ಮಣಿಪುರ ಪ್ರಕರಣ; ಸಂಸತ್ತಿನಲ್ಲಿ ಮುಂದುವರೆದ ಗದ್ದಲ !

`ಆಪ್’ ಸಂಸದರು ಸಂಜಯ ಸಿಂಗ್ ಅಮಾನತು !

ನವ ದೆಹಲಿ – ಮಣಿಪುರದ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ನಡೆಯುತ್ತಿರುವ ಕೋಲಾಹಲ ಜುಲೈ ೨೪ ರಂದು ಮುಂದುವರೆದಿತ್ತು. ಸಂಸತ್ತಿನ ಉಭಯ ಸದನಗಳಲ್ಲಿ ಕಾಣಿಸಿಕೊಂಡಿತು. ಈ ವಿಚಾರದಲ್ಲಿ ಸ್ಪೀಕರ ಅವರು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ ಸಿಂಗ್ ಅವರನ್ನು ರಾಜ್ಯಸಭೆಯಲ್ಲಿ ಅಮಾನತುಗೊಳಿಸಿದ್ದಾರೆ. ಲೋಕಸಭೆಯ ಕೆಲಸವನ್ನು ಮಧ್ಯಾಹ್ನ ೧೨ ಗಂಟೆಯ ವರೆಗೆ ಸ್ಥಗಿತಗೊಳಿಸಲಾಯಿತು. ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮಣಿಪುರದ ವಿಷಯದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಚರ್ಚಿಸಲು ಸರಕಾರ ಸಿದ್ಧವಾಗಿದೆ ಆದರೆ ವಿರೋಧ ಪಕ್ಷಗಳಿಗೆ ಚರ್ಚೆ ಬೇಕಿಲ್ಲ; ಅವರಿಗೆ ಚರ್ಚೆಯ ಹೆಸರಿನಲ್ಲಿ ವಿರೋಧ ನಿಲುವು ನೀಡಬೇಕಾಗಿರುತ್ತದೆ. ಇಂತಹ ಘಟನೆಗಳಲ್ಲಿ ಪ್ರಧಾನ ಮಂತ್ರಿಯವರು ಸಂಸತ್ತಿಗೆ ಉತ್ತರಿಸಲು ಬದ್ಧರಾಗಿರುತ್ತಾರೆ.

ಕಾಂಗ್ರೆಸ್ ನ ಸಾಂಸದ ಶಶೀ ಥರೂರ್ ಇವರು, ಇಂತಹ ಘಟನೆಗಳಲ್ಲಿ ಪ್ರಧಾನ ಮಂತ್ರಿಯವರು ಉತ್ತರ ನೀಡಲೇ ಬೇಕಾಗುತ್ತದೆ. ಜಗತ್ತಿನಲ್ಲಿ ಎಲ್ಲಿಯೂ ಪ್ರಧಾನಿಯನ್ನು ಭೇಟಿಯಾಗುವ ಹಾಗೂ ಪ್ರಶ್ನೆ ಕೇಳುವ ಅವಕಾಶ ಸಿಗುವುದಿಲ್ಲ ಎಂಬುದು ಇಲ್ಲ. ಮೋದಿಯವರು ತೆಗೆದುಕೊಂಡಿರುವ ನಿಲುವು ವಿಚಿತ್ರವಾಗಿದೆ ಎಂದು ಹೇಳಿದರು.

ಸಂಪಾದಕರ ನಿಲುವು

* ಕಳೆದ ಕೆಲವು ದಶಕಗಳಿಂದ ಸಂಸತ್ತಿನಲ್ಲಿ ಗದ್ದಲವಿಲ್ಲದೆ ಏನೂ ನಡೆಯುವುದಿಲ್ಲ ಎಂಬ ಚಿತ್ರಣ ದೇಶ ಮತ್ತು ಜಗತ್ತು ನೋಡುತ್ತಿದೆ. ಇದು ಹೀಗೆಯೇ ಮುಂದುವರಿದರೆ ಸಂಸತ್ತಿನ ನಾಟಕೀಯ ತೋರಪಡೆ ಏಕೆ ? ಹೀಗೆ ಯಾರಿಗಾದರೂ ಅನಿಸಿದರೆ ಇದರಲ್ಲಿ ತಪ್ಪೇನು ?