Mohammed Shami Slammed : ರಂಜಾನ್‌ನಲ್ಲಿ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಪಾನೀಯ ಕುಡಿದಿದ್ದಕ್ಕೆ ಮೌಲಾನರಿಂದ ಟೀಕೆ

ಬರೇಲಿ (ಉತ್ತರ ಪ್ರದೇಶ) – ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರಸ್ತುತ ನಡೆಯುತ್ತಿರುವ ‘ಚಾಂಪಿಯನ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿ’ಯ ಪಂದ್ಯವೊಂದರಲ್ಲಿ ಪಾನೀಯ ಕುಡಿಯುತ್ತಿರುವುದು ಕಂಡುಬಂದಿದೆ. ರಂಜಾನ್ ನಡೆಯುತ್ತಿರುವುದರಿಂದ ‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ನ ಮೌಲಾನಾ ಶಹಾಬುದ್ದೀನ್ ರಜವಿ ಅವರು ಟೀಕಿಸಿದ್ದಾರೆ. “ರಂಜಾನ್‌ನಲ್ಲಿ ಉಪವಾಸ ಮಾಡದಿರುವುದು ಪಾಪವಾಗಿದೆ. ಅವರು ಷರಿಯಾ ದೃಷ್ಟಿಯಿಂದ ಅಪರಾಧಿ. ಅವರು ದೇವರಿಗೆ ಉತ್ತರಿಸಬೇಕಾಗುತ್ತದೆ” ಎಂದು ಅವರು ಹೇಳಿದರು. ಇದಕ್ಕೆ ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಪ್ರತಿಕ್ರಿಯಿಸಿ, “ಉಪವಾಸ ಮಾಡುವುದು ಅಥವಾ ಮಾಡದಿರುವುದು ವೈಯಕ್ತಿಕ ವಿಷಯ” ಎಂದರು.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಶಾಸಕ ರೋಹಿತ್ ಪವಾರ್ ಕೂಡ ಇದಕ್ಕೆ ಪ್ರತಿಕ್ರಿಯಿಸಿ, “ದೇಶವನ್ನು ಪ್ರತಿನಿಧಿಸುವಾಗ ಉಪವಾಸದಿಂದ ಅವರ ಪ್ರದರ್ಶನದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರಬಹುದು ಅಥವಾ ಅವರಿಗೆ ಏನಾದರೂ ಆಗಬಹುದು ಎಂದು ಮೊಹಮ್ಮದ್ ಶಮಿ ಭಾವಿಸಿದರೆ, ಅವರು ಎಂದಿಗೂ ಮಲಗಲು ಸಾಧ್ಯವಿಲ್ಲ. ಅವರು ಕಟ್ಟಾ ಭಾರತೀಯರಾಗಿದ್ದು, ತಂಡಕ್ಕೆ ಹಲವು ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಆಟದಲ್ಲಿ ಧರ್ಮವನ್ನು ತರಬಾರದು. ಇಂದು ನೀವು ಯಾವುದೇ ಮುಸಲ್ಮಾನನನ್ನು ಕೇಳಿದರೆ, ಅವರು ಮೊಹಮ್ಮದ್ ಶಮಿ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಹೇಳುತ್ತಾರೆ” ಎಂದರು.

ಸಂಪಾದಕೀಯ ನಿಲುವು

  • ಯಾರು ಯಾವಾಗ ಏನು ತಿನ್ನಬೇಕು, ಕುಡಿಯಬೇಕು ಎಂಬುದು ಪ್ರತಿಯೊಬ್ಬರ ವೈಯಕ್ತಿಕ ಹಕ್ಕು, ಇದನ್ನು ಇವರಿಗೆ ಯಾರು ಹೇಳುವರು?
  • ವ್ಯಕ್ತಿ ಸ್ವಾತಂತ್ರ್ಯದ ಡಂಗುರ ಹೊಡೆಯುವವರು ಈಗ ಏಕೆ ಮೌನವಾಗಿದ್ದಾರೆ ?