ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ `ಇಸ್ಕಾನ್’ನ ಧಾರ್ಮಿಕ ಮುಖಂಡ ಅಮೋಘ ಲೀಲಾ ದಾಸ ಮೇಲೆ ನಿರ್ಬಂಧ

(ಇಸ್ಕಾನ್ ಎಂದರೆ `ಇಂಟರನ್ಯಾಶನಲ್ ಸೊಸಾಯಟಿ ಫಾರ ಕೃಷ್ಣಾ ಕಾನ್ಷಿಯಸ್ ನೆಸ್)

ಕೋಲಕಾತಾ (ಬಂಗಾಳ) – `ಇಸ್ಕಾನ್’ ಸಂಸ್ಥೆಯು ಧಾರ್ಮಿಕ ಮುಖಂಡ ಅಮೋಘ ಲೀಲಾ ದಾಸ ಮೇಲೆ ಒಂದು ತಿಂಗಳ ಮಟ್ಟಿಗೆ ನಿರ್ಬಂಧ ಹೇರಿದೆ. ಇಸ್ಕಾನ್, `ಅಮೋಘ ಲೀಲಾ ದಾಸ ಇವರು ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಪರಮಹಂಸರ ವಿಷಯದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಉಂಟಾದ ವಿವಾದದ ಬಳಿಕ ದಾಸರ ಮೇಲೆ ನಿರ್ಬಂಧ ಹೇರಲು ನಿರ್ಣಯಿಸಲಾಗಿದೆ’ ಎಂದು ಹೇಳಿದೆ. ಅಮೋಘ ಲೀಲಾ ದಾಸರು ತಮ್ಮ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಿದ್ದಾರೆ. ಹಾಗೆಯೇ ಅವರು ಒಂದು ತಿಂಗಳು ಗೋವರ್ಧನ ಪರ್ವತಕ್ಕೆ ಹೋಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಅಮೋಘ ಲೀಲಾ ದಾಸರು ಸ್ವಾಮಿ ವಿವೇಕಾನಂದರು ಮೀನು ತಿನ್ನುವುದರ ಬಗ್ಗೆ `ಒಬ್ಬ ಸಜ್ಜನ ವ್ಯಕ್ತಿ ಎಂದಿಗೂ ಯಾವುದೇ ಪ್ರಾಣಿಗೆ ಹಾನಿಯನ್ನುಂಟು ಮಾಡುವುದಿಲ್ಲ’ ಮತ್ತು ರಾಮಕೃಷ್ಣ ಪರಮಹಂಸರ `ಎಷ್ಟು ಮತಗಳಿವೆಯೋ ಅಷ್ಟು ಮಾರ್ಗಗಳು’ ಈ ವಿಚಾರವನ್ನು ಅಪಹಾಸ್ಯ ಮಾಡಿ ಟೀಕಿಸುತ್ತಾ, `ಪ್ರತಿಯೊಂದು ಮಾರ್ಗ ಒಂದೇ ಗುರಿಯತ್ತ ಕೊಂಡೊಯ್ಯುವುದಿಲ್ಲ’ ಎಂದು ಹೇಳಿದ್ದರು. ತೃಣಮೂಲ ಕಾಂಗ್ರೆಸ್ಸಿನ ರಾಜ್ಯ ಕಾರ್ಯದರ್ಶಿ ಕುಣಾಲ ಘೋಷ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಮೋಘ ಲೀಲಾ ದಾಸರ ಮೇಲೆ ಕ್ರಮ ಕೈಕೊಳ್ಳಬೇಕೆಂದು ಹೇಳಿದ್ದರು.