ಕಾಂಗ್ರೆಸ್ ನ ನಾಯಕ ದಿಗ್ವಿಜಯ ಸಿಂಹ ಇವರ ವಿರುದ್ಧ ಇಂದೂರು (ಮಧ್ಯಪ್ರದೇಶ)ದಲ್ಲಿ ದೂರು ದಾಖಲು !

ಮಾಜಿ ಸರಸಂಘಚಾಲಕ ಪೂ. ಗೋಳವಲಕರ ಗುರೂಜಿ ಇವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಪ್ರಕರಣ

ಪೂ. ಗೋಳವಲಕರ ಗುರೂಜಿ

ಇಂದೂರು (ಮಧ್ಯ ಪ್ರದೇಶ) – ಮಾಜಿ ಸರಸಂಘಚಾಲಕ ಪೂ. ಮಾಧವರಾವ ಸದಾಶಿವರಾವ ಗೊಳವಲಕರ ಗುರೂಜಿ ಇವರ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿದ ಪ್ರಕರಣದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಹ ಇವರ ವಿರುದ್ಧ ದೂರು ದಾಖಲಿಸಲಾಗಿದೆ. ಉಚ್ಚ ನ್ಯಾಯಾಲಯದ ನ್ಯಾಯವಾದಿ ರಾಜೇಶ ಜೋಶಿ ಇವರು ಇಂದೂರಿನ ತುಕೊಗಂಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರಿಂದ ಸಿಂಹ ಇವರ ಮೇಲೆ ಕಲಂ ೧೫೩ಅ, ೪೬೯, ೫೦೦ ಮತ್ತು ೫೦೫ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಉಜ್ಜೈನಿಯಲ್ಲಿ ಕೂಡ ಈ ಪ್ರಕರಣದ ಬಗ್ಗೆ ಪೊಲೀಸರ ಬಳಿ ದೂರು ನೀಡಲಾಗಿದೆ. ಸಿಂಹ ಇವರು ಪೋಸ್ಟ್ ನಲ್ಲಿ, ಪೂ. ಗೋಳವಲಕರ ಗುರೂಜಿ ಇವರು ದಲಿತ, ಹಿಂದುಳಿದವರ್ಗದವರಿಗೆ ಮತ್ತು ಮುಸಲ್ಮಾನರಿಗೆ ಸಮಾನತೆಯ ಅಧಿಕಾರ ನೀಡುವುದರ ವಿರುದ್ಧವಾಗಿದ್ದರು. ಹಾಗೂ ಅವರ ಈ ಸಂದರ್ಭದಲ್ಲಿ ಒಂದು ವಿಚಾರ ಈ ಪೋಸ್ಟನಲ್ಲಿ ಗುರೂಜಿಯವರ ಛಾಯಾಚಿತ್ರದ ಜೊತೆಗೆ ನೀಡಿದ್ದರು.

೧. ನ್ಯಾಯವಾದಿ ರಾಜೇಶ ಜೋಶಿ ಇವರು, ಸಿಂಹ ಇವರು ಅವರ ಟ್ವೀಟನಲ್ಲಿ ಹುರುಳಿಲ್ಲದ ಮಾಹಿತಿ ನೀಡಿದ್ದಾರೆ. ಸಿಂಹ ಇವರು ಯಾವಾಗಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿಮೆಯನ್ನು ಹಾಳು ಮಾಡುತ್ತಿರುತ್ತಾರೆ. ಅವರ ಈಗಿನ ಟ್ವೀಟ್ ನಿಂದ ನನ್ನ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದರು.

೨. ಸಂಘದ ಪ್ರಚಾರ ಪ್ರಮುಖ ಸುನಿಲ ಅಂಬೇಕರ ಇವರು ಟ್ವೀಟ್ ಮಾಡಿ, ದಿಗ್ವಿಜಯ ಸಿಂಹ ಇವರು ಪೂ. ಗೋಳವಾಲಕರ ಗುರೂಜಿ ಇವರ ಸಂದರ್ಭದಲ್ಲಿನ ಪೋಸ್ಟ್ ಭ್ರಮೆ ಹುಟ್ಟಿಸುವ ಮತ್ತು ಹುರುಳಿಲ್ಲ. ಪೂ. ಗೋಳಬಾಲಕರ ಗುರೂಜಿ ಇವರು ಎಂದೂ ಈ ರೀತಿಯ ವಿಚಾರ ವ್ಯಕ್ತಪಡಿಸಲಿಲ್ಲ. ತದ್ವಿರುದ್ಧ ಅವರು ಸತತ ಸಾಮಾಜಿಕ ಭೇದಭಾವ ನಾಶ ಮಾಡುವ ಪ್ರಯತ್ನ ಮಾಡುತ್ತಿದ್ದರು ಎಂದು ಹೇಳಿದರು.

ಸಂಪಾದಕರ ನಿಲುವು

ದಿಗ್ವಿಜಯ ಸಿಂಹ ಇವರ ಸಂಘ ದ್ವೇಷ ಹೊಸದೇನಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕಾಂಗ್ರೆಸ್ಸಿನವರು ಹಿಂದುತ್ವನಿಷ್ಠ ಸಂಘಟನೆಗಳ ಅವಮಾನ ಮಾಡುತ್ತಾರೆ. ಇಂತಹವರ ರಾಜಕೀಯ ಅಸ್ತಿತ್ವ ಮುಗಿಸುವುದಕ್ಕಾಗಿ ಹಿಂದೂಗಳೇ ಹೆಜ್ಜೆ ಇಡಬೇಕು !