‘ಭಗವಾನ ಶ್ರೀಕೃಷ್ಣನು ರುಕ್ಮಿಣಿಯನ್ನೂ ಓಡಿಸಿಕೊಂಡಿ ಹೋಗಿದ್ದ !’ (ಅಂತೆ) – ಅಸ್ಸಾಂನ ಕಾಂಗ್ರೆಸ ಪ್ರದೇಶಾಧ್ಯಕ್ಷ ಭೂಪೇನ ಬೋರಾ

  • ಅಸ್ಸಾಂನ ಕಾಂಗ್ರೆಸ ಪ್ರದೇಶಾಧ್ಯಕ್ಷ ಭೂಪೇನ ಬೋರಾ ಇವರಿಂದ ಲವ್ ಜಿಹಾದ್ ಘಟನೆ ಕುರಿತು ಖೇದಕರ ಹೇಳಿಕೆ !

  • ಬೋರಾ ವಿರುದ್ಧ ದೂರು ದಾಖಲು !

ಗೋಲಘಾಟಾ (ಅಸ್ಸಾಂ) – ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವು ಕ್ಷಮೆ ಇದೆ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಇಂತಹ ವಿಷಯಗಳಿವೆ. ಉದಾಹರಣೆಗೆ ಭಗವಾನ ಶ್ರೀಕೃಷ್ಣನು ರುಕ್ಮಿಣಿಯೊಂದಿಗೆ ಓಡಿಹೋಗಿದ್ದರು. ರಾಜ್ಯದ ಮುಖ್ಯಮಂತ್ರಿ ಸರಮ ಅವರು ಈಗಿನ ಕಾಲದ ಅಂತರ ಧರ್ಮೀಯ ವಿವಾಹಗಳ ಬಗ್ಗೆ ಗೊಂದಲ ಸೃಷ್ಟಿಸಬಾರದು ಎಂದು, ಎಂದು ಅಸ್ಸಾಂನ ಕಾಂಗ್ರೆಸ್ ಪ್ರದೇಶಾಧ್ಯಕ್ಷ ಭೂಪೇನ ಬೋರಾ ಅವರು ಇಲ್ಲಿನ ಲವ್ ಜಿಹಾದ್ ಘಟನೆ ಕುರಿತು ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ದೂರು ದಾಖಲಾಗಿದೆ. ಇಲ್ಲಿ ನಜೀಬುರ ರೆಹಮಾನ ತಾನು ಹಿಂದೂ ಎಂದು ಹೇಳಿ ಹಿಂದೂ ಹುಡುಗಿ ಸಂಘಮಿತ್ರಾ ಘೋಷ ಇವಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ನಂತರ ಆಕೆಯ ತಂದೆ-ತಾಯಿಯನ್ನು ಕೊಂದಿದ್ದನು.

ನಾವು ಪ್ರತಿಯೊಂದು ಚರ್ಚೆಯಲ್ಲಿ ಪ್ರವಾದಿ ಮತ್ತು ಯೇಸುವನ್ನು ಎಳೆಯುವುದಿಲ್ಲ ! – ಮುಖ್ಯಮಂತ್ರಿ ಸರಮಾ

ಬೋರಾ ಅವರ ಹೇಳಿಕೆ ಕುರಿತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರು, ಶ್ರೀಕೃಷ್ಣನನ್ನು ಲವ್ ಜಿಹಾದ್‌ನೊಂದಿಗೆ ಹೋಲಿಸುವುದು ತುಂಬಾ ದುರದೃಷ್ಟಕರವಾಗಿದೆ. ಈ ಹೇಳಿಕೆಯಿಂದ ಸನಾತನೀಯರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ. ಈ ಬಗ್ಗೆ ಯಾರಾದರೂ ದೂರು ನೀಡಿದರೆ, ನಾನು ಕ್ರಮಕೈಗೊಳ್ಳುವುದನ್ನು ಹೇಗೆ ತಡೆಯಬೇಕು ? ಅಪರಾಧ ದಾಖಲಾದರೆ ಬಂಧಿಸಬಹುದು. ನಾವು ಪ್ರತಿ ವಿವಾದದಲ್ಲಿ ಪ್ರವಾದಿ ಮಹಮ್ಮದ ಮತ್ತು ಯೇಸುವನ್ನು ಎಳೆಯುವುದಿಲ್ಲ. ಕಾಂಗ್ರೆಸ್ ಇದೇ ರೀತಿಯ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದರೆ, ಅವರ ವಿಳಾಸವು ಮಸೀದಿ ಅಥವಾ ಮದರಸಾ ಆಗಿರಬಹುದು ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಾಂಗ್ರೆಸಿಗರಿಂದ ಇದಕ್ಕೂ ಮಿಗಿಲಾಗಿ ಇನ್ನೇನು ನಿರೀಕ್ಷಿಸಬಹುದು ? ಬೋರಾ ಇವರು ಇತರ ಧರ್ಮದವರ ಶ್ರದ್ಧೆಯ ಬಗ್ಗೆ ಇಂತಹ ಹೇಳಿಕೆ ನೀಡಿದ್ದರೆ ಅವರ ಶಿರಚ್ಛೇದದ ಫತ್ವಾಗಳು ಜಾರಿಯಾಗುತ್ತಿತ್ತು !

ಲವ್ ಜಿಹಾದ್ ಅನ್ನು ಬೆಂಬಲಿಸುವ ಕಾಂಗ್ರೆಸ್ಸರವರನ್ನು ಮತ ಹಾಕುವ ಹಿಂದೂಗಳು ಈ ಬಗ್ಗೆ ಯೋಚಿಸುವರೇ ?