ಮೇಘಾಲಯದ ಕ್ಯಾಥೊಲಿಕ್ ಚರ್ಚ್ ನಿಂದ ಏಕರೂಪ ನಾಗರಿಕ ಸಂಹಿತೆಗೆ ಬಲವಾಗಿ ವಿರೋಧ !
ಶಿಲ್ಲಾಂಗ್ (ಮೇಘಾಲಯ) – ಕೇಂದ್ರ ಸರಕಾರದ ಉದ್ದೇಶಿತ `ಏಕರೂಪ ನಾಗರಿಕ ಕಾನೂನು’ ಅನ್ನು ಇಲ್ಲಿಯವರೆಗೆ ಮುಸಲ್ಮಾನ ಸಂಘಟನೆಗಳು ವಿರೋಧಿಸಿವೆ. ಈಗ ಕ್ರೈಸ್ತ ಚರ್ಚಗಳು ಮತ್ತು ಸಂಘಟನೆಗಳು ಧುಮುಕಿವೆ. ಈಶಾನ್ಯ ಭಾರತದ ಪ್ರಮುಖ ಕ್ಯಾಥೊಲಿಕ್ ಚರ್ಚ ಏಕರೂಪ ನಾಗರಿಕ ಸಂಹಿತೆಗೆ ವಿರೋಧ ವ್ಯಕ್ತಪಡಿಸಿದೆ ಹಾಗೂ ಆಕ್ಷೇಪಿಸಿ ಕಾನೂನು ಆಯೋಗಕ್ಕೆ ಪತ್ರವನ್ನು ಬರೆದಿದೆ. ಚರ್ಚ್ ನ ಪ್ರಕಾರ ಸಂವಿಧಾನದ 341 ಮತ್ತು 342 ವಿಧಿಗಳು ಬುಡಕಟ್ಟು ಸಮುದಾಯಗಳಿಗೆ ವಿಶೇಷ ಹಕ್ಕು ಮತ್ತು ಸೌಲಭ್ಯಗಳನ್ನು ಒದಗಿಸುತ್ತವೆ. ಈ ಕಾನೂನಿನಿಂದ ಇವು ನಷ್ಟವಾಗುತ್ತದೆ. ಸರಕಾರಕ್ಕೆ ಈ ಕಾನೂನು ರೂಪಿಸಲು ಇಷ್ಟೊಂದು ಆತುರ ಏಕೆ ? ಎಂದು ಕೇಳಿದೆ.
ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸದಂತೆ ಒತ್ತಾಯಿಸಿ ಚರ್ಚ್ ತನ್ನ ಪತ್ರದಲ್ಲಿ, ನಮ್ಮ ದೇಶ ವೈವಿಧ್ಯತೆಯಿಂದ ಕೂಡಿರುವುದರಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಾರದು ಎಂದು ನಾವು ಭಾರತ ಸರಕಾರಕ್ಕೆ ವಿನಂತಿಸುತ್ತೇವೆ ಎಂದು ಬರೆದಿದೆ. ನಮ್ಮ ರಾಜ್ಯದ ಜನರಿಗೆ ಅವರ ಪದ್ಧತಿ, ಪರಂಪರೆ, ನಂಬಿಕೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಏಕರೂಪ ನಾಗರಿಕ ಸಂಹಿತೆಯ ಮಾಧ್ಯಮದಿಂದ ಅವುಗಳನ್ನು ವಿಕೃತಗೊಳಿಸಲು ಅನುಮತಿ ನೀಡಲು ಸಾಧ್ಯವಿಲ್ಲ. ಈ ಕಾನೂನು ಧಾರ್ಮಿಕ ಸಮೂಹಗಳಿಗೆ ತಮ್ಮ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯ ನೀಡುವ ಸಂವಿಧಾನದ ಕಲಂ 25ರ ವಿರುದ್ಧವಾಗಿದೆ ಎಂದು ಹೇಳಿದೆ.
ಕಳೆದ ತಿಂಗಳು ನಾಗಾಲ್ಯಾಂಡ ಸರಕಾರ, ಗೃಹಸಚಿವ ಅಮಿತ ಶಹಾ ಇವರು, ಕ್ರೈಸ್ತ ಸಮುದಾಯ ಮತ್ತು ಕೆಲವು ಬುಡಕಟ್ಟು ಪ್ರದೇಶಗಳನ್ನು ಏಕರೂಪ ನಾಗರಿಕ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲು ಪರಿಗಣಿಸುವುದಾಗಿ ತಮ್ಮ ನಿಯೋಗಕ್ಕೆ ಆಶ್ವಾಸನೆಯನ್ನು ನೀಡಿದ್ದಾರೆಂದು ಹೇಳಿತ್ತು.
Catholic Church of Meghalaya objects to UCC implementation in #Meghalaya, raises concerns over religious freedom and tribal rights. Written appeal submitted to Law Commission of India. #UCC #CatholicChurchhttps://t.co/IpaYU3HLPt
— India Today NE (@IndiaTodayNE) July 14, 2023
ಸಂಪಾದಕರ ನಿಲುವು* ಭಾರತದ ಪ್ರತಿಯೊಬ್ಬ ನಾಗರಿಕನಿಗೆ ನ್ಯಾಯ ಮತ್ತು ಸಮಾನ ಹಕ್ಕುಗಳನ್ನು ಒದಗಿಸುವ `ಏಕರೂಪ ನಾಗರಿಕ ಕಾನೂನು’ ಕುರಿತು ತಪ್ಪು ಮಾಹಿತಿ ಹರಡುತ್ತಿರುವ ಕ್ರೈಸ್ತ ಸಂಘಟನೆಗಳ ವಿರುದ್ಧ ಕ್ರಮ ಕೈಕೊಳ್ಳಬೇಕು ! * `ಎಲ್ಲ ಧರ್ಮೀಯರನ್ನು ಸಮಾನವಾಗಿ ಕಾಣಬೇಕು’ ಎಂದು ಒತ್ತಾಯಿಸುವ ಕ್ರೈಸ್ತರು, ಸರಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸಲು ಪ್ರಾರಂಭಿಸಿದಾಗ, ಅದನ್ನು ವಿರೋಧಿಸುತ್ತಾರೆ ಎನ್ನುವುದನ್ನು ಗಮನಿಸಬೇಕು ! |