ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದರಿಂದ ಹಿಂದೂ ಕಾರ್ಮಿಕರ ಮೇಲೆ ಗುಂಡಿನ ದಾಳಿ : ಮೂವರಿಗೆ ಗಾಯ

ಶೋಪೀಯಾ (ಜಮ್ಮು-ಕಾಶ್ಮೀರ) – ಇಲ್ಲಿಯ ಗಗರಾನ ಗ್ರಾಮದಲ್ಲಿ ಜಿಹಾದಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ೩ ಹಿಂದೂ ಕಾರ್ಮಿಕರು ಗಾಯಗೊಂಡಿದ್ದಾರೆ. ಭಯೋತ್ಪಾದಕರು ಅವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದರು. ಈ ಕಾರ್ಮಿಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅನಮೋಲ ಕುಮಾರ, ಪಿಂಟುಕುಮಾರ ಠಾಕೂರ ಮತ್ತು ಹೀರಾಲಾಲ ಯಾದವ ಎಂದು ಗಾಯಗೊಂಡವರ ಹೆಸರುಗಳಿವೆ. ಇವರು ಬಿಹಾರದವರಾಗಿದ್ದಾರೆ. ರಾಜ್ಯದ ಉಪರಾಜ್ಯಪಾಲ ಮನೋಜ ಸಿಂಹ ಇವರು ಈ ದಾಳಿಯನ್ನು ಖಂಡಿಸಿದ್ದಾರೆ. ‘ಭಯೋತ್ಪಾದಕರಿಗೆ ಶಿಕ್ಷೆ ನೀಡುವುದಕ್ಕಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡುವೆವು. ಹಾಗೂ ಗಾಯಗೊಂಡವರಿಗೆ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು’, ಎಂದು ಅವರು ಹೇಳಿದರು.

ಜಮ್ಮು-ಕಾಶ್ಮೀರದ ಭಾಜಪದ ವಕ್ತಾರರು ಅಲ್ತಾಫ್ ಠಾಕೂರ ಇವರು, ಭಯೋತ್ಪಾದಕರು ಶಸ್ತ್ರರಹಿತ ಮತ್ತು ಬೇರೆ ರಾಜ್ಯದ ಕಾರ್ಮಿಕರ ಮೇಲೆ ಮಾಡಿರುವ ದಾಳಿಯನ್ನು ನಾವು ಖಂಡಿಸುತ್ತೇವೆ. ಎಂದು ಹೇಳಿದರು.

ಸಂಪಾದಕರ ನಿಲುವು

* ಕಾಶ್ಮೀರದಲ್ಲಿ ಇಲ್ಲಿಯವರೆಗೂ ಸ್ಥಳೀಯ ಮತ್ತು ಬೇರೆ ರಾಜ್ಯದ ಹಿಂದುಗಳು ಸುರಕ್ಷಿತವಾಗಿಲ್ಲ, ಇಂತಹ ಘಟನೆಯಿಂದ ತಿಳಿದು ಬರುತ್ತದೆ. ಈ ಪರಿಸ್ಥಿತಿ ಬದಲಾಯಿಸುವುದಕ್ಕಾಗಿ ಹಿಂದೂ ರಾಷ್ಟ್ರ ಬಿಟ್ಟರೆ ಪರ್ಯಾಯವಿಲ್ಲ !