‘ಕರ್ಮ ‘ಚಲನಚಿತ್ರದಲ್ಲಿನ ‘ಎ ವತನ್ ತೇರೆಲಿಯೆ’ ಈ ಹಾಡು ಈಗ ಸಂಸ್ಕೃತದಲ್ಲಿ !

ಮುಂಬಯಿ – ನಿರ್ಮಾಪಕ ನಿರ್ದೇಶಕ ಸುಭಾಷ್ ಘೈ ಇವರ ‘ಕರ್ಮ’ ಚಲನಚಿತ್ರದ ‘ಎ ವತನ ತೇರೆಲಿಯೆ’ ಈ ಹಾಡು ಇವತ್ತಿಗೂ ಜನರನ್ನು ದೇಶಭಕ್ತಿಯ ಭಾವನೆಯನ್ನು ಪ್ರೇರೇಪಿಸುತ್ತಿದೆ. ದೇಶದ 76ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಹಾಡಿನ ಸಂಸ್ಕೃತ ಆವೃತ್ತಿಯನ್ನು ಇತ್ತಿಚೆಗೆ ಬಿಡುಗಡೆ ಮಾಡಲಾಯಿತು.

ಆಗಸ್ಟ್ 9, 2023 ರಂದು ನಡೆದ ಒಂದು ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಸಾಂಸ್ಕೃತಿಕ ಸಚಿವ ಸುಧೀರ್ ಮುನಗಂಟಿವಾರ ಇವರ ಹಸ್ತದಿಂದ ಈ ಹಾಡಿನ ಸಂಸ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ನಟ ಜಾಕೀ ಶ್ರಾಫ, ಶುಭಾಷ್ ಘೈ ಸೇರಿದಂತೆ ‘ಕರ್ಮ’ ಚಿತ್ರದ ಅನೇಕರು ಉಪಸ್ಥಿತರಿದ್ದರು.

(ಸೌಜನ್ಯ – Amar Ujala)

ಸಂಸ್ಕೃತ ಭಾಷೆಯ ಈ ಹಾಡು ಕವಿತಾ ಕೃಷ್ಣಮೂರ್ತಿ ಅವರ ಧ್ವನಿಯಲ್ಲಿ ಸಂಗೀತ ಬದ್ಧವಾಗಿ ಮೂಡಿಬಂದಿದೆ.