ಮುಝಫ್ಫರ್‌ನಗರ (ಉತ್ತರ ಪ್ರದೇಶ) – ಇಲ್ಲಿಯ ಸೈದ್‌ಪುರ ಗ್ರಾಮದಲ್ಲಿ ಮುಸಲ್ಮಾನರು ಹಿಂದೂಗಳ ಮದುವೆಯ ಮೆರವಣಿಗೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ಕೆಲವರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಈ ಮೆರವಣಿಗೆಯಲ್ಲಿ ಸಿಡಿಸುತ್ತಿದ್ದ ಪಟಾಕಿಯಿಂದ ಮುಸಲ್ಮಾನರ ಮರದ ದಿಬ್ಬಕ್ಕೆ ಕಿಡಿ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಮುಸಲ್ಮಾನರು ಮೆರವಣಿಗೆಯಲ್ಲಿ ಭಾಗವಹಿಸಿದ್ದವರೊಂದಿಗೆ ವಾಗ್ವಾದ ನಡೆಸಿದ್ದಾರೆ. ನಂತರ ಹೊಡೆದಾಟ ನಡೆದಿದೆ. ಮುಸಲ್ಮಾನರು ಹಿಂದೂಗಳನ್ನು ಬೆನ್ನಟ್ಟಿ ಕೋಲುಗಳಿಂದ ಹೊಡೆದಿದ್ದಾರೆ. ಮದುವೆಗೆ ಅತಿಥಿಯಾಗಿ ಬಂದಿದ್ದ ಅಮಿತ್ ಎಂಬುವವರನ್ನು ಮುಸಲ್ಮಾನರು ಮನೆಯಿಂದ ಹೊರಗೆಳೆದು ಮನಬಂದಂತೆ ಥಳಿಸಿದ್ದಾರೆ. ಹಿಂಸಾಚಾರದ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ದಾಳಿಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ದಾಳಿಯಲ್ಲಿ 30 ರಿಂದ 40 ಮಂದಿ ಭಾಗಿಯಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪೊಲೀಸರು 14 ಮುಸಲ್ಮಾನರ ವಿರುದ್ಧ ಮತ್ತು 50 ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಬನ್ಸಲ್ ಅವರು ಸಹ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ಬಿಡುವುದಿಲ್ಲ. ಗ್ರಾಮದ ಜನರು ಶಾಂತಿ ಕಾಪಾಡಬೇಕು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರ ಸರಕಾರವಿದ್ದರೂ ಮತಾಂಧ ಮುಸಲ್ಮಾನರ ದುರಹಂಕಾರ ಕಡಿಮೆಯಾಗಿಲ್ಲ. ಇಂತಹವರ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ! |