ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಸವಾಲು ಹಾಕಿದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ

ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂದಿರುಗಿಸಲು ನಿಮಗೆ ಯಾರು ಅಡ್ಡಿಪಡಿಸಿದ್ದಾರೆ? ಚೀನಾದ ನಿಯಂತ್ರಣದಲ್ಲಿರುವ ಪ್ರದೇಶದ ಬಗ್ಗೆಯೂ ಮಾತನಾಡಿ! – ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ

ಶ್ರೀನಗರ (ಜಮ್ಮು-ಕಾಶ್ಮೀರ) – ವಿದೇಶಾಂಗ ಸಚಿವರು ಇತ್ತೀಚೆಗೆ ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತಕ್ಕೆ ಬಂದ ನಂತರ ಕಾಶ್ಮೀರದ ಸಮಸ್ಯೆ ಬಗೆಹರಿಯುತ್ತದೆ’ ಎಂದು ಹೇಳಿದ್ದಾರೆ. ಆದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತರಲು ಅವರಿಗೆ ನಾವು ಎಲ್ಲಿ ಅಡ್ಡಿಪಡಿಸಿದ್ದೇವೆ? ನೀವು ಜಮ್ಮು-ಕಾಶ್ಮೀರದ ನಕ್ಷೆಯನ್ನು ನೋಡಿದರೆ, ನಮ್ಮ ಒಂದು ದೊಡ್ಡ ಭಾಗವು ಪಾಕಿಸ್ತಾನದಲ್ಲಿದೆ ಎಂದು ತೋರುತ್ತದೆ; ಆದರೆ ಕಾಶ್ಮೀರದ ಮತ್ತೊಂದು ದೊಡ್ಡ ಭಾಗವು ಚೀನಾದ ನಿಯಂತ್ರಣದಲ್ಲಿದೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಟೀಕಿಸಿದ್ದಾರೆ. ಕಾಶ್ಮೀರದ ಭಾಗವಾದ ಅಕ್ಸಾಯ್ ಚಿನ್ ಅನ್ನು ಚೀನಾ ನಿಯಂತ್ರಿಸಿದೆ. ಜೈಶಂಕರ್ ಅವರು ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ‘ಪಾಕಿಸ್ತಾನವು ವಶಪಡಿಸಿಕೊಂಡ ಕಾಶ್ಮೀರವನ್ನು ಭಾರತವು ಮರಳಿ ಪಡೆಯಲು ನಾವು ಕಾಯುತ್ತಿದ್ದೇವೆ. ಆ ಭಾಗವು ಭಾರತಕ್ಕೆ ಮರಳಿದ ನಂತರ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತದೆ’ ಎಂದು ಹೇಳಿದ್ದರು.

ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಭಾಜಪಯನ್ನು ಟೀಕಿಸುತ್ತಾ, ನೀವು ಜಮ್ಮು-ಕಾಶ್ಮೀರವನ್ನು 2 ತುಂಡುಗಳಾಗಿ ವಿಂಗಡಿಸಿದ್ದೀರಿ. ಲಡಾಖ್ ಜನರಿಗೆ ಇದೇ ಬೇಕಿತ್ತು ಎಂದು ಈಗ ಹೇಳುತ್ತಿದ್ದೀರಿ; ಆದರೆ ಲಡಾಖ್ ಜನರಿಗೆ ನಿಜವಾಗಿಯೂ ಏನು ಬೇಕು ಎಂದು ನೀವು ನಿಜವಾಗಿಯೂ ಕೇಳಿದ್ದೀರಾ? ಏನು ಬೇಕಿದೆ? ಎಂದು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಅಬ್ದುಲ್ಲಾ ಕುಟುಂಬವು ಇಲ್ಲಿಯವರೆಗೆ ಪಾಕಿಸ್ತಾನ ಪ್ರೇಮಿ ಪಾತ್ರವನ್ನು ವಹಿಸಿರುವುದರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಭಾರತೀಯರಿಗೆ ತಿಳಿದಿದೆ!