೧. ಸೀತೆಯ ವಿರಹದಿಂದ ದುಃಖದಲ್ಲಿರುವಾಗ ಪಾರ್ವತಿಯು ಶ್ರೀರಾಮನ ಪರೀಕ್ಷೆ ತೆಗೆದುಕೊಳ್ಳುವುದು !
೨೯.೧.೨೦೨೧ ರಂದು ಮಹರ್ಷಿಗಳು ಹೇಳಿದಂತೆ ನಾವು ಹಂಪಿಯಲ್ಲಿರುವ ‘ನವ ವೃಂದಾ ವನ ಈ ೯ ಸಿದ್ಧರ ಸಮಾಧಿ ಸ್ಥಳಕ್ಕೆ ಹೋಗಿ ಬಂದೆವು. ಅದೇ ದಿನ ಸಾಯಂಕಾಲ ನಾವು ಹಂಪಿಯ ಮಾಲ್ಯವಂತ ಬೆಟ್ಟದ ಮೇಲಿರುವ ಶ್ರೀ ರಘುನಾಥ ದೇವಾಲಯಕ್ಕೆ ದರ್ಶನಕ್ಕೆಂದು ಹೋದೆವು. ಶ್ರೀರಾಮನು ವನವಾಸದಲ್ಲಿರುವಾಗ ೪ ತಿಂಗಳು ಈ ಸ್ಥಳದಲ್ಲಿದ್ದನು. ಅವನು ಅಲ್ಲಿಯೇ ಚಾತುರ್ಮಾಸವನ್ನು ಮಾಡಿದ್ದನು. ಸೀತೆಯ ಅಪಹರಣದ ನಂತರ ರಾಮನು ತುಂಬಾ ನಿರಾಶೆಯಲ್ಲಿದ್ದನು. ಅವನು ಪ್ರತಿಯೊಂದು ಗಿಡ, ಪಶುಪಕ್ಷಿ, ಗುಡ್ಡ, ನದಿ, ಝರಿ ಮುಂತಾದವುಗಳ ಬಳಿ, ‘ನೀವು ಯಾರಾದರು ನನ್ನ ಸೀತೆಯನ್ನು ನೋಡಿದ್ದೀರಾ ? ಎಂದು ಕೇಳುತಿದ್ದನು. ಅವನು ಅತ್ಯಂತ ಭಾವನಾಶೀಲನಾಗಿ ದುಃಖದಿಂದ ಎಲ್ಲೆಡೆ ತಿರುಗಾಡುತ್ತಿದ್ದನು. ಶ್ರೀರಾಮನ ಈ ಸ್ಥಿತಿಯನ್ನು ನೋಡಿ ಸತಿ ಪಾರ್ವತಿಗೆ ಸಂದೇಹ ಬರುತ್ತದೆ, ‘ರಾಮನು ಶ್ರೀವಿಷ್ಣುವಿನ ಅವತಾರನಾಗಿದ್ದಾನೆ, ಹೀಗಿದ್ದಾಗ ಹೆಂಡತಿಗಾಗಿ ಮನುಷ್ಯರಂತೆ ಅಳುತ್ತಾ, ಕೊರಗುತ್ತಾ ಏಕೆ ಇಷ್ಟೊಂದು ಸಂಕಟ ಪಡುತ್ತಿದ್ದಾನೆ ? ಹಾಗಾದರೆ ಖಂಡಿತವಾಗಿ ಅವನು ಭಗವಂತನಲ್ಲ; ಏಕೆಂದರೆ ಭಗವಂತನು ಎಲ್ಲ ದುಃಖಗಳನ್ನು ಮೀರಿರುತ್ತಾನೆ. ಇದರ ಬಗ್ಗೆ ಅವಳು ಶಿವನಿಗೆ ಕೇಳುತ್ತಾಳೆ. ಆಗ ಶಿವನು ಅವಳಿಗೆ, “ಅರೆ ಪಾರ್ವತಿ, ಇದು ಅವತಾರದ ಒಂದು ಲೀಲೆಯೇ ಆಗಿದೆ ಎಂದು ಹೇಳುತ್ತಾನೆ, ಆದರೆ ಪಾರ್ವತಿಗೆ ಅದು ಏನು ಮಾಡಿದರೂ ಒಪ್ಪಿಗೆ ಆಗುವುದಿಲ್ಲ. ಆಗ ಅವಳು “ನಾನು ಶ್ರೀರಾಮನ ಪರೀಕ್ಷೆಯನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಅವಳು ಸೀತೆಯ ರೂಪವನ್ನು ಧರಿಸಿ ಇದೇ ಪರ್ವತದ ಮೇಲೆ ಶ್ರೀರಾಮನ ಮುಂದೆ ಬಂದು ನಿಲ್ಲುತ್ತಾಳೆ. ಅದೇ ಕ್ಷಣ ಶ್ರೀರಾಮಚಂದ್ರನು ಅತ್ಯಂತ ನಮ್ರತೆಯಿಂದ ಅವಳಿಗೆ, “ಮಾತೆ ನನ್ನ ತಂದೆ ಅಂದರೆ, ಶಿವ ಎಲ್ಲಿದ್ದಾನೆ ? ಎಂದು ಕೇಳುತ್ತಾನೆ. ಸಾಕ್ಷಾತ ಆದಿಮಾಯೆಯ ಪರೀಕ್ಷೆಯಲ್ಲಿ ಶ್ರೀರಾಮನು ಉತ್ತೀರ್ಣನಾಗಿ ಅವಳನ್ನು ಗುರುತಿಸುತ್ತಾನೆ. ಆಗ ಸತಿ ಪಾರ್ವತಿಗೆ ‘ನಿಜವಾಗಿಯೂ ಶ್ರೀರಾಮನು ಭಗವಾನ ವಿಷ್ಣುವೇ ಆಗಿದ್ದಾನೆ ಎಂದು ಮನವರಿಕೆಯಾಗುತ್ತದೆ. ಅವಳು ಶ್ರೀರಾಮನಿಗೆ ಕೇಳುತ್ತಾಳೆ, “ನೀವು ನಿಜವಾಗಿಯೂ ಭಗವಂತನೇ ಆಗಿದ್ದೀರಿ, ಹೀಗಿರುವಾಗ ಮನುಷ್ಯರಂತೆ ದುಃಖಿಸುತ್ತಾ ಎಲ್ಲ ಕಡೆಗಳಲ್ಲಿ ಏಕೆ ತಿರುಗಾಡುತ್ತಿದ್ದೀರಿ ? ಆಗ ಶ್ರೀರಾಮನು, “ನನಗೂ ‘ನಾನು ಭಗವಂತನಾಗಿದ್ದೇನೆ, ಎಂಬುದು ಯಾರಿಗೂ ತಿಳಿಯಬಾರದು ಎಂಬ ಮರ್ಯಾದಾ(ಮಿತಿ)ಯಿದೆ ಎಂದು ಹೇಳುತ್ತಾನೆ. ನನಗೆ ಮನುಷ್ಯರಲ್ಲಿ ಮನುಷ್ಯರಂತೆಯೇ ಎಲ್ಲ ರೊಂದಿಗೆ ಕೂಡಿಕೊಂಡು ಎಲ್ಲರಂತೆ ಇರಬೇಕಾಗುತ್ತದೆ. ಆದುದರಿಂದಲೇ ಶ್ರೀರಾಮನಿಗೆ ‘ಮರ್ಯಾದಾ ಪುರುಷೋತ್ತಮ ಎಂಬ ಉಪಾಧಿ ಇದೆ. ಪರಾತ್ಪರ ಗುರು ಡಾ. ಆಠವಲೆ ಯವರದ್ದೂ ಹೀಗೆಯೇ ಆಗಿದೆ ಅಲ್ಲವೇ ! ಅವರು ಸ್ವತಃ ವಿಷ್ಣುಸ್ವರೂಪರಾಗಿದ್ದರೂ ‘ಅವರು ಯಾರು ಎಂಬುದನ್ನು ಯಾರಿಗೂ ತಿಳಿಯಗೊಡುವುದಿಲ್ಲ, ‘ನಾನೇನು ಮಾಡುವುದಿಲ್ಲ. ಭಗವಂತನೇ ಎಲ್ಲವನ್ನು ಮಾಡುತ್ತಾನೆ ಎಂದು ಹೇಳುತ್ತಿರುತ್ತಾರೆ.
೨. ಶ್ರೀರಾಮನು ಸಾಕ್ಷಾತ ಭಗವಂತನಾಗಿದ್ದರೂ ರಾವಣನನ್ನು ಸಾಯಿಸಲು ಅವನಿಗೆ ಯೋಗ್ಯ ಸಮಯ ಬರುವವರೆಗೂ ಕಾಯಬೇಕಾಯಿತು
ಶ್ರೀರಾಮನು ಸಾಕ್ಷಾತ ಭಗವಂತನಾಗಿರುವುದರಿಂದ ಸುಗ್ರೀವ ಮತ್ತು ಇತರ ವಾನರಸೇನೆಯೊಂದಿಗೆ ಅವನು ಕೂಡಲೇ ರಾವಣನ ಜೊತೆಗೆ ಯುದ್ಧ ಮಾಡಲು ಹೋಗಬಹುದಾಗಿತ್ತು; ಆದರೆ ಅವನು ಹಾಗೆ ಮಾಡಲಿಲ್ಲ. ಅವನು ೪ ತಿಂಗಳು ಮಾಲ್ಯವಂತ ಪರ್ವತದ ಮೇಲಿದ್ದು ಚಾತುರ್ಮಾಸವನ್ನು ಮಾಡಿದನು. ದೇವಾಲಯದ ಅರ್ಚಕರಿಗೆ ಇದರ ಬಗ್ಗೆ ಕೇಳಿದಾಗ ಅವರು, “ಭಗವಂತನು ಯೋಗ್ಯ ಸಮಯದ ದಾರಿ ಕಾಯುತ್ತಿದ್ದನು ಎಂದು ಹೇಳಿದರು. ಪ್ರತಿಯೊಂದಕ್ಕೆ ಸಮಯ ಬರಬೇಕಾಗುತ್ತದೆ. ಇದು ಕೂಡ ಹಾಗೆಯೇ ಆಗಿದೆ. ರಾವಣನನ್ನು ಕೊಲ್ಲುವ ಸಮಯವೂ ಸುನಿಶ್ಚಿತವಾಗಿತ್ತು. ಇದರಿಂದ ಕಾಲಚಕ್ರವು ಪ್ರತ್ಯಕ್ಷ ಭಗವಂತನ ಅವತಾರವನ್ನೂ ಸಮಯಚಕ್ರದಲ್ಲಿ ಬಂಧಿಸಿರುವಾಗ, ನಮ್ಮಂತಹವರ ಗತಿ ಏನು ?, ಎಂಬುದು ಗಮನಕ್ಕೆ ಬರುತ್ತದೆ.
೩. ಎಂಟನೆಯ ಶತಮಾನದಲ್ಲಿ ಚೋಳರಾಜನು ಕಟ್ಟಿದ ದೇವಾಲಯದಲ್ಲಿನ ಅತ್ಯಂತ ನುಣುಪಾದ, ಸುಂದರ ಕಪ್ಪು ಕಲ್ಲಿನ ಮೂರ್ತಿಗಳು
ಈ ಪರ್ವತದ ಮೇಲೆ ಶ್ರೀರಾಮನ ಸುಂದರ ದೇವಾಲಯ ವಿದೆ. ಈ ದೇವಾಲಯವನ್ನು ಎಂಟನೆಯ ಶತಮಾನದಲ್ಲಿ ಚೋಳ ರಾಜನು ಕಟ್ಟಿದ್ದಾನೆ. ಇಲ್ಲಿ ಶ್ರೀರಾಮನ ಮೂರ್ತಿಯು ಕುಳಿತುಕೊಂಡ ರೂಪದಲ್ಲಿದೆ. ಹೆಚ್ಚಾಗಿ ರಾಮನ ಕುಳಿತಿರುವ ವಿಗ್ರಹವು ಎಲ್ಲಿಯೂ ಕಂಡುಬರುವುದಿಲ್ಲ. ಇಲ್ಲಿ ಮೂರ್ತಿಯ ಒಂದು ಬದಿಗೆ ಲಕ್ಷ್ಮಣನ ಮತ್ತು ಇನ್ನೊಂದು ಬದಿಗೆ ಸೀತೆಯ ಮೂರ್ತಿ ಇದೆ. ಆಂಜನೇಯನು (ಹನುಮಾನನು) ಶ್ರೀರಾಮನ ಎದುರು ಸೀತೆಯು ನೀಡಿದ ಚೂಡಾಮಣಿಯ ಚಿಹ್ನೆಯನ್ನು ತೋರಿಸುತ್ತಾ ಬೊಗಸೆಯನ್ನು ಹರಡಿ ಕುಳಿತಿದ್ದಾನೆ. ನಾಲ್ಕೂ ಮೂರ್ತಿಗಳು ಬಹಳ ನುಣಪಾಗಿದ್ದು, ಕಪ್ಪು ಕಲ್ಲಿನ ಮೂರ್ತಿಗಳಾಗಿವೆ.
೪. ಶ್ರೀರಾಮನು ಸುಗ್ರೀವ ಮತ್ತು ಇತರ ವಾನರರೊಂದಿಗೆ ಲಂಕೆಗೆ ಹೋಗಿ ರಾವಣನನ್ನು ವಧಿಸುವ ಯೋಜನೆಯನ್ನು ಮಾಡಿದ ಸ್ಥಳವೆಂದರೆ ಈ ಗುಹೆ !
ಶ್ರೀರಾಮನು ಈ ಗುಹೆಯಲ್ಲಿದ್ದು ಸುಗ್ರೀವ ಮತ್ತು ವಾನರರೊಂದಿಗೆ ಲಂಕೆಗೆ ಹೋಗಿ ರಾವಣನನ್ನು ವಧಿಸುವ ಯೋಜನೆಯನ್ನು ಮಾಡಿದ್ದನು. ದೇವಾಲಯದ ಹಿಂಬದಿಗೆ ಗುಹೆಯ ಆಕಾರವು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಗುಹೆಯ ಆಕಾರವು ‘ಶೇಷನು ಅವನ ಛತ್ರವನ್ನು (ಹೆಡೆಯನ್ನು) ಈ ಗುಹೆಯ ಮೇಲೆ ಹಿಡಿದಿರುವ ಹಾಗೆ ಇದೆ. ಅರ್ಚಕರು ನಮಗೆ ಹಿಂದಿನಿಂದ ಆ ಗುಹೆಯಲ್ಲಿನ ಕಲ್ಲಿನ ಆಕಾರವನ್ನು ತೋರಿಸಿದರು. ಈ ಭಾಗವು ಕಾಡಿನಲ್ಲಿದೆ. ಕೆಲವೊಮ್ಮೆ ಚಿರತೆ, ಹುಲಿ ಇಂತಹ ಕಾಡು ಪ್ರಾಣಿಗಳು ಇಲ್ಲಿ ಬರುತ್ತವೆ. ಆದುದರಿಂದ ‘ತ್ರೇತಾಯುಗದಲ್ಲಿ ರಾಮನು ೪ ತಿಂಗಳು ಇಂತಹ ಸ್ಥಳದಲ್ಲಿ ಹೇಗೆ ಇದ್ದಿರಬಹುದು ?, ಇದರ ಕಲ್ಪನೆಯನ್ನು ಮಾಡದಿರುವುದೇ ಒಳ್ಳೆಯದು !
ಈ ಭವ್ಯ ದೇವಾಲಯವನ್ನು ನೋಡುವಾಗ ‘ಆ ಕಾಲದಲ್ಲಿ ಇಷ್ಟು ದೊಡ್ಡ ಕಲ್ಲುಗಳನ್ನು ಒಯ್ದು ದೇವಸ್ಥಾನವನ್ನು ಹೇಗೆ ಕಟ್ಟಿರಬಹುದು ? ಇದರ ಕಲ್ಪನೆ ಮಾಡಲೂ ಬರುವುದಿಲ್ಲ. ನಿಜವಾಗಿಯೂ ನಮ್ಮ ಮಹಾನ ಪೂರ್ವಜರು, ದೈವೀ ಮತ್ತು ಧರ್ಮಶಾಸ್ತ್ರಸಂಪನ್ನ ಶಿಲ್ಪಿಗಳು ಮತ್ತು ಇಂತಹವರಿಗೆ ರಾಜಾಶ್ರಯ ನೀಡಿದ ರಾಜರು ಇವರೆಲ್ಲರಿಗೂ ನಮ್ಮ ಕೋಟಿ ಕೋಟಿ ನಮಸ್ಕಾರಗಳು !
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ನಂದ್ಯಾಳ, ಆಂಧ್ರಪ್ರದೇಶ. (೧.೨.೨೦೨೧, ಬೆಳಗ್ಗೆ ೧೦.೩೩)