ ನಾಯಕ ಕಪಿಲ್ ಸಿಬ್ಬಲ ಇವರು ರಾಷ್ಟ್ರ ವಿರೋಧಿ ಹೇಳಿಕೆ ನೀಡುತ್ತಾ ಇಂಗ್ಲೆಂಡ್ ನಲ್ಲಿ ಯಾವ ರೀತಿ ‘ಬ್ರೇಕ್ಝೀಟ್’ ಗಾಗಿ (ಬ್ರಿಟನ್ ಯುರೋಪಿಯನ್ ಯೂನಿಯನ್ ನಿಂದ ಹೊರಬರುವುದಕ್ಕಾಗಿ) ಜನಾಭಿಪ್ರಾಯ ಸಂಗ್ರಹಿಸಲಾಯಿತು, ಅದೇ ರೀತಿ ಕಾಶ್ಮೀರದಲ್ಲಿ ಕೂಡ ನಡೆಸಬೇಕು, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದರು. ಭಾರತದ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ ಇವರು ಅವರ ಬೇಡಿಕೆಯನ್ನು ತಳ್ಳಿ ಹಾಕಿದರು. (ಇಂತಹ ರಾಷ್ಟ್ರ ವಿರೋಧಿ ಹೇಳಿಕೆ ನೀಡುವವರನ್ನು ಜನರೇ ಶಾಶ್ವತವಾಗಿ ಮನೆಯಲ್ಲಿ ಕೂಡಿಸುವರು, ಇದರಲ್ಲಿ ಸಂದೇಹವಿಲ್ಲ ! – ಸಂಪಾದಕರು)

ಸಂಪಾದಕೀಯ ನಿಲುವು

ಮಣಿಪುರದ ವಿಷಯದ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ವಿರೋಧಿ ಹೇಳಿಕೆ ನೀಡುತ್ತಿದ್ದು ಕಾಂಗ್ರೆಸ್ ಪಕ್ಷ ಕೂಡ ಅದರ ಒಂದು ಭಾಗವಾಗಿದೆ, ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು ?

ಈ ರೀತಿ ಭಾರತಕ್ಕೆ ಅವಮಾನಿಸಿ ಅದರ ಆಂತರಿಕ ವಿಷಯಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಚೌಧರಿ ಇವರನ್ನು ಕೇವಲ ಅಮಾನತು ಅಷ್ಟೇ ಅಲ್ಲದೆ ಅವರನ್ನು ಸಂಸದ ಸ್ಥಾನದಿಂದ ಕೆಳಗಿಳಿಸಬೇಕು !