Hindu Girl Gang Raped : ಉತ್ತರಪ್ರದೇಶದಲ್ಲಿ ನಾಲ್ವರು ಮುಸ್ಲಿಂ ಯುವಕರಿಂದ 14 ವರ್ಷದ ಹಿಂದೂ ಹುಡುಗಿಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ

ಒಬ್ಬನ ಬಂಧನ

ಮೋರಾದಾಬಾದ್ (ಉತ್ತರಪ್ರದೇಶ) – ಉತ್ತರಪ್ರದೇಶದ ಮೋರಾದಾಬಾದ್‌ನಲ್ಲಿ ನಾಲ್ವರು ಮುಸ್ಲಿಂ ಯುವಕರು 14 ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಿ, ಎರಡು ತಿಂಗಳು ಬಂಧಿಸಿಟ್ಟು, ನಿರಂತರ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಈ ಅವಧಿಯಲ್ಲಿ, ಆ ಮತಾಂಧರು ಆಕೆಯನ್ನು ಬಲವಂತವಾಗಿ ಗೋಮಾಂಸ ತಿನ್ನುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಆಕೆಯ ಕೈಯ ‘ಓಂ ಟ್ಯಾಟೂ’ ತೆಗೆದುಹಾಕಲು ಆಮ್ಲ (ಆಸಿಡ್) ಸುರಿದು ಕೈ ಸುಟ್ಟಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಸಲ್ಮಾನ್ ಅನ್ನು ಬಂಧಿಸಿದ್ದಾರೆ.

1. ಈ ಪ್ರಕರಣ ಮೋರಾದಾಬಾದ್‌ನ ಭಗತ್ಪುರ್ ಪ್ರದೇಶದ ದೌಲ್ಪುರಿ ಬಾಮನಿಯಾ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ 14 ವರ್ಷದ ಹಿಂದೂ ಹುಡುಗಿ 2 ಜನವರಿ 2025ರಂದು ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಎಲ್ಲ ಕಡೆ ಹುಡುಕಿದರೂ ಆಕೆ ಸಿಗಲಿಲ್ಲ.

2. 2 ಜನವರಿಯಂದು ಸಲ್ಮಾನ್, ಜುಬೇರ್, ರಶೀದ್ ಮತ್ತು ಆರಿಫ್ ಆಕೆಯನ್ನು ಕಾರಿನಲ್ಲಿ ಅಪಹರಿಸಿದರು. ದಾರಿಯಲ್ಲಿ ಆಕೆಗೆ ಮಾದಕ ಪದಾರ್ಥ ಕೊಟ್ಟು ಮೂರ್ಚೆಗೊಳಿಸಿದರು.

3. ಆ ನಾಲ್ವರು ಆಕೆಯನ್ನು ಬಂಧಿಸಿ ಹಲವು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದರು. ಈ ಅವಧಿಯಲ್ಲಿ, ಆಕೆಯನ್ನು ಉಪವಾಸ ಇಟ್ಟರು. ತಿನ್ನಲು ಕೇಳಿದಾಗ, ಬಲವಂತವಾಗಿ ಗೋಮಾಂಸ ತಿನ್ನುವಂತೆ ಮಾಡುತ್ತಿದ್ದರು.

4. ಈ ಎಲ್ಲವು ಬಂದ ಕೋಣೆಯಲ್ಲಿ ಎರಡು ತಿಂಗಳು ನಡೆಯಿತು. ಒಂದು ದಿನ ಅವಕಾಶ ಸಿಕ್ಕಾಗ ಆಕೆ ಹೇಗೋ ತಪ್ಪಿಸಿಕೊಂಡು ಮನೆಗೆ ತಲುಪಿದಳು. ಆಕೆಯ ಹೇಳಿಕೆಯನ್ನು ಕೇಳಿದ ಕುಟುಂಬಸ್ಥರು ತಕ್ಷಣ ಭಗತ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

5. ಪೊಲೀಸರ ತನಿಖೆಯ ನಂತರ, ಆರೋಪಿ ಸಲ್ಮಾನ್ ಅನ್ನು ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಲವ್ ಜಿಹಾದಿಗಳಿಗೆ ತಕ್ಷಣ ಗಲ್ಲು ಶಿಕ್ಷೆ ನೀಡಿದರೆ ಮಾತ್ರ ಇಂತಹ ಘಟನೆಗಳು ತಡೆಯಬಹುದು. ಆದರೆ ಸರಕಾರಕ್ಕೆ ಇದು ಇನ್ನೂ ಏಕೆ ತಿಳಿಯುತ್ತಿಲ್ಲ ?