
ರಾಮನಗರ – ಅಜ್ಞಾತ ಗೋಕಳ್ಳಸಾಗಾಣಿಕೆದಾರರು ಜುಲೈ 21 ರ ರಾತ್ರಿ ಜಿಲ್ಲೆಯ ಬಾಗೀನಗೆರೆ ಗ್ರಾಮದ ರೈತನೊಬ್ಬನ ಕೊಟ್ಟಿಗೆಯಿಂದ 4 ಹಸುಗಳನ್ನು ಕದ್ದೊಯ್ದಿದ್ದಾರೆ. ಆ ಹಸುಗಳನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ ಮಾಂಸ ಮತ್ತು ಚರ್ಮವನ್ನು ಹೊತ್ತೊಯ್ದಿದ್ದಾರೆ ಹಾಗೂ ಹಸುವಿನ ದೇಹದ ಉಳಿದ ಭಾಗವನ್ನು ಅಲ್ಲಿಯೇ ಎಸೆದಿದ್ದಾರೆ. ಈ ಹಸುಗಳು ರಾಮಯ್ಯಾ ಎಂಬ ರೈತನಿಗೆ ಸೇರಿದ್ದು, ಈ ಹಸುಗಳ ಒಟ್ಟು ಮೌಲ್ಯ ಸುಮಾರು 2 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ರಾಮಯ್ಯಾ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ. ಸಾಮಾನ್ಯವಾಗಿ ಹಸುವನ್ನು ಕಳ್ಳತನ ಮಾಡಿ ಯಾರಿಗೂ ತಿಳಿಯದ ರೀತಿಯಲ್ಲಿ ಅವುಗಳನ್ನು ಮುಚ್ಚಿಡಲು ಅಥವಾ ಅವುಗಳ ಕಳ್ಳಸಾಗಣೆ ಮಾಡಿ ದೂರ ಕಳುಹಿಸಲಾಗುತ್ತದೆಯೆಂದು ಹೇಳಲಾಗುತ್ತದೆ; ಆದರೆ ಈ ಪ್ರಕರಣದಲ್ಲಿ ಕಳ್ಳರು ಯಾರ ಹೆದರಿಕೆಯೂ ಇಲ್ಲದಂತೆ ವರ್ತಿಸಿದ್ದಾರೆ ಎಂಬ ಮಾತು ಗ್ರಾಮದಲ್ಲಿ ಚರ್ಚೆಯಾಗುತ್ತಿದೆ.
ರಾಮನಗರದಲ್ಲಿ ಚರ್ಮ, ಮಾಂಸಕ್ಕಾಗಿ ಹಸುಗಳ ಕಳ್ಳತನ#Ramnagar #Cow #Slaughter #LatestNews #Theft #CrimeNews #Police #Farmer #Vijayavanihttps://t.co/dKYHP22GbC
— Vijayavani (@VVani4U) July 22, 2023
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!