ಭಾರತದ ಪೌರತ್ವ ನೀಡುಲು ಮನವಿ !
ನೋಯ್ಡಾ (ಉತ್ತರಪ್ರದೇಶ) – ಪಾಕಿಸ್ತಾನಿ ಮಹಿಳೆ ಸೀಮಾ ಹೈದರಳು ಈಗ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಇವರ ಬಳಿ ದಯಾ ಅರ್ಜಿ ಸಲ್ಲಿಸದ್ದಾಳೆ. ಈಕೆ ಅದರಲ್ಲಿ ಸಚಿನ್ ಇವರ ಪ್ರೀತಿಗಾಗಿ ಭಾರತಕ್ಕೆ ಬಂದಿರುವುದಾಗಿ ಹೇಳಿದ್ದಾಳೆ. ಸೀಮಾ ಹೀರ-ರಾಂಜಾ, ಲೈಲಾ-ಮಜನು ಮತ್ತು ಶಿರಿ-ಫರಹಾದ ಇವರ ಪ್ರೇಮ ಕಥೆಯ ಉಲ್ಲೇಖ ಮಾಡಿದ್ದಾಳೆ. ಚಲನಚಿತ್ರ ನಟಿ ಅಲಿಯಾ ಭಟ್, ಅಕ್ಷಯ್ ಕುಮಾರ ಇವರ ಹೆಸರುಗಳನ್ನು ಕೂಡ ಉಲ್ಲೇಖಿಸುತ್ತ ವಿದೇಶಿ ಪೌರತ್ವ ಇದ್ದರೂ ಕೂಡ ಅವರು ಭಾರತದಲ್ಲಿ ವಾಸಿಸಬಹುದು, ಹಾಗಾದರೆ ನಾನು ಏಕೆ ವಾಸಿಸಲು ಸಾಧ್ಯವಿಲ್ಲ ?’, ಎಂದು ಪ್ರಶ್ನಿಸಿದ್ದಾಳೆ. ಸೀಮಾಳವತಿಯಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಎ. ಪಿ. ಸಿಂಹ ಇವರು ರಾಷ್ಟ್ರಪತಿಯ ಬಳಿ ಮನವಿ ಸಲ್ಲಿಸಿದ್ದಾರೆ. ೩೮ ಪುಟಗಳ ಈ ಮನವಿಯಲ್ಲಿ ಸೀಮಾಳು ರಾಷ್ಟ್ರಪತಿಗಳಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಬೇಕೆಂದು ವಿನಂತಿಸಿದ್ದಾಳೆ.
Pakistani citizen #SeemaHaider filed a plea before President Draupadi Murmu pleading that she should be allowed to live with her lover Sachin Meena in the latter’s home in #UttarPradesh‘s Greater Noida.https://t.co/urcHfJ62ru
— IndiaToday (@IndiaToday) July 22, 2023
ಸೀಮಾ ಹೈದರ್ ಬರೆದಿರುವ ಪತ್ರದಲ್ಲಿನ ಕೆಲವು ಅಂಶಗಳು
೧. ನಾನು ಹಿಂದೂ ಧರ್ಮ ಸ್ವೀಕರಿಸಿದ್ದೇನೆ. ನಾನು ಸುಳ್ಳು ಮಾತನಾಡುತ್ತಿಲ್ಲ. ಉಗ್ರ ನಿಗ್ರಹ ದಳವು ನನ್ನ ವಿಚಾರಣೆ ಮಾಡುತ್ತಿದೆ. ಸಿಬಿಐ, ರಾ, ಎನ್ಐಎ ಇವರು ನನ್ನ ವಿಚಾರಣೆ ನಡೆಸಿದರು, ಅದಕ್ಕಾಗಿ ನಾನು ಸಿದ್ಧಳಿದ್ದೆನೆ .
೨. ನನಗೆ ಭಾರತದ ಪೌರತ್ವ ನೀಡಬೇಕು; ಕಾರಣ ನಾನು ಈಗ ಭಾರತದ ಸೊಸೆಯಾಗಿದ್ದೇನೆ. ನನ್ನ ಮತ್ತು ಸಚಿನ್ ಇವರ ವಿವಾಹವಾಗಿದೆ.
೩. ಬಾಂಗ್ಲಾದೇಶಿ, ಪಾಕಿಸ್ತಾನಿ ಅಥವಾ ಇತರ ದೇಶದಲ್ಲಿನ ಅನೇಕ ಜನರಿಗೆ ಭಾರತದ ಪೌರತ್ವ ನೀಡಲಾಗಿದೆ. ಕಳೆದು ೫ ವರ್ಷಗಳಲ್ಲಿ ೫ ಸಾವಿರದ ೨೨೦ ವಿದೇಶಿ ನಾಗರಿಕರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಈ ಆಧಾರದಲ್ಲಿ ನನಗೂ ಕೂಡ ಪೌರತ್ವ ಸಿಗಬೇಕು. ಎಂದು ಹೇಳಲಾಗಿದೆ.