Mughal Rulers True Colors : ಅಕ್ಬರ್ ಅತ್ಯಾಚಾರಿ ಹಾಗೂ ಔರಂಗಜೇಬ್ ನೂರಾರು ದೇವಾಲಯಗಳನ್ನು ಧ್ವಂಸಗೊಳಿಸಿದ! – ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್

ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರಿಂದ ವಿಧಾನಸಭೆಯಲ್ಲಿ ಮೊಘಲರ ಬಣ್ಣ ಬಯಲು !

ಜೈಪುರ (ರಾಜಸ್ಥಾನ) – ‘ಮೀನಾ ಬಜಾರ್’ (ಮೊಘಲ್ ಕಾಲದ ಮಹಿಳೆಯರಿಗಾಗಿ ಮಾತ್ರ ಮಾರುಕಟ್ಟೆ) ಸ್ಥಾಪಿಸಿದ ಮೊಘಲ್ ಬಾದಶಾಹ ಅಕ್ಬರ್ ಅತ್ಯಾಚಾರಿ, ಆಕ್ರಮಣಕಾರ ಮತ್ತು ದರೋಡೆಕೋರನಾಗಿದ್ದನು. ಅವನನ್ನು ‘ಮಹಾನ್’ ಎಂದು ಕರೆಯಲಾಗುತ್ತಿತ್ತು. ಔರಂಗಜೇಬನು ಅಸಂಖ್ಯಾತ ಹಿಂದೂಗಳನ್ನು ಕೊಂದನು, ನೂರಾರು ದೇವಾಲಯಗಳನ್ನು ಧ್ವಂಸಗೊಳಿಸಿದನು ಮತ್ತು ಹಿಂದೂಗಳ ಮೇಲೆ ಜಜಿಯಾ ತೆರಿಗೆಯನ್ನು ವಿಧಿಸಿದನು. ಇದು ದೇಶ ಮತ್ತು ನಮ್ಮ ಮಹಾಪುರುಷರಿಗೆ ಮಾಡಿದ ಅವಮಾನ ಮಾಡಿದ್ದನು. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಜಸ್ಥಾನದ ಭಾಜಪ ಸರಕಾರದ ಶಿಕ್ಷಣ ಸಚಿವ ಮದನ್ ದಿಲಾವರ್ ವಿಧಾನಸಭೆಯಲ್ಲಿ ಹೇಳಿದ್ದಾರೆ. ದಿಲಾವರ್ ಅವರು ಈ ಹಿಂದೆ ಅಕ್ಬರ್ ವಿರುದ್ಧ ಇದೇ ರೀತಿಯ ಹೇಳಿಕೆ ನೀಡಿದ್ದರು.

ಅಕ್ಬರ್ ನಿಮಗೇನಾಗಬೇಕು? – ವಿರೋಧ ಪಕ್ಷದ ಶಾಸಕರಿಗೆ ದಿಲಾವರ್ ಪ್ರಶ್ನೆ

ದಿಲಾವರ್ ಅವರ ಈ ಹೇಳಿಕೆಗೆ ವಿರೋಧ ಪಕ್ಷದ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದಾಗ, ಶಿಕ್ಷಣ ಸಚಿವ ದಿಲಾವರ್ ಅವರು “ಅಕ್ಬರ್ ನಿಮಗೆ ಏನು ಆಗಬೇಕು?” ಎಂದು ಕೇಳಿದರು. ಮೊಘಲ್ ಬಾದಶಾಹಗಳ ಕ್ರೌರ್ಯವನ್ನು ದೇಶದ ವಿದ್ಯಾರ್ಥಿಗಳಿಂದ ಮರೆಮಾಚಲಾಗಿತ್ತು. ಇದನ್ನು ಹಲವು ವರ್ಷಗಳಿಂದ ಪಠ್ಯಪುಸ್ತಕಗಳಲ್ಲಿ ಕಲಿಸಲಾಗುತ್ತಿತ್ತು. ಆಕ್ರಮಣಕಾರಿ ಮತ್ತು ಕ್ರೂರ ಆಡಳಿತಗಾರ ತೈಮೂರನನ್ನು ‘ಮಹಾನ್’ ಎಂದು ವರ್ಣಿಸಲಾಗಿದೆ. ಇದು ಸಂಪೂರ್ಣವಾಗಿ ತಪ್ಪಾಗಿತ್ತು. ಹಿಂದಿನ ಸರಕಾರಗಳು ಮಹಾಪುರುಷರ ಬಗ್ಗೆ ಕಲಿಸಿದ್ದಕ್ಕಾಗಿ ನಮಗೆ ತುಂಬಾ ದುಃಖವಾಗಿದೆ. ಅವರು ಮಹಾರಾಣಾ ಪ್ರತಾಪ್ ಅವರ ಶೌರ್ಯವನ್ನು ಕಡೆಗಣಿಸಲು ಪ್ರಯತ್ನಿಸಿದರು.

ಶಾಲಾ ಸಮಯದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದಿಲ್ಲ!

ಮದರಸಾ ಮಂಡಳಿಯಲ್ಲಿ ಸಮವಸ್ತ್ರವನ್ನು ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಮದನ್ ದಿಲಾವರ್ ಹೇಳಿದ್ದಾರೆ. ಶಾಲಾ ಸಮಯದಲ್ಲಿ ನಮಾಜ್ ಆಗಲಿ ಅಥವಾ ಶ್ರೀ ಬಾಲಾಜಿಯ ಪೂಜೆಯಾಗಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಯುವುದಿಲ್ಲ. ಮಹಾರಾಣಾ ಪ್ರತಾಪ್ ಅವರ ಜೀವನ ಮತ್ತು ಕೊಡುಗೆಯನ್ನು ಶಾಲೆಗಳಲ್ಲಿ ಬೋಧಿಸಲಾಗುವುದು, ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಈ ದೇಶದಲ್ಲಿ ಇಂತಹ ನಿಜವಾದ ಇತಿಹಾಸವನ್ನು ಎಷ್ಟು ಮಂದಿ ಶಿಕ್ಷಣ ಸಚಿವರು ಹೇಳುತ್ತಾರೆ? ಈ ಇತಿಹಾಸವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಯಾವಾಗ ಬೋಧಿಸಲಾಗುತ್ತದೆ ?