ಒಡಿಶಾ ರೈಲು ಅಪಘಾತ ಪ್ರಕರಣದಲ್ಲಿ ರೈಲ್ವೆಯ ಜೂನಿಯರ್ ಇಂಜಿನಿಯರ್ ಅಮೀರ್ ಖಾನ್ ನ ತನಿಖೆ

ಸಿಬಿಐನಿಂದ  ಅಮೀರ್ ಖಾನ್ ಮನೆಗೆ ಸೀಲ್ !

ಬಾಲಸೋರ (ಒಡಿಶಾ) – ಜೂನ್ 2 ರಂದು ರೈಲು ಅಪಘಾತದಲ್ಲಿ 292 ಜನರು ಸಾವನ್ನಪ್ಪಿದರು. ಈ ಅಪಘಾತದ ಕುರಿತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿದೆ. ಸಿಬಿಐ ‘ಸೋರೊ ಸೆಕ್ಷನ್ ಸಿಗ್ನಲ್’ನ ಜೂನಿಯರ್ ಇಂಜಿನಿಯರ್ ಅಮೀರ್ ಖಾನ್ ನ ಮನೆಗೆ ಸಿಬಿಐ ಬೀಗ ಜಡಿದಿದೆ. ಇಲ್ಲಿ ಆತ ತನ್ನ ಕುಟುಂಬದೊಂದಿಗೆ ಬಾಡಿಗೆಗೆ ವಾಸಿಸುತ್ತಿದ್ದನು.

ಅಪಘಾತದ ನಂತರ ಅಮೀರ್ ಖಾನ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ಈ ಅಪಘಾತದಲ್ಲಿ ‘ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಂ’ನಲ್ಲಿ ಕಿತಾಪತಿ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಬಹನಗಾ ರೈಲು ನಿಲ್ದಾಣದ ಸ್ಟೇಷನ್ ಮಾಸ್ಟರ್ ಸೇರಿದಂತೆ 5 ರೈಲ್ವೆ ನೌಕರರನ್ನು ತನಿಖೆ ನಡೆಸಲಾಗುತ್ತಿದೆ.

(ಸೌಜನ್ಯ – Oneindia News)