ಭಯೋತ್ಪಾದಕರಿಂದ ನಡೆದಿತ್ತು ಬಾಂಬ್ ತಯಾರಿಕೆ ತರಬೇತಿ ಶಿಬಿರ !

ಭಯೋತ್ಪಾದಕರು ಹೂತಿಟ್ಟಿದ್ದ ಬಾಂಬ್ ತಯಾರಿಕೆ ಸಾಮಗ್ರಿ, ಪಿಸ್ತೂಲ್ ಮತ್ತು 5 ಜೀವಂತ ಕಾಟ್ರಿಜ್ಡಗಳು ವಶ !

ಪುಣೆ – ಭಯೋತ್ಪಾದಕ ಚಟುವಟಿಕೆಗಳ ಪ್ರಕರಣದಲ್ಲಿ ಬಂಧಿತನಾಗಿದ್ದ ಜುಲ್ಫಿಕರ್ ಬಡೋದಾವಾಲಾ ಕೊತ್ರುಡ್‌ನಿಂದ ಬಂಧಿಸಿರುವ ಇಬ್ಬರು ಭಯೋತ್ಪಾದಕರ ಸಹಾಯದಿಂದ ಇತರ ಸಹಚರರಿಗೆ ಬಾಂಬ್ ತಯಾರಿಕೆ ತರಬೇತಿ ಶಿಬಿರವನ್ನು ಆಯೋಜಿಸಿದ್ದನು. ಅವನು ಹೂತಿಟ್ಟಿದ್ದ ಸ್ಥಳದಿಂದ ಬಾಂಬ್ ತಯಾರಿಸುವ ಸಾಮಗ್ರಿಗಳಾದ ರಾಸಾಯನಿಕ ದ್ರವ್ಯಗಳು ಮತ್ತು ‘ರಾಸಾಯನಿಕ ಪುಡಿ’, ಪ್ರಯೋಗಾಲಯದ ಉಪಕರಣಗಳು, ಥರ್ಮಾಮೀಟರ್‌ಗಳು, ಪೀಪೆಟ್‌ಗಳು (ಸಣ್ಣ ಪ್ರಮಾಣದ ದ್ರವವನ್ನು ಒಂದು ಬಾಟಲಿಯಿಂದ ಇನ್ನೊಂದಕ್ಕೆ ವರ್ಗಾಯಿಸಲು ಬಳಸುವ ಸಣ್ಣ ಕೊಳವೆ) ಇತ್ಯಾದಿ ಬಾಂಬ್ ತಯಾರಿಸುವ ವಸ್ತುಗಳನ್ನು ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದೆ. ಉಗ್ರ ನಿಗ್ರಹ ದಳ (ಎಟಿಎಸ್) ಇಬ್ಬರೂ ಭಯೋತ್ಪಾದಕರು ಬಳಸಿದ್ದ 1 ಕಾರು, 2 ಪಿಸ್ತೂಲ್ ಮತ್ತು 5 ಜೀವಂತ ಕಾಟ್ರಿಜ್ಡಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಅಪರಾಧದಲ್ಲಿ ಬಂಧಿತ ಆರೋಪಿಗಳ ತನಿಖೆಯಲ್ಲಿ ಮತ್ತು ಅವರ ಬಳಿಯಿದ್ದ ‘ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ’ ದೊರೆತ ಮಾಹಿತಿಯ ಮೂಲಕ ಅವರಿಗೆ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆಗಿನ ಸಂಬಂಧ ತನಿಖೆಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಭಯೋತ್ಪಾದಕರಿಗಾಗಿ ಶೋಧ ನಡೆಯುತ್ತಿದೆ.