|
ಮುಂಬಯಿ – ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಛತ್ರಪತಿ ಸಂಭಾಜಿ ಮಹಾರಾಜ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ವಿಶೇಷ ಕಾನೂನು ಜಾರಿಗೆ ತರಬೇಕು ಎಂದು ಛತ್ರಪತಿ ಶಿವಾಜಿ ಮಹಾರಾಜ್ ಅವರ ವಂಶಸ್ಥ ಮತ್ತು ಭಾಜಪ ಸಂಸದ ಉದಯನರಾಜೆ ಭೋಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಅವರು ಮಾತು ಮುಮದುವರೆಸಿ,
1. ಮತ್ಯಾರೂ ಮಾತನಾಡಲು ಧೈರ್ಯ ಮಾಡದಂತೆ ಕಾನೂನು ಜಾರಿಗೊಳಿಸಬೇಕು. ಛತ್ರಪತಿ ಶಿವಾಜಿ ಮಹಾರಾಜ್, ಛತ್ರಪತಿ ಸಂಭಾಜಿ ಮಹಾರಾಜ್ ಮತ್ತು ರಾಜಮಾತೆ ಜೀಜಾಬಾಯಿ ಅವರ ಬಗ್ಗೆ ಯಾರೂ ಕೆಟ್ಟ ಶಬ್ದಗಳನ್ನು ಬಳಸಲು ಧೈರ್ಯ ಮಾಡಬಾರದು. ಇದಕ್ಕಾಗಿ ಜಾಮೀನು ರಹಿತ ಅಪರಾಧದ ಕಾನೂನು ಮಾಡುವುದು ಅಗತ್ಯವಾಗಿದೆ.
2. ಈ ಕಾನೂನಿನಲ್ಲಿ ಕನಿಷ್ಠ 10 ವರ್ಷಗಳ ಶಿಕ್ಷೆ ಮತ್ತು ಗರಿಷ್ಠ ಮೊತ್ತದ ದಂಡ ವಿಧಿಸುವ ನಿಬಂಧನೆ ಇರಬೇಕು. ಇಂತಹ ಘಟನೆಗಳ ತನಿಖೆಯನ್ನು ಪೊಲೀಸ್ ಉಪಾಧೀಕ್ಷಕರು ನಡೆಸಬೇಕು. ಇಂತಹ ಪ್ರಕರಣಗಳ ದೋಷಾರೋಪ ಪಟ್ಟಿಯನ್ನು ಕನಿಷ್ಠ 30 ದಿನಗಳಲ್ಲಿ ಸಲ್ಲಿಸಬೇಕು ಮತ್ತು ಈ ಅಪರಾಧದ ತೀರ್ಪು 6 ತಿಂಗಳಲ್ಲಿ ಹೊರಬರಬೇಕು.
3. ಮಹಾರಾಷ್ಟ್ರ ಸರಕಾರವು ಇದೇ ಅಧಿವೇಶನದಲ್ಲಿ ಈ ವಿಶೇಷ ಕಾನೂನನ್ನು ಜಾರಿಗೆ ತರಬೇಕು ಎಂದು ನಾನು ಮಹಾರಾಷ್ಟ್ರದ ಜನರ ಪರವಾಗಿ ಒತ್ತಾಯಿಸುತ್ತೇನೆ. ಈ ಕಾನೂನನ್ನು ಜಾರಿಗೆ ತರಬೇಕು, ಇಲ್ಲದಿದ್ದರೆ ಗೊಂದಲ ಉಂಟಾಗುತ್ತದೆ. ಸದನದಲ್ಲಿಯೂ ಇದೇ ವಿಷಯಕ್ಕೆ ಗದ್ದಲವಾಗುತ್ತದೆ ಎಂಬುದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರ ಗಮನಕ್ಕೆ ಬಂದಿದ್ದು, ಈ ಗದ್ದಲವನ್ನು ನಿಲ್ಲಿಸಲು ಕಾನೂನು ಜಾರಿಗೆ ತರಬೇಕು.
4. ಕಾನೂನು ಜಾರಿಗೆ ತರದಿದ್ದರೆ ಮಹಾರಾಷ್ಟ್ರದ ಜನರು ನಿಮ್ಮನ್ನು ಕ್ಷಮಿಸುವುದಿಲ್ಲ.