ಯೋಗ ಇದು ಜಗತ್ತಿನ ಆತ್ಮವಾಗಿದೆ ! – ಪ್ರಧಾನಿ ಮೋದಿ

ಜಗತ್ತಿನಾದ್ಯಂತ ೯ ನೇ ಅಂತರಾಷ್ಟ್ರೀಯ ಯೋಗ ದಿನ ಆಚರಣೆ !

ನವ ದೆಹಲಿ – ಭಾರತದ ನೇತೃತ್ವದಿಂದ ೨೧ ಜೂನ್ ೨೦೧೫ ರಿಂದ ಆರಂಭವಾಗಿರುವ ಅಂತಾರಾಷ್ಟ್ರೀಯ ಯೋಗ ದಿನವನ್ನು ಈ ವರ್ಷ ೯ ನೇ ಬಾರಿಗೆ ಆಚರಿಸಲಾಯಿತು. ಈ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕಾದ ಪ್ರವಾಸದಲ್ಲಿರುವುದರಿಂದ ಅವರು ಟ್ವಿಟರ್ ಮೂಲಕ ಒಂದು ವಿಡಿಯೋ ಸಂದೇಶ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು `ಯೋಗ ಇದು ಜಾಗತಿಕ ಆತ್ಮವಾಗಿದೆ. ಪ್ರತಿ ವರ್ಷ ಯೋಗ ದಿನದ ಪ್ರಯುಕ್ತ ನಾನು ನಿಮ್ಮೆಲ್ಲರೊಂದಿಗೆ ಒಂದಲ್ಲ ಒಂದು ಕಾರ್ಯಕ್ರಮದಲ್ಲಿ ಉಪಸ್ಥಿತನಿರುತ್ತೇನೆ. ವಿವಿಧ ಜವಾಬ್ದಾರಿಗಳಿಂದ ನಾನು ಈಗ ಅಮೆರಿಕದಲ್ಲಿದ್ದೇನೆ. ಇಂದು ಭಾರತೀಯ ಸಮಯದ ಪ್ರಕಾರ ಸಂಜೆ ೫.೩೦ ಗಂಟೆಗೆ ಯೋಗ ದಿನದ ಪ್ರಯುಕ್ತ ವಿಶ್ವ ಸಂಸ್ಥೆಯ ಮುಖ್ಯಾಲಯದಲ್ಲಿ ಒಂದು ದೊಡ್ಡ ಕಾರ್ಯಕ್ರಮ ನಡೆಯುವುದು. ನಾನು ಅದರಲ್ಲಿ ಸಹಭಾಗಿ ಆಗುತ್ತೇನೆ’, ಎಂದಿದ್ದಾರೆ.

೧. ಈ ವರ್ಷ ಅಂತಾರಾಷ್ಟ್ರೀಯ ಯೋಗ ದಿನದ ವಿಷಯವು, “ವಸುಧೈವ ಕುಟುಂಬಮ್” ಗಾಗಿ ಯೋಗ, ಹೀಗೆ ಇದೆ.

೨. ರಕ್ಷಣಾ ಸಚಿವರಾದ ರಾಜನಾಥ ಸಿಂಹ ಇವರು ಕೊಚ್ಚಿ (ಕೇರಳ) ಇಲ್ಲಿ ‘ಐ.ಎನ್.ಎಸ್. ವಿಕ್ರಾಂತ್’ ಈ ಯುದ್ಧ ನೌಕೆಯಲ್ಲಿ ಭಾರತೀಯ ನೌಕಾದಳದ ಸೈನಿಕರ ಜೊತೆಗೆ ಯೋಗ ಮಾಡಿದರು.

೩. ಲಡಾಕ್‌ನಲ್ಲಿ ಪೆಂಗ್ಗಾನ್ಸ್ ತ್ಸೋ ಸರೋವರದ ತೀರದಲ್ಲಿ ಭಾರತೀಯ ಸೈನ್ಯದ ಸೈನಿಕರು ಯೋಗಾಸನಗಳನ್ನು ಮಾಡಿದರು.

೪. ಜೂನ್ ೨೦ ರಂದು ವಿಶ್ವ ಸಂಸ್ಥೆಯ ಪ್ರಧಾನಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಇವರು, ”ಯೋಗ ಕೇವಲ ಶರೀರ ಮತ್ತು ಮನಸ್ಸು ಜೋಡಿಸುವುದು ಅಷ್ಟೇ ಅಲ್ಲ, ಅದು ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಜೋಡಿಸುತ್ತದೆ. ಯೋಗ ಇದು ಚಿಂತೆ ಕಡಿಮೆ ಮಾಡಿ ಮಾನಸಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ”, ಎಂದರು.

೫. ೨೭ ಸಪ್ಟೆಂಬರ್ ೨೦೧೪ ರಂದು ಮೊದಲಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಸಂಸ್ಥೆಯಲ್ಲಿ ಪ್ರತಿವರ್ಷ ಯೋಗ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸುವ ಪ್ರಸ್ತಾವನೆ ಮಂಡಿಸಿದರು. ಅದನ್ನು ಕೇವಲ ಮೂರು ತಿಂಗಳಲ್ಲಿ ಅಂಗೀಕರಿಸಲಾಯಿತು.

ಸಂಪಾದಕೀಯ ನಿಲುವು

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಗಾಗಿ ಹೇಳಿರುವ ಯೋಗಾಸನಗಳು ಎಂಬಂತೆ ಜಗತ್ತು `ಯೋಗ’ವನ್ನು ಸೀಮಿತ ದೃಷ್ಟಿಕೋನದಿಂದ ನೋಡುತ್ತದೆ. ಪ್ರತ್ಯಕ್ಷದಲ್ಲಿ ‘ಜೀವ ಮತ್ತು ಶಿವ ಇವರ ಮಿಲನವೆಂದರೆ ಯೋಗ’, ಅಂದರೆ ಈಶ್ವರಪ್ರಾಪ್ತಿ ಮಾಡಿಕೊಳ್ಳುವ ಪ್ರಯತ್ನವೆಂದರೆ ಯೋಗ, ಎಂಬ ಭಾರತೀಯ ಅಧ್ಯಾತ್ಮದ ಸರ್ವೋಚ್ಚ ಬೋಧನೆಯನ್ನು ಮುಂದೆ ಜಾಗತಿಕ ಮಟ್ಟದಲ್ಲಿ ಬೇರೂರುವುದಕ್ಕಾಗಿ ಪ್ರಧಾನಮಂತ್ರಿ ಮೋದಿ ಅವರು ಪ್ರಯತ್ನಿಸಬೇಕು, ಎಂದು ಅಪೇಕ್ಷೆ !