ಶ್ರೀ ಲಂಕಾದ ಸಂಸತ್ತಿನ ಅಧ್ಯಕ್ಷ ಮಹಿಂದಾ ಅಭಯವರ್ಧನೆ ಇವರಿಂದ ಭಾರತಕ್ಕೆ ಧನ್ಯವಾದ !

ಭಾರತ ಸಹಾಯ ಮಾಡದಿದ್ದರೆ ಮತ್ತೂಂದು ರಕ್ತಪಾತವಾಗುತ್ತಿತ್ತು ! 

ಶ್ರೀ ಲಂಕಾದ ಸಂಸತ್ತಿನ ಅಧ್ಯಕ್ಷ ಮಹಿಂದಾ ಅಭಯವರ್ಧನೆ

ನವ ದೆಹಲಿ – ಭಾರತವು ಶ್ರೀಲಂಕಾಕ್ಕೆ ಮಾಡಿದಷ್ಟು ಸಹಾಯವನ್ನು ಬೇರೆಯಾವುದೇ ದೇಶಗಳುಮಾಡಲಿಲ್ಲ. ಆರ್ಥಿಕ ಸಂಕಷ್ಟದ ಕಾಲದಲ್ಲಿ ಭಾರತವು ನಮ್ಮನ್ನು ಕಾಪಾಡಿತು ಇಲ್ಲದಿದ್ದರೆ, ನಾವೆಲ್ಲರೂ ಮತ್ತೂಂದು ರಕ್ತಪಾತವನ್ನು ಎದುರಿಸಬೇಕಾಗಿತ್ತು ಎಂದು ಶ್ರೀ ಲಂಕಾದ ಸಂಸತ್ತಿನ ಅಧ್ಯಕ್ಷ ಮಹಿಂದಾ ಯಾಪ ಅಭಯವರ್ಧನೆ ಇವರು ಹೇಳಿದರು. ಶ್ರೀ ಲಂಕಾವು ಆರ್ಥಿಕ ಸಂಕಷ್ಟದಲ್ಲಿದ್ದಾಗ ಭಾರತವು ಮಾಡಿದ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಕಳೆದ ವರ್ಷ ಶ್ರೀಲಂಕಾವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗಿ ಬಂತು. ಈ ಸಂದರ್ಭದಲ್ಲಿ, ಭಾರತವು ಶ್ರೀಲಂಕಾಕ್ಕೆ ತನ್ನದೇ ಆದ ವಿವಿಧ ಮಾಧ್ಯಮಗಳ ಮೂಲಕ ಸುಮಾರು ೫ ಬಿಲಿಯನ್ ಡಾಲರ್ಸ (ಸುಮಾರು ೩೩ ಸಾವಿರ ಕೋಟಿ ೪೬ ರೂಪಾಯಿಗಳು) ಸಹಾಯ ಮಾಡಿತ್ತು.

ಮಹಿಂದಾ ಯಾಪ ಅಭಯವರ್ಧನೆಯವರು ಶ್ರೀ ಲಂಕಾದಲ್ಲಿನ ಭಾರತೀಯ ಹೈ ಕಮೀಷನರ್ ರ್ಗೋಪಾಲ ಬಾಗಲೆ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ, ಇಲ್ಲಿ ನಿಮ್ಮ ರಾಯಭಾರಿ (ಭಾರತದ) ನಮ್ಮ ಅತ್ಯಂತ ಆತ್ಮೀಯ ಸ್ನೇಹಿತ ಎಂದು ಹೇಳಿದರು. ನಾವು ಅವರನ್ನು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂದರು.