`ಮಹಾನಗರಪಾಲಿಕೆಯ ಅನುಮತಿಯನ್ನು ಪಡೆಯಲಾಗಿದೆಯೇ?’ – ಬೆಂಗಳೂರು ಪೊಲೀಸ್

ರಾಷ್ಟ್ರ ರಕ್ಷಣ ದಳದ ಸಂಸ್ಥಾಪಕ ಶ್ರೀ. ಪುನೀತ ಕೆರೆಹಳ್ಳಿ

ಬೆಂಗಳೂರು – ಬೆಂಗಳೂರು ಮಹಾನಗರಪಾಲಿಕೆಯ ಮೈದಾನದ ಬಳಿ ಇರುವ ಪುರಾತನ ನಾಗರಕಟ್ಟೆಯ ಪಕ್ಕದಲ್ಲಿರುವ ನಾಗದೇವತೆಯ ಪೂಜೆಯನ್ನು ಜುಲೈ 9, 2023 ರಿಂದ ಪ್ರತಿ ರವಿವಾರ ಬೆಳಿಗ್ಗೆ 11 ರಿಂದ 1 ಗಂಟೆ ಈ ಕಾಲಾವಧಿಯಲ್ಲಿ ಮಾಡಲು ತೀರ್ಮಾನಿಸಲಾಗಿತ್ತು.

`ಸಂಕಲ್ಪ ಹಿಂದೂ ರಾಷ್ಟ್ರ’ದ ಅಡಿಯಲ್ಲಿ ರಾಷ್ಟ್ರ ರಕ್ಷಣ ದಳದ ಸಂಸ್ಥಾಪಕ ಶ್ರೀ. ಪುನೀತ ಕೆರೆಹಳ್ಳಿಯವರ ಮುಂದಾಳತ್ವದಲ್ಲಿ ಇದು ಪ್ರಾರಂಭವಾಗುವುದರಲ್ಲಿತ್ತು; ಆದರೆ `ಈ ಪೂಜೆಗಾಗಿ ಮಹಾನಗರಪಾಲಿಕೆಯ ಅಧಿಕಾರಿಗಳಿಂದ ಅನುಮತಿಯನ್ನು ಪಡೆದಿದ್ದೀರಾ? ಪಡೆದಿದ್ದರೆ, ಅನುಮತಿ ಪತ್ರವನ್ನು ತೋರಿಸಿರಿ?’ ಎಂದು ಪೊಲೀಸರು ಪ್ರಶ್ನಿಸಿದರು. ಆದರೂ ಘೋಷಿಸಿದಂತೆ ಹಿಂದೂಗಳು ಇಲ್ಲಿ ಪೂಜೆಯನ್ನು ಮಾಡಿದರು. ಕಳೆದ ವರ್ಷದಿಂದ ಇಲ್ಲಿ ಪೂಜೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಶ್ರೀ. ಕೆರೆಹಳ್ಳಿಯವರು ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಿಂದ `ಸಂಕಲ್ಪ ಹಿಂದೂ ರಾಷ್ಟ್ರ’ ದಡಿಯಲ್ಲಿ ಈ ಪೂಜೆಗಾಗಿ ಜನರಿಗೆ ಸಹಭಾಗಿಗಳಾಗುವಂತೆ ಕರೆ ನೀಡಿದ್ದರಿಂದ ಪೊಲೀಸರು ಅದಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರು. (ಹಿಂದೂ ರಾಷ್ಟ್ರದ ಅಲರ್ಜಿಯಾಗಿರುವ ಕರ್ನಾಟಕ ಪೊಲೀಸರು – ಸಂಪಾದಕರು)

ಅನೇಕ ವರ್ಷಗಳಿಂದ ಪಾಳುಬಿದ್ದಿದ್ದ ಪುರಾತನ ನಾಗರಕಟ್ಟೆಯ ಸ್ಥಾನವನ್ನು ರಾಷ್ಟ್ರ ರಕ್ಷಣ ದಳ ಮತ್ತು ಯುವಾ ಬ್ರಿಗೇಡ ಇವರ ಕಾರ್ಯಕರ್ತರು ಸ್ವಚ್ಛಗೊಳಿಸಿ ಪುರಾತನ ನಾಗದೇವರ ವಿಗ್ರಹವನ್ನು ಸ್ಥಾಪಿಸಿದ್ದಾರೆ.

ಮಹಾನಗರ ಪಾಲಿಕೆಯು ನೊಟೀಸ ನೀಡುವ ಬದಲು ಪೊಲೀಸರು ಏಕೆ ನೊಟೀಸು ನೀಡುತ್ತಿದ್ದಾರೆ ? – ಭಾಜಪ ಶಾಸಕ ಬಸನಗೌಡ ಪಾಟೀಲರ ಪ್ರಶ್ನೆ

ಭಾಜಪ ಶಾಸಕ ಬಸನಗೌಡ ಪಾಟೀಲ

ಈ ಘಟನೆಯ ಕುರಿತು ಭಾಜಪ ಶಾಸಕ ಬಸನಗೌಡ ಆರ್. ಪಾಟೀಲ(ಯತ್ನಾಳ್) ಇವರು ಟ್ವೀಟ ಮಾಡಿ `’ನಾಗದೇವತೆ ಕಟ್ಟೆಯ ಪೂಜೆ ಮಾಡುವ ಹಿಂದೂಗಳೀಗೆ ನೋಟೀಸ ನೀಡುವ ಪೊಲೀಸರು ಯಾರ ಕೈಗೊಂಬೆಯಾಗಿ ಕಾರ್ಯವನ್ನು ಮಾಡುತ್ತಿದ್ದಾರೆ? ಪಾಲಿಕೆಯ ಅನುಮತಿ ಪಡೆಯಬೇಕಾಗಿದ್ದರೆ ಪಾಲಿಕೆಯು ನೊಟೀಸ ನೀಡಬೇಕಾಗಿತ್ತು. ಆದರೆ ಅದನ್ನು ಪೊಲೀಸರು ನೀಡಿದ್ದಾರೆ. ಅವರು ಅವರ ಆಪ್ತರಾಗಿದ್ದಾರೆಯೇ?, ಎನ್ನುವ ಸಂಶಯ ಮೂಡುತ್ತದೆ. ಹಿಂದೂಗಳಿಗೆ ಈ ರಾಜ್ಯದಲ್ಲಿ ಪೂಜೆ ಮಾಡಲು ಮಹಾನಗರ ಪಾಲಿಕೆ ಮತ್ತು ಪೊಲೀಸರ ಅನುಮತಿ ಪಡೆಯಬೇಕೆ? ಇಂತಹ ನೊಟೀಸು ಇತರೆ ಯಾವುದಾದರೂ ಧಾರ್ಮಿಕ ಸ್ಥಳಗಳಿಗೆ ನೀಡಲಾಗಿದೆಯೇ ? ಎಂದು ಪ್ರಶ್ನಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಂಗ್ರೆಸನ್ನು ಆರಿಸಿದ ಹಿಂದೂಗಳಿಗೆ ಇದು ಒಪ್ಪಿಗೆ ಇದೆಯೇ ?