ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅಜಿತ ಪವಾರ ನೇಮಕ

ಪಕ್ಷದ ಹೆಸರು ಮತ್ತು ಪಕ್ಷದ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಹಕ್ಕು

ಅಜಿತ ಪವಾರ

ಮುಂಬಯಿ – `ರಾಷ್ಟ್ರವಾದಿ ಕಾಂಗ್ರೆಸ್’ ಹೆಸರು ಮತ್ತು ಪಕ್ಷದ ಚಿಹ್ನೆ `ಗಡಿಯಾರ’ ಹಕ್ಕು ಸಾಧಿಸುವ ಪತ್ರವನ್ನು ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಜಿತ ಪವಾರರ ಗುಂಪು ಚುನಾವಣಾ ಆಯೋಗಕ್ಕೆ ನೀಡಿದೆ. ಈ ಪತ್ರದ ಮೇಲೆ ಜೂನ 30 ದಿನಾಂಕವಿದ್ದು, ಪತ್ರವನ್ನು ಜುಲೈ 5 ರಂದು ಚುನಾವಣಾ ಆಯೋಗಕ್ಕೆ ಸಿಕ್ಕಿದೆ. ಇದರಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಅಜಿತ್ ಪವಾರ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಪತ್ರದಲ್ಲಿ ರಾಷ್ಟ್ರವಾದಿ ಕಾಂಗ್ರೆಸ್ಸಿನ 40 ಶಾಸಕರು ಬೆಂಬಲಿಸಿದ್ದಾರೆಂದು ಉಲ್ಲೇಖಿಸಲಾಗಿದೆ.

9 ಜನರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಶರದ ಪವಾರ ಬಣದ ಬೇಡಿಕೆ !

ರಾಷ್ಟ್ರವಾದಿ ಕಾಂಗ್ರೆಸ್ಸಿನ ಶರದ ಪವಾರ ಬಣದಿಂದ ಜಯಂತ ಪಾಟೀಲರು ಸಚಿವರಾಗಿ ಪ್ರಮಾಣವಚವನ್ನು ಸ್ವೀಕರಿಸಿದ ರಾಷ್ಟ್ರವಾದಿ ಕಾಂಗ್ರೆಸ್ಸಿನ 9 ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಈ ಪತ್ರವನ್ನು ಜುಲೈ 4 ರಂದು ಜಯಂತ ಪಾಟೀಲ ಇವರು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ.