‘ಭೀಮ ಆರ್ಮಿ’ ಯ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಇವರಿಗೆ ಮತ್ತೊಮ್ಮೆ ಜೀವ ಬೆದರಿಕೆ

ಅಮೆಠಿ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ಸಹರಾನಪುರದಲ್ಲಿ ಜೂನ್ ೨೮ ರಂದು ‘ಭೀಮ ಆರ್ಮಿ’ಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ಇವರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಅದರಲ್ಲಿ ಆಝಾದ್ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಈಗ ಫೇಸ್ಬುಕ್ ನಲ್ಲಿ ‘ಕ್ಷತ್ರಿಯ ಆಫ್ ಅಮೆಠಿ’ ಹೆಸರಿನ ಖಾತೆಯಿಂದ ಆಝಾದ್ ಗೆ ಬೆದರಿಕೆ ನೀಡಲಾಗಿದೆ, ಎಂದು ಮಾಹಿತಿ ದೊರೆತಿದೆ. ಗುಂಡಿನ ದಾಳಿಯ ನಂತರ ಕೂಡ ಈ ಖಾತೆಯಿಂದ, ‘ಆಜಾದ್ ಮುಂದಿನ ವೇಳೆ ಬದುಕುವುದಿಲ್ಲ’, ಎಂದೂ ಬರೆಯಲಾಗಿದೆ. ಗುಂಡಿನ ದಾಳಿಯ ೪ ದಿನದ ಹಿಂದೆ ಕೂಡ ಆಝಾದ ಅವರಿಗೆ ಈ ಖಾತೆಯಿಂದ ಆಝಾದ್ ನನ್ನು ಹಾಡುಹಗಲು ನಡುರಸ್ತೆಯಲ್ಲಿ ಕೊಲ್ಲುವೆವು’ ಎಂದು ಬೆದರಿಕೆ ನೀಡಲಾಗಿದೆ. ಇದರ ಜೊತೆಗೆ ಪ್ರಸಾರ ಮಾಡಿರುವ ಒಂದು ವಿಡಿಯೋದಲ್ಲಿ ಒಬ್ಬ ಯುವಕನ ಕೈಯಲ್ಲಿ ಖಡ್ಗ ಇರುವುದು ಕಾಣುತ್ತದೆ.