ಬೆಂಗಳೂರಿನಲ್ಲಿ ಏಷಿಯನ್ ಪುಟ್ಬಾಲ್ ಸ್ಪರ್ಧೆಯಲ್ಲಿ ಗೆದ್ದ ನಂತರ ೨೬ ಸಾವಿರ ಪ್ರೇಕ್ಷಕರು ವಂದೇಮಾತರಂ ಘೋಷಣೆ ಕೂಗಿದರು !

ಬೆಂಗಳೂರು – ಭಾರತೀಯ ಪುಟ್ಬಾಲ್ ಸಂಘವು ನೇತ್ರ ದೀಪಕ ಕಾಮಗಿರಿಮಾಡುತ್ತಾ ‘ಸೌತ್ ಏಷಿಯನ್ ಪುಟ್ಬಾಲ್ ಫೆಡರೇಶನ್’ ಈ ದಕ್ಷಿಣ ಏಷ್ಯಾದ ಪುಟ್ಬಾಲ್ ಸ್ಪರ್ಧೆಯಲ್ಲಿ ೯ ನೇ ಸಲ ಗೆದ್ದಿದೆ. ಅಂತಿಮ ಸೆಣಸಾಟದಲ್ಲಿ ಭಾರತವು ‘ಪೆನಾಲ್ಟಿ ಶೂಟೌಟ್’ ನಲ್ಲಿ ೫-೪ ಅಂತರದಿಂದ ಕುವ್ಯೆತ್ ಅನ್ನು ಸೋಲಿಸಿತು. ಬೆಂಗಳೂರಿನ ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಿತು. ಈ ಸಂದರ್ಭದಲ್ಲಿ ನೆರೆರಿದ್ದ ೨೬ ಸಾವಿರ ಪ್ರೇಕ್ಷಕರು ‘ವಂದೇಮಾತರಂ’ ಮತ್ತು ‘ಮಾ ತುಜೆ ಸಲಾಂ’ ಈ ಘೋಷಣೆ ಕೂಗಿದರು. ಈ ರೋಮಾಂಚಕ ಕ್ಷಣಗಳ ವೀಡಿಯೊ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಪ್ರಸಾರವಾಗುತ್ತಿದೆ.