ಗಾಜಿಯಾಬಾದ (ಉತ್ತರಪ್ರದೇಶ) – ಇಲ್ಲಿಯ ಪೊಲೀಸರು ಮತಾಂತರದಲ್ಲಿ ತೊಡಗಿರುವ ಒಂದು ತಂಡದ ಷಡ್ಯಂತ್ರ ವಿಫಲಗೊಳಿಸುತ್ತಾ ಮೊಹಮ್ಮದ ರಾಹಿಲ್, ಮುಷಿರ್ ಮತ್ತು ಅಬ್ದುಲ್ ಅಹಮದ್ ಈ ೩ ಮತಾಂಧರನ್ನು ಬಂಧಿಸಿದ್ದಾರೆ. ಪೊಲೀಸರು ಈ ತಂಡದ ಜೊತೆ ಸಂಬಂಧಪಟ್ಟ ಉಳಿದ ಆರೋಪಿಗಳನ್ನು ಮತ್ತು ಅವರಿಗೆ ಹಣ ಪೂರೈಕೆ ಮಾಡುವವರನ್ನು ಹುಡುಕುತ್ತಿದ್ದಾರೆ. ಈ ಪ್ರಕರಣದಲ್ಲಿ ಓರ್ವ ಹಿಂದೂ ಹುಡುಗಿಯ ತಂದೆಯು ಖೋಡಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ಹುಡುಗಿ ಕಳೆದ ೫-೬ ತಿಂಗಳಿಂದ ಇಸ್ಲಾಂ ಪದ್ಧತಿಯ ಪಾಲನೆ ಮಾಡುತ್ತಿದ್ದು ಆಕೆ ನಮಾಜ ಕೂಡ ಆರಂಭಿಸಿದ್ದಾಳೆ. ಆಕೆ ತಾನು ಸ್ವತಃ (ಆತ್ಮಹುತಿ ಬಾಂಬ್) ಮಾನವಿ ಬಾಂಬ್ ಆಗುವ ಬಗ್ಗೆ ಹೇಳಿದ್ದಾಳೆ, ಎಂದು ಆಕೆಯ ತಂದೆ ದೂರಿನಲ್ಲಿ ಹೇಳಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ಇಸ್ಲಾಮಿ ಮತಾಂತರದ ಷಡ್ಯಂತ್ರ ಬಹಿರಂಗಪಡಿಸಿದ್ದಾರೆ.
गाजियाबाद में धर्मांतरण के बड़े रैकेट का पर्दाफाश, गाजियाबाद पुलिस ने रैकेट के 3 लोगों को किया गिरफ्तार #religiousconversion #UPConversion pic.twitter.com/CkYzlpyVXG
— India TV (@indiatvnews) July 9, 2023
ಆ ಹುಡುಗಿಯ ಬೊಬೈಲ್ ನಲ್ಲಿನ ಮಾಹಿತಿಯ ಆಧಾರದಲ್ಲಿ ಪೊಲೀಸರು ಜುಲೈ ೭, ೨೦೨೩ ರಂದು ೨೨ ವರ್ಷದ ಮೊಹಮ್ಮದ್ ರಾಹಿಲ ಇವನನ್ನು ಮೊದಲು ಬಂಧಿಸಿದ್ದಾರೆ. ಅವನು ಪೋಲೀಸರಿಗೆ, ಆತ ಮೊದಲು ಹಿಂದೂ ಆಗಿದ್ದನು. ೨೦೧೭ ರಲ್ಲಿ ಇಸ್ಲಾಂ ಸ್ವೀಕರಿಸಿದನು. ಅವನು ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಇಸ್ಲಾಂ ಸ್ವೀಕರಿಸಲು ಅನಿವಾರ್ಯಗೊಳಿಸುತ್ತಿದ್ದನು. ಅವನು ಪ್ರಸ್ತುತ ಹುಡುಗಿಯ ಜೊತೆಗೆ ಆನ್ಲೈನ್ ನಲ್ಲಿ ಮದುವೆ ಕೂಡ ಮಾಡಿಕೊಂಡಿದ್ದನು ಮತ್ತು ಆಕೆಗೆ ಇಸ್ಲಾಂ ಧರ್ಮ ಸ್ವೀಕರಿಸುವ ಹಂತಕ್ಕೆ ತಂದಿದ್ದನು. ಪ್ರಸಾರ ಮಾಧ್ಯಮಗಳು ನೀಡಿರುವ ವಾರ್ತೆಯನುಸಾರ ಆರೋಪಿ ಮಹಮ್ಮದ್ ರಾಹಿಲ ಮತ್ತು ತಂಡದ ಇತರ ಸಹಚರರ ಜಾಲ ಕೇವಲ ಕರ್ನಾಟಕ ಮತ್ತು ದೇಶದ ಇತರ ರಾಜ್ಯಗಳ ವರೆಗೆ ಅಷ್ಟೇ ಅಲ್ಲದೆ ನೇಪಾಳದವರೆಗೂ ಪಸರಿಸಿದೆ. ಈ ತಂಡಕ್ಕೆ ಸಂಬಂಧಪಟ್ಟ ಅನೇಕ ಜನರು ಪತ್ತೆಯಾಗಿದ್ದಾರೆ. ಮೊಹಮ್ಮದ್ ರಾಹಿಲನ ಮೊಬೈಲ್ ನಲ್ಲಿ ದೂರು ನೀಡಿರುವವರ ಹುಡುಗಿಯ ಕೆಲವು ಆಕ್ಷೇಪಾರ್ಹ ವಿಡಿಯೋಗಳು ಕೂಡ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಇಲ್ಲಿಯವರೆಗೆ ಈ ತಂಡದಿಂದ ಹುಡುಗ – ಹುಡುಗಿ ಸಹಿತ ಒಟ್ಟು ೪೦ ಜನರನ್ನು ಮತಾಂತರಗೊಳಿಸಿರುವ ಮಾಹಿತಿ ದೊರೆತಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಸರಕಾರ ಮತಾಂಧರು ಈ ರೀತಿಯ ಧೈರ್ಯ ಮಾಡದಂತೆ ಅಂಕುಶ ಇಡುವುದು ಅವಶ್ಯಕವಾಗಿದೆ ! |