ನೂಹ (ಹರಿಯಾಣ) ಇಲ್ಲಿ ಹಿಂದೂಗಳ ಯಾತ್ರೆಯ ಮೇಲೆ ಕಲ್ಲುತೂರಾಟ ನಡೆಸುವುದರಲ್ಲಿ ಮುಂಚುಣಿಯಲ್ಲಿರುವ ‘ಹೋಟೆಲ್ ಸಹಾರ’ ಮೇಲೆ ಕೂಡ ಬುಲ್ಡೋಜರ್ !

ಒಟ್ಟು ೬೦೦ ಕಟ್ಟಡಗಳ ಮೇಲೆ ಕ್ರಮ !

ನೂಹ (ಹರಿಯಾಣ) – ಇಲ್ಲಿ ಹಿಂದುಗಳ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ಮೊದಲು ತಿರಂಗಾ ವೃತ್ತದಲ್ಲಿನ ‘ಹೋಟೆಲ್ ಸಹಾರಾ’ದ ಮಾಳಿಗೆಯಿಂದ ದಾಳಿ ನಡೆಸಲು ಆರಂಭಿಸಿದ್ದರು. ಮೂರು ಅಂತಸ್ತಿನ ಈ ಕಟ್ಟಡದಿಂದ ಹಿಂದುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ಗಲಭೆಯ ವಿವಿಧ ವಿಡಿಯೋದಿಂದ ಇದು ಕೂಡ ಬೆಳಕಿಗೆ ಬಂದಿದೆ. ಹರಿಯಾಣ ಪೋಲಿಸರು ಈಗ ಈ ಕಟ್ಟಡದ ಮೇಲೆ ಬುಲ್ಡೋಜರ್ ನಿಂದ ಕ್ರಮ ಕೈಗೊಳ್ಳುತ್ತಾ ಎಲ್ಲಾ ಅಂತಸ್ತಗಳನ್ನು ನೆಲೆಸಮ ಮಾಡಿದ್ದಾರೆ. ಸರಕಾರದ ಪ್ರಕಾರ, ಈ ಕಟ್ಟಡ ಕಾನೂನ ಬಾಹಿರವಾಗಿತ್ತು. (ಕಟ್ಟಡ ಕಾನೂನ ಬಾಹಿರವಾಗಿದ್ದರೆ, ಇಷ್ಟು ವರ್ಷ ಸರಕಾರದಿಂದ ಅದರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ ? – ಸಂಪಾದಕರು)

೨೦೧೬ ರಿಂದ ಹೋಟೆಲಿನ ಮಾಲೀಕನಿಗೆ ಇದರ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಲಾಗುತ್ತಿತ್ತು ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆಯದೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ, ಎಂದು ಸ್ಥಳಿಯ ಅಧಿಕಾರಿ ವಿನೇಶ ಕುಮಾರ ಇವರು ಹೇಳಿದರು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಉಪಸ್ಥಿತರಿದ್ದರು. ಸ್ಥಳೀಯ ಪ್ರಸಾರ ಮಾಧ್ಯಮಗಳಿಂದ ನೀಡಿದ ಮಾಹಿತಿಯ ಪ್ರಕಾರ ಹರಿಯಾಣ ಸರಕಾರದಿಂದ ಇಲ್ಲಿಯವರೆಗೆ ೬೦೦ ಕ್ಕಿಂತಲೂ ಹೆಚ್ಚಿನ ಕಾನೂನಾಬಾಹಿರ ಸ್ಥಳಗಳ ಮೇಲೆ ಬುಲ್ಡೋಜರ್ ನಿಂದ ನೆಲೆಸಮ ಮಾಡಲಾಗಿದೆ.

ಗುರುಗ್ರಾಮದಲ್ಲಿ ಹಿಂದೂ ಮಹಾಪಂಚಾಯತಿಯ ಆಯೋಜನೆ !

ನೂಹನ ಘಟನೆಯನ್ನು ನಿಷೇಧಿಸಲು ಆಗಸ್ಟ್ ೬ ರಂದು ಗುರುಗ್ರಾಮದಲ್ಲಿ ಹಿಂದೂ ಮಹಾಪಂಚಾಯತಿಯ ಆಯೋಜನೆ ಮಾಡಿದ್ದರು. ಈ ಪ್ರಸಂಗದಲ್ಲಿ ಯಾವುದೇ ಅನುಚಿತ ಘಟನೆ ನಡೆಯಬಾರದೆಂದು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್ತಿನಿಂದ, ಹಿಂಸಾಚಾರದಿಂದ ಪೂರ್ಣವಾಗದೇ ಇರುವ ಜಲ ಅಭಿಷೇಕ ಯಾತ್ರೆ, ಈ ವರ್ಷವೇ ಪೂರ್ಣಗೊಳಿಸಲಾಗುವುದು. ಅದರ ದಿನಾಂಕ ಈ ಮಹಾಪಂಚಾಯತಿಯಲ್ಲಿ ನಿಶ್ಚಿತಗೊಳಿಸಲಾಗುವುದು ಎಂದು ಹೇಳಿದೆ.