ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನ್ಯಾಯಾಲಯವು ಮದರಸಾದಲ್ಲಿ ಓದುತ್ತಿದ್ದ ಇಬ್ಬರು ಅಪ್ರಾಪ್ತರನ್ನು ಲೈಂಗಿಕ ಶೋಷಣೆ ಮಾಡಿ ಅವರ ಹತ್ಯೆ ಮಾಡಿದ ಶಿಕ್ಷಕ ತನ್ವೀರ್ ಅಹಮದ್ ಗೆ ಮರಣದಂಡನೆ ವಿಧಿಸಿದೆ. ಈ ಅಪರಾಧದಲ್ಲಿ ಆತನಿಗೆ ಸಹಾಯ ಮಾಡಿದ ನೌಮಾನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರೊಂದಿಗೆ ಇಬ್ಬರಿಗೂ ತಲಾ 10 ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಲಾಗಿದೆ. ಈ ಘಟನೆ ಲಾಹೋರ್‌ನಿಂದ 130 ಕಿಮೀ ದೂರದಲ್ಲಿರುವ ಒಕಾರಾ ಪಟ್ಟಣದಲ್ಲಿ ನಡೆದಿದೆ. ಮೃತ ಮಕ್ಕಳು 6 ವರ್ಷ ಮತ್ತು 10 ವರ್ಷ ವಯಸ್ಸಿನ ಸಹೋದರರಾಗಿದ್ದರು. ಅಹಮದ್ ಇಬ್ಬರ ಮೇಲೆ ಅತ್ಯಾಚಾರ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿದ್ದನು.
पाकिस्तान में मदरसा छात्रों पर उनके शिक्षकों द्वारा यौन उत्पीड़न की लगातार घटनाएं हो रही हैं.#PakistanNews https://t.co/tKNPKd3JsC
— Zee News (@ZeeNews) June 29, 2023
ಸಂಪಾದಕೀಯ ನಿಲುವುಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದ ಮದರಸಾಗಳಲ್ಲಿಯೂ ಇಂತಹ ಅಪರಾಧಗಳು ಮೇಲಿಂದ ಮೇಲೆ ನಡೆಯುತ್ತಿವೆ. ಪ್ರಸಿದ್ಧ ಇಸ್ಲಾಮಿಕ್ ವಿದ್ವಾಂಸ ಆರಿಫ್ ಅಜಕಿಯಾ ಅವರ ಪ್ರಕಾರ, ಈಗ ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಮದರಸಾಗಳನ್ನು ಮುಚ್ಚುವ ಸಮಯ ಬಂದಿದೆ ! |