ಸೋಮನಾಥ ದೇವಾಲಯದ ಮೇಲೆ ಘಜ್ನಿಯ ದಾಳಿಯ ಸಮಯದಲ್ಲಿ ನಡೆದ ಯುದ್ಧದ ಚಿತ್ರಣ
ಟೀಸರ್ (ಸಣ್ಣ ಜಾಹೀರಾತು)
ಮುಂಬಯಿ – ‘ದಿ ಬ್ಯಾಟಲ್ ಸ್ಟೋರಿ ಆಫ್ ಸೋಮನಾಥ್’ (ಸೋಮನಾಥನ ಯುದ್ಧದ ಕಥೆ) ಈ ಹಿಂದಿ ಚಲನಚಿತ್ರದ ಟೀಸರ್ (ಸಣ್ಣ ಜಾಹೀರಾತು) ಬಿಡುಗಡೆ ಮಾಡಲಾಗಿದೆ. ಈ ಚಲನಚಿತ್ರದಲ್ಲಿ ಮಹಮ್ಮದ ಘಜ್ನಿಯು ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ಸಮಯದಲ್ಲಿ ನಡೆದ ಯುದ್ಧದ ಘಟನೆಗಳನ್ನು ಚಿತ್ರಿಸಲಾಗಿದೆ. ಸ್ವಾತಂತ್ರ್ಯದ ನಂತರ ಸರ್ದಾರ ವಲ್ಲಭಭಾಯಿ ಪಟೇಲ ಅವರು ಈ ದೇವಾಲಯದ ಜೀರ್ಣೋದ್ಧಾರ ಮಾಡಿದ ಬಗ್ಗೆ ಹೇಳಲಾಗಿದೆ. ವಿಶೇಷಯೆಂದರೆ ಈ ಚಿತ್ರ ೧೨ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮನೀಷ ಮಿಶ್ರಾ ಅವರು ಈ ಚಲನಚಿತ್ರದ ನಿರ್ಮಾಪಕ ಮತ್ತು ಬರಹಗಾರರಾಗಿದ್ದು, ಅನುಪ ಥಾಪಾ ಇವರು ನಿರ್ದೇಶಕರಾಗಿದ್ದಾರೆ. ಚಲನಚಿತ್ರದಲ್ಲಿನ ನಟರು ಯಾರು ? ಮತ್ತು ಈ ಚಲನಚಿತ್ರ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ.
(ಸೌಜನ್ಯ – V Series)
ಈ ಚಲನಚಿತ್ರದಲ್ಲಿ ಸೋಮನಾಥ ದೇವಾಲಯದಲ್ಲಿರುವ ಶಿವಲಿಂಗದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಸತ್ಯಯುಗದಲ್ಲಿ ಚಂದ್ರನು ಚಿನ್ನದಿಂದ ಶಿವಲಿಂಗ ಮಾಡಿದ್ದರೆ, ತ್ರೇತಾಯುಗದಲ್ಲಿ ರಾವಣನು ತಾಮ್ರದಿಂದ ಶಿವಲಿಂಗ ಮಾಡಿದ್ದನು. ದ್ವಾಪರ ಯುಗದಲ್ಲಿ ಭಗವಾನ ಶ್ರೀಕೃಷ್ಣನು ಅದನ್ನು ಮರದಿಂದ ಮಾಡಿದ್ದರು.
The Battle Story of Somnath” written & directed by Anup thapa is being announced today on the auspicious occasion of Sawan Shivratri.
This pan-India film will be made in Hindi and Telugu & it will release in 12 languages,under the banner of 2Idiots Films, produced by Manish… pic.twitter.com/WAVkNkrT6K
— Sumit Kadel (@SumitkadeI) July 15, 2023