ಉಡುಪಿಯ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಮನುಕುಲಕ್ಕೆ ನಾಚಿಕೆಗೇಡಿನ ಹಾಗೂ ನೋವಿನ ಘಟನೆಯಾಗಿದೆ, ಈಗ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಆದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಏಕೆಂದರೆ ಈಗ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಕೇರಳ ಫೈಲ್ಸ್‌ದಂತೆಯೇ ಉಡುಪಿ ಫಾಯಿಲ್ಸ ಸಹ ಬರಬಹುದು, ಎಂದು ಹಿಂದೂ ರಾಷ್ಟ್ರ ಸೇನೆಯ ಕರ್ನಾಟಕ ರಾಜ್ಯ ವಕ್ತಾರ ಶ್ರೀ. ಸಂದೀಪ ಕೆ.ಎನ್. (ಗುರೂಜಿ)) ಇವರು ಮಾತನಾಡುತ್ತಿದ್ದರು. ಅವರು ದಾವಣಗೆರೆ ಜಿಲ್ಲೆಯಲ್ಲಿ ನೆರವೇರಿದ ಧರ್ಮಶಿಕ್ಷಣ ವರ್ಗದಲ್ಲಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ, ಹಿಂದೂಗಳಿಗೆ ಧರ್ಮಶಿಕ್ಷಣ ಮತ್ತು ಆಧ್ಯಾತ್ಮಿಕ ಸಾಧನೆ ಬಹಳ ಮುಖ್ಯವಾಗಿದೆ, ಮುಂಬರುವ ದಿನಗಳಲ್ಲಿ ಹಿಂದೂ ಹುಡುಗಿಯರು ಜಾಗೃತರಾಗಬೇಕು. ಸಾರ್ವಜನಿಕ ಶೌಚಾಲಯಕ್ಕೆ ಹೋದರೆ ಒಮ್ಮೆ ತನಿಖೆ ಮಾಡಬೇಕು. ಇದರಿಂದ ಯಾವುದೇ ಅನಾಹುತಗಳು ಆಗುವುದಿಲ್ಲ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಮೇಲು, ಮತ್ತೊಮ್ಮೆ ಕಾಶ್ಮೀರ ಫೈಲನ್ನು ನೆನಪಿಸಿಕೊಳ್ಳಬೇಕು. ಕಾಶ್ಮೀರದಲ್ಲಿ ನಮ್ಮ ಹಿಂದೂ ಹೆಂಗಸರನ್ನು ಹಿಂಸಿಸಿ ತುಂಡು ತುಂಡಾಗಿ ಕತ್ತರಿಸಿದ್ದರು. ಆದ್ದರಿಂದ ಹಿಂದೂಗಳು ಜಾಗೃತರಾಗಿ ಹಿಂದೂ ರಾಷ್ಟ್ರ ಸಂಕಲ್ಪದೊಂದಿಗೆ, ಆಧ್ಯಾತ್ಮಿಕ ಮತ್ತು ಧರ್ಮಶಿಕ್ಷಣವನ್ನು ಪಡೆಯಲು ಎಲ್ಲಾ ವಿದ್ಯಾರ್ಥಿಗಳು, ಯುವಕರು ಮತ್ತು ತಾಯಂದಿರು ಮತ್ತು ಸಹೋದರಿಯರು ಧರ್ಮಶಿಕ್ಷಣ ವರ್ಗದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.