ಸಾರ್ವನಿಕರ ‘ಡಿಜಿಟಲ್ ಡೆಟಾ’ದ ದುರ್ಬಳಕೆ ಮಾಡುವ ಸಂಸ್ಥೆಗಳಿಗೆ ೫೦ ರಿಂದ ೨೫೦ ಕೋಟಿ ರೂಪಾಯಿಗಳ ದಂಡ !

ಲೋಕಸಭೆಯಲ್ಲಿ ‘ಡಿಜಿಟಲ್ ಪರ್ಸನಲ್ ಡೆಟಾ ಪ್ರೊಟೆಕ್ಷನ್’ ಮಸೂದೆಗೆ ಅಂಗೀಕಾರ !

ನವ ದೆಹಲಿ – ಮಣಿಪುರದ ಹಿಂಸಾಚಾರದ ಬಗ್ಗೆ ಲೋಕಸಭೆಯಲ್ಲಿ ನಡೆಯುತ್ತಿರುವ ಗದ್ದಲದ ನಡುವೆಯೇ ‘ಡಿಜಿಟಲ್ ಪರ್ಸನಲ್ ಡೆಟಾ ಪ್ರೊಟೆಕ್ಷನ್’ ಮಸೂದೆಯನ್ನು ಧ್ವನಿ ಮತದಾನದ ಮೂಲಕ ಅಂಗೀಕರಿಸಲಾಯಿತು. ಈ ಮಸೂದೆಗನುಸಾರ ಸಾರ್ವಜನಿಕರ ವೈಯಕ್ತಿಕ ಡಿಜಿಟಲ್ ಡೆಟಾ ಕಳ್ಳತನವಾದರೆ ಅಥವಾ ಅದರ ದುರ್ಬಳಕೆಯಾದದ್ದು ಕಂಡುಬಂದರೆ ಸಂಬಂಧ ಪಟ್ಟ ಸಂಸ್ಥೆಗೆ ೫೦ ರಿಂದ ೨೫೦ ಕೋಟಿ ರೂಪಾಯಿ ದಂಡವನ್ನು ತೆತ್ತಬೇಕಾಗುತ್ತದೆ.

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಶ್ರೀ. ಅಶ್ವಿನಿ ವೈಷ್ಣವ ಇವರು ಈ ಮಸೂದೆಯನ್ನು ಲೋಕಸಭೆಯಲ್ಲಿ ಪ್ರಸ್ತುತಪಡಿಸಿದರು. ಈ ಸಮಯದಲ್ಲಿ ವೈಷ್ಣವ ಇವರು, ಈ ಮಸೂದೆಯು ಭಾರತೀಯ ನಾಗರಿಕರ ಗೌಪ್ಯ ಮಾಹಿತಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಸರ್ವೋಚ್ಚ ನ್ಯಾಯಾಲಯವು ‘ಗೌಪ್ಯತೆಯ ಹಕ್ಕು’ ಇದು ಮೂಲಭೂತ ಅಧಿಕಾರ ಇರುವುದಾಗಿ ಘೋಷಿಸಿದ ೬ ವರ್ಷಗಳ ನಂತರ ಈ ಮಸೂದೆಯನ್ನು ಅಂಗೀಕರಿಸಲಾಗಿದೆ’, ಎಂದು ಹೇಳಿದರು.