‘ಯುದ್ಧ ಒಂದು ಪರ್ಯಾಯವಲ್ಲ ಭಾರತದೊಂದಿಗೆ ಚರ್ಚೆಗೆ ಸಿದ್ಧ!'(ಅಂತೆ) – ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್

ಆರ್ಥಿಕ ಸಂಕಷ್ಟದಲ್ಲಿರುವ ಜಿಹಾದಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಇವರ ನಾಟಕ !

ಇಸ್ಲಾಮಾಬಾದ್ (ಪಾಕಿಸ್ತಾನ) – ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನ ಇದೀಗ ಭಾರತವನ್ನು ಓಲೈಸುವ ನಾಟಕವಾಡುತ್ತಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಶಹಬಾಜ್ ಷರೀಫ್ ಇವರು ಭಾರತಕ್ಕೆ ಕರೆ ನೀಡುತ್ತಾ, ಯುದ್ಧ ಒಂದು ಆಯ್ಕೆಯಲ್ಲ ಮತ್ತು ನಾವು ಭಾರತದೊಂದಿಗೆ ಚರ್ಚೆ ನಡೆಸಲು ಸಿದ್ಧರಿದ್ದೇವೆ ಎಂದು ಹೇಳಿದರು. ಒಂದು ವೇಳೆ ಭಾರತ ಈ ವಿಷಯದಲ್ಲಿ ಗಂಭೀರವಾಗಿದ್ದರೆ, ನಾವು ಅದರೊಂದಿಗೆ ಚರ್ಚಿಸಲು ಬಯಸುತ್ತೇವೆ.

(ಸೌಜನ್ಯ – Aaj Tak)

ಕಳೆದ 75 ವರ್ಷಗಳಲ್ಲಿ ಉಭಯ ದೇಶಗಳ ನಡುವೆ 3 ಬಾರಿ ಯುದ್ಧಗಳು ನಡೆದಿವೆ. ಇದರಿಂದ ಕೇವಲ ಬಡತನ, ನಿರುದ್ಯೋಗ ಮತ್ತು ಮೂಲಸೌಕರ್ಯಗಳ ಕೊರತೆಯಂತಹ ಸಮಸ್ಯೆಗಳು ನಿರ್ಮಾಣವಾಗಿದೆ ಎಂದು ಹೇಳಿದರು. ಪಾಕಿಸ್ತಾನ ಪರಮಾಣು ಸಶಸ್ತ್ರ ರಾಷ್ಟ್ರವಾಗಿದೆ. ಇದು ಆಕ್ರಮಣಕಾರಿಯಾಗಲು ಅಲ್ಲ, ತಮ್ಮನ್ನು ರಕ್ಷಿಸಿಕೊಳ್ಳಲು ಇದೆ ! ಒಂದು ವೇಳೆ ಪರಮಾಣು ಯುದ್ಧದಂತಹ ಪರಿಸ್ಥಿತಿ ಸಂಭವಿಸಿದರೆ, ಅದರ ಬಗ್ಗೆ ಹೇಳಲು ಯಾರೂ ಜೀವಂತವಾಗಿರುವುದಿಲ್ಲ. ಯುದ್ಧವು ಒಂದು ಆಯ್ಕೆಯಾಗಿಲ್ಲ! ಎಂದು ಹೇಳಿದರು.

ಸಂಪಾದಕೀಯ ನಿಲುವು

ಪಾಕಿಸ್ತಾನ ಜಿಹಾದಿ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸುವುದನ್ನು ನಿಲ್ಲಿಸಬೇಕು. ಕುಖ್ಯಾತ ಭಯೋತ್ಪಾದಕ ಹಾಫೀಜ್ ಸಯೀದ್, ದಾವೂದ್ ಇಬ್ರಾಹಿಂ ನನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಅಲ್ಲಿನ ಹಿಂದೂಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಆ ನಂತರವೇ ಭಾರತ ಪಾಕಿಸ್ತಾನದೊಂದಿಗೆ ಚರ್ಚಿಸಲು ವಿಚಾರ ಮಾಡಬಹುದು ಎನ್ನುವುದನ್ನು ಅವರು ಗಮನಕ್ಕೆ ತೆಗೆದುಕೊಳ್ಳಬೇಕು !