ಜಲಂಧರ (ಪಂಜಾಬ) – ‘ಜಲಂಧರ ಕೌಂಟರ ಇಂಟೆಲಿಜೆನ್ಸ್ ಯುನಿಟ್’ ಇದು ಭಯೋತ್ಪಾದಕ ಸಂಘಟನೆಯಾಗಿರುವ ‘ಬಬ್ಬರ ಖಾಲ್ಸಾ ಇಂಟರನ್ಯಾಷನಲ್’ (ಬಿಕೆಐ) ಸಂಬಂಧಿಸಿದ 3 ಭಯೋತ್ಪಾದಕರನ್ನು ಬಂಧಿಸಿದೆ. ‘ಬಬ್ಬರ ಖಾಲ್ಸಾ ಇಂಟರನ್ಯಾಶನಲ್’ಸೂಚನೆಯ ಮೇರೆಗೆ ಆರೋಪಿಗಳು ಪಂಜಾಬಿನಲ್ಲಿ ಒಬ್ಬರ ಹತ್ಯೆ ಮಾಡುವವರಿದ್ದರು. ಈ ಕೊಲೆಯ ಸಂಚನ್ನು ‘ಜಲಂಧರ ಕೌಂಟರ ಇಂಟೆಲಿಜೆನ್ಸ ಯುನಿಟ್’ ವಿಫಲಗೊಳಿಸಿತು. ಪೊಲೀಸರು ಆರೋಪಿಗಳಿಂದ ಅಕ್ರಮ ಶಸ್ತ್ರಾಸ್ತ್ರಗಳು, 4 ಆಧುನಿಕ ಪಿಸ್ತೂಲ್ಗಳು ಮತ್ತು 15 ಕ್ಕೂ ಹೆಚ್ಚು ಜೀವಂತ ಕಾಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆಂದು ಪಂಜಾಬ ಪೊಲೀಸ ಮಹಾನಿರ್ದೇಶಕ ಗೌರವ ಯಾದವ ಮಾಹಿತಿ ನೀಡಿದ್ದಾರೆ.
ಗೌರವ ಯಾದವ ಅವರು ತಮ್ಮ ಮಾತು ಮುಂದುವರಿಸಿ, ಬಂಧಿತ ಆರೋಪಿಗಳನ್ನು ಜಗರೂಪ ಸಿಂಗ ಉರ್ಫ್ ಜಗ್ಗಾ, ಸುಖಜಿತ ಸಿಂಗ ಉರ್ಫ್ ಸುಖಾ ಮತ್ತು ನವಪ್ರೀತ ಸಿಂಗ ಉರ್ಫ್ ನವ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಈ ಭಯೋತ್ಪಾದಕ ಗುಂಪನ್ನು ಅಮೇರಿಕೆಯ ಗೂಂಡಾ ಗುರಪ್ರೀತ ಸಿಂಗ ಉರ್ಫ್ ಗೋಪಿ ನವಶಹ್ರಿಯಾ ನಡೆಸುತ್ತಿದ್ದನು ಎಂದು ತಿಳಿದುಬಂದಿದೆ. ಗುರ ಪ್ರೀತ ಸಿಂಗ ಪಾಕಿಸ್ತಾನ ಮೂಲದ ಭಯೋತ್ಪಾದಕ ಹರ್ವಿಂದರ ಸಿಂಗ ರಿಂಡಾ ಅವರ ನಿಕಟ ಸಹಚರನಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಸರ ಪೊಲೀಸ್ ಠಾಣೆಯಲ್ಲಿ ಅಪರಾಧ ದಾಖಲಿಸಲಾಗಿದೆ. ಈ ಸಂಚಿನ ಸಂಪೂರ್ಣ ಜಾಲವನ್ನು ಪತ್ತೆ ಹಚ್ಚಲು ಮುಂದಿನ ತನಿಖೆ ನಡೆಯುತ್ತಿದೆ.