|
ನೂಹ್ (ಹರಿಯಾಣ) – ಜುಲೈ 31 ರಂದು ಹಿಂದೂಗಳ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ನಡೆಸಿದ ದಾಳಿಯ ಸಂಚು ಪೂರ್ವ ಯೋಜಿತವಾಗಿತ್ತು ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆಯೆಂದು ಹೇಳಲಾಗುತ್ತಿದೆ. ರಾಜ್ಯದ ಗೃಹಸಚಿವ ಅನಿಲ್ ವಿಜ್ ಇವರು ಈ ಹಿಂದೆಯೇ ‘ಈ ಗಲಭೆ ಪೂರ್ವ ಯೋಜಿತ ಪಿತೂರಿ’ ಎಂದು ಸ್ಪಷ್ಟಪಡಿಸಿದ್ದಾರೆ. ಜುಲೈ 31 ರಂದು ನಲ್ಹರ್ ಶಿವಮಂದಿರದಿಂದ ಪ್ರಾರಂಭವಾದ ‘ಬ್ರಜ್ ಮಂಡಲ್ ಶೋಭಾಯಾತ್ರೆ’ ನಗರದ ತಿರಂಗಾ ಚೌಕ್ ತಲುಪಿದಾಗ ಮತಾಂಧ ಮುಸ್ಲಿಮರು ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿ, ಗುಂಡಿನ ದಾಳಿ ನಡೆಸಿದ್ದರು. ಇದರ ನಂತರ ಮತಾಂಧರು ನಗರ ಪೊಲೀಸ್ ಠಾಣೆ, ಸದರ್ ಪೊಲೀಸ್ ಠಾಣೆ ಮತ್ತು ಮಹಿಳಾ ಪೊಲೀಸ್ ಠಾಣೆ ಮಾರ್ಗವಾಗಿ ಶಿವಮಂದಿರವನ್ನು ತಲುಪಿದರು; ಆದರೆ ಈ ಮೂರು ಪೊಲೀಸ್ ಠಾಣೆಗಳ ಮೇಲೆ ಮತಾಂಧರು ದಾಳಿ ನಡೆಸಿಲ್ಲ. ತದನಂತರ ಮತಾಂಧರ ಗುಂಪು ಮತ್ತೆ ವಿರುದ್ಧ ದಿಕ್ಕಿನಲ್ಲಿ ಹೋಗಿ 2 ಕಿ.ಮೀ ದೂರದಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ಬಂದು ಠಾಣೆಯನ್ನು ಸುಟ್ಟು ಹಾಕಿದೆ.
Nuh violence: CCTV footage shows Islamist mob targeted Cyber Police Station in Nuh with a hijacked bus, allegedly to erase criminal recordhttps://t.co/NPpNS8ceMK
— OpIndia.com (@OpIndia_com) August 1, 2023
ಸೈಬರ್ ಪೊಲೀಸ್ ಠಾಣೆಯ ‘ಸಿಸಿಟಿವಿ’ ಕ್ಯಾಮೆರಾದಲ್ಲಿ, ಬಸ್ ಮೂಲಕ ಪೊಲೀಸ್ ಠಾಣೆಯ ಪ್ರವೇಶ ದ್ವಾರವನ್ನು ಮುರಿಯಲು ಯತ್ನಿಸಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಬಳಿಕ ಪೊಲೀಸ್ ಠಾಣೆಯ ಒಂದು ಗೋಡೆಯನ್ನು ಬೀಳಿಸಿದ್ದಾರೆ. ಇದಾದ ಬಳಿಕ ಮತಾಂಧರು ಪೊಲೀಸ್ ಠಾಣೆಯಲ್ಲಿದ್ದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಪೊಲೀಸ್ ಠಾಣೆಯ ಹೊರಗಿದ್ದ 10 ವಾಹನಗಳು ಮತ್ತು 1 ಬೈಕ್ ಗೆ ಬೆಂಕಿ ಹಚ್ಚಿದ್ದಾರೆ. ಇದಾದ ಬಳಿಕ ಮತಾಂಧರು ಪೊಲೀಸ್ ಠಾಣೆಗೂ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ರ ಹಣ ಹಾಗೂ ಪೊಲೀಸ್ ಠಾಣೆಯ ಹವಾನಿಯಂತ್ರಿತ (ಕೂಲರ್), ಬ್ಯಾಟರಿ, ಇನ್ವರ್ಟರ್ ಇತ್ಯಾದಿಗಳನ್ನು ಕದ್ದೊಯ್ದಿದ್ದಾರೆ. ಮತಾಂಧರು ಪೊಲೀಸರನ್ನು ಜೀವಂತ ಸುಡಲು ಬಯಸಿದ್ದರು ಎಂದು ಉಪಸ್ಥಿತರಿದ್ದ ಪೊಲೀಸರು ಹೇಳಿದ್ದಾರೆ. ಗುಂಪು ಸೈಬರ್ ಅಪರಾಧಗಳ ಸಾಕ್ಷ್ಯವನ್ನು ಸುಡಲು ಪ್ರಯತ್ನಿಸಿತು. ಪೊಲೀಸರು ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಗುಂಪು ಓಡಿಹೋಯಿತು. ಪೊಲೀಸರು ಗುಂಪಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು 115 ಸುತ್ತು ಗುಂಡು ಹಾರಿಸಿದ್ದಾರೆ.
ಏಪ್ರಿಲ್ 2023 ರಲ್ಲಿ ಸೈಬರ್ ಅಪರಾಧಗಳ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದರು !ಹರಿಯಾಣ ಪೊಲೀಸರು ಏಪ್ರಿಲ್ 2023 ರಲ್ಲಿ ನೂಹ್ ಜಿಲ್ಲೆಯ 14 ಗ್ರಾಮಗಳಲ್ಲಿ 320 ಸ್ಥಳಗಳಲ್ಲಿ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ದಾಳಿಗಳನ್ನು ನಡೆಸಿದ್ದರು. ಈ ದಾಳಿಯು ಇದುವರೆಗಿನ ಭಾರತದ ಅತಿದೊಡ್ಡ ಸೈಬರ್ ಅಪರಾಧ ಸಂಬಂಧಿತ ಕಾರ್ಯಾಚರಣೆಯಾಗಿದೆ. ಈ ಸಂಬಂಧದಲ್ಲಿ 11 ಅಪರಾಧಗಳನ್ನು ದಾಖಲಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ 5 ಸಾವಿರ ಸೈನಿಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಇದು ಒಟ್ಟು 100 ಕೋಟಿ ರೂಪಾಯಿಗಳ ದೊಡ್ಡ ಮೊತ್ತದ ಹಗರಣವಾಗಿದೆ ಎಂದು ಆಗ ವರದಿಯಾಗಿತ್ತು. ಆ ವೇಳೆ 126 ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಅವರಲ್ಲಿ 66 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೂಹ್‌ನಲ್ಲಿರುವ ಅದೇ ಸೈಬರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. |
ಸಂಪಾದಕೀಯ ನಿಲುವುಎಲ್ಲಿ ಮತಾಂಧ ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆಯೋ, ಅಲ್ಲಿ ಅವರು ಏನು ಮಾಡಬಹುದು ?, ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಇಂತಹ ಪರಿಸ್ಥಿತಿ ದೇಶದಾದ್ಯಂತ ನಡೆಯದಂತೆ ತಡೆಯಲು ಹಿಂದೂ ರಾಷ್ಟ್ರವನ್ನು ಸ್ಥಾಪಿಸಬೇಕು ! |