ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್ ನಲ್ಲಿ ಗುಜರಾತ್ ಸರಕಾರದ ಬೆಂಬಲ !

ಮಸೀದಿಯಲ್ಲಿರುವ ಬೋಂಗಾದ ಶಬ್ದವನ್ನು ನಿಯಂತ್ರಿಸಲು ನಾವು ಗಂಭೀರವಾಗಿ ಪ್ರಯತ್ನಿಸುತ್ತಿದ್ದೇವೆ !

ಕರ್ಣಾವತಿ (ಗುಜರಾತ್) – ಮಸೀದಿಗಳಲ್ಲಿ ಹಾಕಿರುವ ಭೋಂಗಾಗಳ ಶಬ್ದವನ್ನು ನಿಯಂತ್ರಿಸಲು ಗಂಭೀರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಔದ್ಯೋಗಿಕ, ವಸತಿ ಮತ್ತು ಇತರ ಕ್ಷೇತ್ರಗಳಲ್ಲಿ ಶಬ್ದದ ಬಗ್ಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಂಬಂಧಪಟ್ಟ ಇಲಾಖೆಗೆ ಆದೇಶಿಸಲಾಗಿದೆ, ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಗುಜರಾತ್ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಡಾ. ಧರ್ಮೇಂದ್ರ ಪ್ರಜಾಪತಿಯವರು ಸಲ್ಲಿಸಿರುವ ಈ ಅರ್ಜಿಯಲ್ಲಿ ಮಸೀದಿಗಳಲ್ಲಿ ಭೋಂಗಾವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

೧. ರಾಜ್ಯದ ಗೃಹ ಇಲಾಖೆಯ ಹೆಚ್ಚುವರಿ ಸಚಿವ ನಿಖಿಲ ಭಟ್ಟ ಇವರು ಸರಕಾರದ ಪರವಾಗಿ ನ್ಯಾಯಾಲಯದಲ್ಲಿ, ಒಂದು ಸಲಕ್ಕೆ ಮಾತ್ರ ಭೋಂಗಾ ಬಳಕೆಗೆ ಅವಕಾಶ ನೀಡಬಹುದು. ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಲಾಗಿದೆ. ನಾವು ಶಬ್ದ ಮಾಲೀನ್ಯದ ಮಿತಿಯನ್ನಿಡಲು ಅಭಿಯಾನವನ್ನು ಪ್ರಾರಂಭಿಸಿದ್ದೇವೆ.

೨. ಗಾಂಧಿನಗರದಲ್ಲಿರುವ ಜಕಾರಿಯಾ ಮಸೀದಿಯ ವಿರುದ್ಧ ದೂರು ದಾಖಲಾಗಿತ್ತು. ಈ ಕುರಿತು ಸರಕಾರ, ಅಧಿಕಾರಿಗಳು ಗಾಂಧಿನಗರಕ್ಕೆ ತೆರಳಿ ಈ ಮಸೀದಿಯನ್ನು ಪರಿಶೀಲಿಸಿ, ನಮಾಜ ಸಮಯದಲ್ಲಿ ಮಸೀದಿಯ ಬೋಂಗಾಗಳನ್ನು ಬಳಸುವಾಗ ಯಾವುದೇ ಅನುಚಿತ ಕೃತಿಯಾಗಲಿಲ್ಲ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

ಜನರಿಗೆ ಮಸೀದಿಯ ಬೋಂಗಾಗಳನ್ನು ನಿಷೇಧಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಬೇಕು, ಅಂದರೆ ಈ ಬೋಂಗಾಗಳಿಂದಾಗುವ ಶಬ್ದ ಮಾಲಿನ್ಯವಾಗಿದೆ. ಸರಕಾರವೇ ಅದನ್ನು ಗಮನಿಸಿ ತಡೆಯಬೇಕಿರುವಾಗ, ಜನರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಏಕೆ ಸಲ್ಲಿಸಬೇಕು ?