ಮಣಿಪುರದ ಹಿಂಸಾಚಾರದ ಬಗ್ಗೆ ಕೇರಳದ ಆರ್ಚ್ ಬಿಷಪ್ ಕ್ಲೆಮಿಸ್ ರ ತೋರಿಕೆಯ ಹೇಳಿಕೆ !

‘ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಮುಗಿಸುತ್ತಾರೆ ಎಂದು ಯಾರೂ ವಿಚಾರ ಮಾಡಬಾರದಂತೆ !’

(ಆರ್ಚ್ ಬಿಶಪ್ ಎಂದರೆ ಹಿರಿಯ ಪಾದ್ರಿ)

ತಿರುವನಂತಪುರಮ್ (ಕೇರಳ) – ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಮುಗಿಸಬಹುದು ಎಂದು ಯಾರೂ ವಿಚಾರ ಮಾಡಬಾರದು ಎಂದು ಕೇರಳದ ಕೆಥೊಲಿಕ್ ಬಿಶಪ್ ಕೌನ್ಸಿಲ್ ಅಧ್ಯಕ್ಷ ಮತ್ತು ಸಾಯರೊ-ಮಲಂಕಾರಾ ಕೆಥೊಲಿಕ್ ಚರ್ಚ ಆರ್ಚ್ ಬಿಶಪ್ ಬೆಸಿಲಿಯೋಸ ಕ್ಲೊಮಿಸ್ ಇವರು ಮಣಿಪುರದಲ್ಲಿ ನಡೆಯುತ್ತಿದ್ದ ಹಿಂಸಾಚಾರದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಇಲ್ಲಿ ಕಾಂಗ್ರೆಸ್ಸಿನ ಶಾಸಕರ ನೇತೃತ್ವದಡಿಯಲ್ಲಿ ಹಿಂಸಾಚಾರವನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಲಾಯಿತು. ಆ ಸಂದರ್ಭದಲ್ಲಿ ಆರ್ಚ್ ಬಿಶಪ್ ಕ್ಲೆಮಿಸ್ ಇವರು ಮಾತನಾಡುತ್ತಿದ್ದರು.

ಆರ್ಚ್ ಬಿಶಪ್ ಕ್ಲೆಮಿಸ್ ಮಾತನ್ನು ಮುಂದುವರಿಸಿ, ಈ ಹಿಂಸಾಚಾರದ ಪ್ರಕರಣದಲ್ಲಿ ಪ್ರಧಾನಮಂತ್ರಿ ಮೋದಿಯವರು ಮೌನವನ್ನು ಮುರಿಯಬೇಕು. ಈ ಮೂಲಕ `ಭಾರತದಲ್ಲಿ ಪ್ರಜಾಪ್ರಭುತ್ವ ಇದೆ’ ಎಂದು ಜಗತ್ತಿಗೆ ಸಂದೇಶ ನೀಡಲು ಅವರಿಗೆ ಒಳ್ಳೆಯ ಅವಕಾಶವಿದೆ. ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಿ ಮಣಿಪುರದಲ್ಲಿ ಶಾಂತಿಯನ್ನು ಸ್ಥಾಪಿಸಲು ಪ್ರಯತ್ನಿಸಬೇಕು. ಕಳೆದ 65 ದಿನಗಳಿಂದ ಇಲ್ಲಿ ಹಿಂಸಾಚಾರ ನಡೆಯುತ್ತಿದೆ. ಯಾವ ಸರಕಾರಕ್ಕೆ `ಸರ್ಜಿಕಲ್ ಸ್ಟ್ರೈಕ್’ ಮಾಡುವುದು ಗೊತ್ತಿದೆಯೋ, ಆ ಸರಕಾರ ಈ ಹಿಂಸಾಚಾರವನ್ನು ತಡೆಯಲು ಏಕೆ ಸಕ್ಷಮವಾಗಿಲ್ಲ?, ಎಂದು ಅವರು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಮುಗಿಸುವ ವಿಷಯದಲ್ಲಿ ಯಾರೂ ಏನೂ ಮಾತನಾಡದಿರುವಾಗ ಮತ್ತು ಏನೂ ಮಾಡದಿರುವಾಗ ಈ ರೀತಿ ಹೇಳಿಕೆಯನ್ನು ನೀಡಿ ಹಿಂದೂಗಳನ್ನು `ತಾಲಿಬಾನಿಗಳು’ ಎಂದು ನಿರ್ಧರಿಸುವುದು ಪಾದ್ರಿಗಳ ಪ್ರಯತ್ನವಾಗಿದೆ ಎನ್ನುವುದನ್ನು ಗಮನಿಸಬೇಕಾಗಿದೆ ! ಬದಲಾಗಿ ಮಣಿಪುರದಲ್ಲಿ ಕ್ರೈಸ್ತರಾಗಿರುವ ಕುಕಿ ಸಮಾಜದ ಜನರು ಅಲ್ಲಿಯ ಹಿಂದೂಗಳಾಗಿರುವ ಮೈತೆಯಿ ಸಮಾಜದ ಜನರನ್ನು ಮುಗಿಸಲು ಪ್ರಯತ್ನಿಸುತ್ತಿದ್ದಾರೆ, ಇದೇ ವಸ್ತುಸ್ಥಿತಿಯಾಗಿದೆ !