‘ನಿಮ್ಮ ಧರ್ಮವನ್ನು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಇಟ್ಟುಕೊಳ್ಳಿ’ ಎಂದು ಮಹಿಳೆಯಿಂದ ಛೀಮಾರಿ !
ಬೆಂಗಳೂರು – ಮಹಿಳಾ ಪ್ರಯಾಣಿಕರೊಬ್ಬರು ಮುಸಲ್ಮಾನ ಕಂಡಕ್ಟರಗೆ ಗೋಲು ಟೋಪಿ ಧರಿಸಿದ್ದನ್ನು ವಿರೋಧಿಸಿ ಅದನ್ನು ತೆಗೆಯುವಂತೆ ಅನಿವಾರ್ಯಗೊಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯು ಟೋಪಿಯನ್ನು ತೆಗೆದುಹಾಕಲು ಕಂಡಕ್ಟರ್ ಗೆ ಹೇಳಿದಾಗ ಇಬ್ಬರ ನಡುವೆ ವಾದ ಆಯಿತು; ಆದರೆ ನಂತರ ಕಂಡಕ್ಟರ ಟೋಪಿಯನ್ನು ತೆಗೆದಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಮಹಿಳೆಯು ಮುಸಲ್ಮಾನ ಕಂಡಕ್ಟರನಿಗೆ ‘ನೀವು ನಿಮ್ಮ ಧರ್ಮವನ್ನು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಇಟ್ಟುಕೊಳ್ಳಿ’ ಎಂದು ಕಪಾಳಮೋಕ್ಷ ಮಾಡಿದ್ದಾರೆ.
Woman Forces Muslim BMTC Conductor To Remove His Kufi (Cap) | ಮುಸ್ಲಿಂ ಕಂಡಕ್ಟರ್ ಧರಿಸಿದ್ದ ಟೋಪಿ ತೆಗೆಸಿದ ಮಹಿಳೆ#bmtc #bmtcbus #busconductor #muslim #kufi #bengaluru #vijayavani #kannadanews #karnatakanews #karnatakalatestnews #muslimcommunity #kannadalivehttps://t.co/bEMVoL9b6o
— Vijayavani (@VVani4U) July 13, 2023
ಮುಸಲ್ಮಾನ ಕಂಡಕ್ಟರರು ಕೆಲಸ ಮಾಡುವಾಗ ಸಮವಸ್ತ್ರದೊಂದಿಗೆ ಗೋಲು ಟೋಪಿ ಧರಿಸಿದ್ದರಿಂದ ಈ ಮಹಿಳೆಯು ಗೋಲು ಟೋಪಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾಳೆ. ‘ಸಮವಸ್ತ್ರದೊಂದಿಗೆ ಟೋಪಿ ಧರಿಸಲು ಅನುಮತಿ ಇದೆಯೇ ? ಈ ಟೋಪಿ ನಿಮ್ಮ ಯುನಿಫಾರ್ಮ್ ನಲ್ಲಿದೆಯೇ ?” ಎಂದು ಕಂಡಕ್ಟರ್‌ಗೆ ಕೇಳಿದಾಗ, ಮುಸಲ್ಮಾನ ಕಂಡಕ್ಟರ್ ‘ನಾನು ತುಂಬಾ ವರ್ಷಗಳಿಂದ ಟೋಪಿ ಹಾಕಿಕೊಳ್ಳುತ್ತೇನೆ ಯಾರೂ ಇದನ್ನು ವಿರೋಧಿಸಲಿಲ್ಲ’ ಎಂದು ಉತ್ತರಿಸಿದನು, ತದನಂತರ ಇಬ್ಬರಲ್ಲೂ ವಾದವಿವಾದ ಆಯಿತು. ಕಂಡಕ್ಟರ್, ‘ನಾನು ಟೋಪಿ ಹಾಕಬಹುದು’ ಎಂದು ಹೇಳಿದ.’ (ಹೀಗೆ ಉದ್ದಟತನದಿಂದ ವರ್ತಿಸುವವರನ್ನು ಕೆಲಸದಿಂದ ವಜಾಗೊಳಿಸುವಂತೆ ಜನರು ಪ್ರಯತ್ನಿಸಬೇಕು ! – ಸಂಪಾದಕರು) ಆಗ ಆ ಮಹಿಳೆಯು ‘ನಿಮಗೆ ರೂಲ್ಸ್ ಸರಿಯಾಗಿ ಗೊತ್ತಿಲ್ಲ. ಟೋಪಿ ತೆಗೆದು ನೀವು ರೂಲ್ಸ್ ಗಳನ್ನು ಫಾಲೋ ಮಾಡಬೇಕು.’ ಎಂದು ಹೇಳಿದಾಗ ಕಂಡಕ್ಟರನು ಟೋಪಿಯನ್ನು ತೆಗೆದನು. (ಈ ಮುಸಲ್ಮಾನ ಕಂಡಕ್ಟರ್ ಮತ್ತೆ ಟೋಪಿ ಹಾಕುವುದಿಲ್ಲ ಎಂದು ಯಾರಾದರೂ ಭರವಸೆ ನೀಡುತ್ತಾರೆಯೇ ? ಇದಕ್ಕಾಗಿ ಹಿಂತವರಿಗೆ ನಿಯಮಗಳ ಪ್ರಕಾರ ಶಿಕ್ಷೆಯಾಗುವುದು ಅವಶ್ಯಕವಾಗಿದೆ ! – ಸಂಪಾದಕರು)
ಸಂಪಾದಕೀಯ ನಿಲುವುಕಂಡಕ್ಟರ್ಗಳು ಸಮವಸ್ತ್ರದಲ್ಲಿರುವಾಗ ಗೋಲು ಧಾರ್ಮಿಕ ಟೋಪಿ ಹಾಕುವಂತಿಲ್ಲ ಎಂಬ ನಿಯಮ ಇರುವಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಇದು ಕಂಡಿಲ್ಲವೇ ಅಥವಾ ಭಯದಿಂದ ಬಾಲ ಮುದುಡಿ ಕೂತಿದ್ದರೇ ? |