ಪ್ರಧಾನಮಂತ್ರಿ ಮೋದಿಯವರಿಂದ ವಿರೋಧ ಪಕ್ಷಗಳ ಸಭೆಯ ಕುರಿತು ಟೀಕೆ
ನವ ದೆಹಲಿ – ಕೆಲವು ದಿನಗಳ ಹಿಂದೆ ಬಂಗಾಳದಲ್ಲಿ ಪಂಚಾಯತಿ ಚುನಾವಣೆ ವೇಳೆ ವ್ಯಾಪಕ ಹಿಂಸಾಚಾರ ನಡೆದಿತ್ತು. ರಕ್ತಪಾತವಾಯಿತು; ಆದರೆ ಅಂದು ದೇಶದ ವಿರೋಧಿ ಪಕ್ಷಗಳು ಬಾಯಿ ಮುಚ್ಚಿದ್ದರು. ಕಾಂಗ್ರೆಸ್ ಮತ್ತು ಸಿಪಿಐ(ಎಂ) ಕಾರ್ಯಕರ್ತರು ತಮ್ಮನ್ನು ಉಳಿಸುವಂತೆ ಕರೆ ನೀಡುತ್ತಿದ್ದರು; ಆದರೆ ಈ ಪಕ್ಷಗಳ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಕಾರ್ಯಕರ್ತರನ್ನು ಸಾಯಲು ಬಿಟ್ಟಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು. ಅವರು ಅಂಡಮಾನ್ ಮತ್ತು ನಿಕೋಬಾರ್‌ನ ಪೋರ್ಟ್ ಬ್ಲೇರ್‌ನ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ‘ಟರ್ಮಿನಲ್’ ಕಟ್ಟಡದ ಆನ್‌ಲೈನ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಬೆಂಗಳೂರಿನಲ್ಲಿ ಭಾಜಪದ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಕುರಿತು ಮೋದಿಯವರು ಟೀಕೆ ಮಾಡಿದ್ದಾರೆ.
परिवारवादी पार्टियों का मंत्र है- Of the Family, By the Family, For the Family
इनका Motto है- Family First, Nation Nothing. pic.twitter.com/UQNNOCru43
— Narendra Modi (@narendramodi) July 18, 2023
ಪ್ರಧಾನಿ ಮೋದಿ ಭ್ರಷ್ಟಾಚಾರದ ಕುರಿತು ವಿರೋಧ ಪಕ್ಷಗಳನ್ನು ಟೀಕಿಸಿದರು. ಅವರು, (ಕಾಂಗ್ರೆಸ್ ಆಡಳಿತವಿರುವ) ರಾಜಸ್ಥಾನದಲ್ಲಿ ಹುಡುಗಿಯರ ಮೇಲಿನ ದೌರ್ಜನ್ಯ ಅಥವಾ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವೇ ಆಗಿರಲಿ, ಪ್ರತಿಪಕ್ಷಗಳಿಗೆ ಏನೂ ಕಾಣಿಸುತ್ತಿಲ್ಲ. ಪರಿವರ್ತನೆಯ ಹೆಸರಿನಡಿಯಲ್ಲಿ ಜನರ ವಿಶ್ವಾಸಘಾತ ಮಾಡಿ ಮದ್ಯ ಹಗರಣ ಮಾಡಲಾಗುತ್ತದೆ, ಆಗ ಅವರ ಗುಂಪಿನ ಜನರು ಅಂತಹವರನ್ನು ಬೆಂಬಲಿಸುತ್ತಾರೆ. ತಮಿಳುನಾಡಿನಲ್ಲಿ ಭ್ರಷ್ಟಾಚಾರ ಪ್ರಕರಣಗಳು ಹೊರಗೆ ಬರುತ್ತಿವೆ; ಆದರೆ ಈ ಗುಂಪಿನಿಂದ ಎಲ್ಲರನ್ನು ನಿರಪರಾಧಿಗಳೆಂದು ಹೇಳುತ್ತಿದ್ದಾರೆ. ಇವೆಲ್ಲವು ವಿರೋಧಿ ಪಕ್ಷಗಳ ಜನರ ಷಡ್ಯಂತ್ರ್ಯದ ನಡುವೆಯೇ ನಮ್ಮನ್ನು ನಾವು ಭಾರತದ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕಾಗಿದೆ. ವಿರೋಧ ಪಕ್ಷಗಳಿಗೆ ಒಂದೇ ಒಂದು ಸಿದ್ಧಾಂತವಿದೆ, ಅದೆಂದರೆ ‘ತಮ್ಮ ಕುಟುಂಬಗಳನ್ನು ಉಳಿಸಿ ಮತ್ತು ಕುಟುಂಬಗಳಿಗಾಗಿ ಭ್ರಷ್ಟಾಚಾರವನ್ನು ಹೆಚ್ಚಿಸಿ’ ಎಂದು ಆಗಿದೆಯೆಂದು ಹೇಳಿದರು.